ಬೆಂಗಳೂರು: ಪಠ್ಯ ಪುಸ್ತಕ ಪರಿಷ್ಕರಣೆಯಲ್ಲಾಗಿರುವ ದೋಷದ ವಿರೋಧ ಇಂದು ಸಾಕಷ್ಟು ಜನತೆ ಬೀದಿಗೆ ಇಳಿದಿದ್ದಾರೆ. ಈ ಪಠ್ಯ ಪುಸ್ತಕಗಳನ್ನು ಮಕ್ಕಳಿಗೆ ನೀಡಕೂಡದು ಎಂದು ಒತ್ತಾಯಿಸಿದ್ದಾರೆ. ಇಂದು ಬೆಂಗಳೂರಿನ ಫ್ರಿಡಂ ಪಾರ್ಕ್ ನಲ್ಲಿ ಈ ಬೃಹತ್ ಪ್ರತಿಭಟನೆ ನಡೆದಿದೆ.
ಈ ವೇಳೆ ಜ್ಞಾನ ಪ್ರಕಾಶ್ ಸ್ವಾಮೀಜಿ ಮಾತನಾಡಿದ್ದು, ನಾವೆಲ್ಲ ತಪ್ಪು ಮಾಡಿದ್ದೇವೆ. ಅವರಿಗೆ ರಾಗಿ, ಭತ್ತ, ಎಣ್ಣೆ, ಮೆಟ್ಟು ಹೊಲಿದು ಕೊಟ್ಟಿದ್ದೇವೆ. ತುಪ್ಪ, ಗುಡಿ ಸೇರಿದಂತೆ ಎಲ್ಲವೂ ಮಾಡಿಕೊಟ್ಟೆವು. ನಾವು ಹೊರಗಡೆ ನಿಂತು ನೀವು ಮಹಾನ್ ಪೂಜ್ಯರು ಎಂದು ತಲೆ ಮೇಲೆ ಕೂರಿಸಿಕೊಂಡಿದ್ದಕ್ಕೆ, ನಮ್ಮ ತಲೆ ಮೇಲೆ ಕಾಲಿಟ್ಟಿದ್ದಾರೆ.
ಡಾಕ್ಟರ್ ರಾಜಕುಮಾರ್ ಅವರು ಕುವೆಂಪು ಬಗ್ಗೆ ಮಾತಾಡಿ ಎಂದಿದ್ದಕ್ಕೆ, ಕುವೆಂಪು ಅವರ ಬಗ್ಗೆ ಮಾತಾಡುವಷ್ಟು ನಾನು ಬೆಳಿದಿಲ್ಲ ಎಂದು ಹೇಳಿದ್ದರು. ಇವರೆಲ್ಲಾ ಕುವೆಂಪು ಅವರ ಬೂಟಿನ ದೂಳಿನ ಸಮವಿಲ್ಲ. ಬಸವಣ್ಣನವರ ಕಾಲಿನ ದೂಳಿನ ಸಮವಿಲ್ಲ. ಮೊದಲು ಶಾಲೆಯ ಗೋಡೆ ಮೇಲೆ ಗಾಂಜಾ ,ತಂಬಾಕು ನಿಷೇಧಿಸಲಾಗಿದೆ ಎಂದು ಬರೆಯುಲಾಗುತ್ತಿತ್ತು. ಇದರ ಅವಶ್ಯಕತೆವಿಲ್ಲ ಯಾಕೆಂದರೆ ಪಠ್ಯಪುಸ್ತಕಗಳಲ್ಲಿ ಗಾಂಜಾ ಅಫೀಮ್ ಎಂಬುಂತೆ ಕೋಮುವಾದಿ ತುಂಬಿದಿದ್ದಾರೆ.
ಶಾಲೆಗಳೇನು ನಿಮ್ಮ ಆರ್‌ಎಸ್‌ಎಸ್ ಶಾಖೆಗಳಾ. ಕುವೆಂಪು ಅವರಿಗೆ ಮಾಡಿದ ಅಪಮಾನ ಸಿಎಂ ಗೆ ಮಾಡಿದ ಅಪಮಾನ. ಪೊಲೀಸ್ ರು ಸಣ್ಣಪುಟ್ಟದಕ್ಕೆ ಸ್ವಯ ದೂರು ದಾಖಲು ಮಾಡ್ತಾರೆ. ಈಗ ಯಾಕೆ ಸುಮ್ಮನೆ ಇದ್ದೀರಾ. ಸ್ವಯಂ ದೂರು ದಾಖಲು ಯಾಕೆ ಮಾಡಿಲ್ಲ. ಸಿಎಂ ಇಲ್ಲ ಬಂದು ಪಠ್ಯಪುಸ್ತಕ ವಿತರಣೆ ಮಾಡಲ್ಲ. ಬರಗೂರು ರಾಮಚಂದ್ರಪ್ಪ ಅವರ ಪಠ್ಯಪುಸ್ತಕ ಮುಂದುವರಿಸುತ್ತೇವೆ ಎಂದು ಹೇಳಬೇಕು ಇಲ್ಲವಾದಲ್ಲಿ. ಎಲ್ಲಾ ಸ್ವಾಮೀಜಿಗಳೂ ಸಿಎಂ ನಿವಾಸದ ಎದುರ ಬಂದು ಕುಳಿತುಕೊಳ್ಳುತ್ತೇವೆ. ಪಠ್ಯಪುಸ್ತಕಕ್ಕೆ ಜನಿವಾರ ಹಾಕಬೇಡಿ. ನನಗೆ ಬ್ರಾಹ್ಮಣರ ಬಗ್ಗೆ ಗೌರವವಿದೆ. ನನ್ನ ಗುರುಗಳು ಬ್ರಾಹ್ಮಣರು. 3.8 ರಷ್ಟು ಇರುವವರು ಹೇಳಿದಂಗೆ ಕೇಳಲು ನಾವು ರೆಡಿಯಿಲ್ಲ. ಉಳಿದ ಸಮುದಾಯಗಳು ಇನ್ನೂ ಜೀವಂತವಾಗಿದ್ದೇವೆ