Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಜೂ.18 ರಂದು ಬೆಸ್ಕಾಂ ವ್ಯಾಪ್ತಿಯ 104 ಹಳ್ಳಿಗಳಲ್ಲಿ ವಿದ್ಯುತ್‌ ಅದಾಲತ್‌

Facebook
Twitter
Telegram
WhatsApp

ಬೆಂಗಳೂರು:  ಗ್ರಾಮೀಣ ಭಾಗದ ವಿದ್ಯುತ್‌ ಸಂಬಂಧಿತ ಸಮಸ್ಯೆಗಳ ಪರಿಹಾರ ಮತ್ತು ರಾಜ್ಯ ಸರಕಾರದ ಯೋಜನೆಗಳ ಕುರಿತು ಗ್ರಾಹಕರಿಗೆ ಮಾಹಿತಿ ನೀಡಲು  ʼವಿದ್ಯುತ್‌ ಅದಾಲತ್‌ʼ  ಬೆಸ್ಕಾಂ ವ್ಯಾಪ್ತಿಯ̇ 8 ಜಿಲ್ಲೆಗಳ  104 ಹಳ್ಳಿಗಳಲ್ಲಿ ಶನಿವಾರ (ಜೂನ್‌ 18) ನಡೆಯಲಿದೆ.

ಬೆಸ್ಕಾಂ ನ ಆಡಳಿತ ನಿರ್ದೇಶಕರಿಂದ ಹಿಡಿದು ಹಿರಿಯ ಅಧಿಕಾರಿಗಳು ವಿದ್ಯುತ್‌ ಅದಾಲತ್‌ ನಲ್ಲಿ ಖುದ್ದು ಭಾಗವಹಿಸಿ ಜನರ ಸಮಸ್ಯೆಗಳನ್ನು ಆಲಿಸಿ ಸ್ಥಳದಲ್ಲೇ ಪರಿಹಾರ ಸೂಚಿಸಲಿದ್ದಾರೆ. ಜತೆಗೆ ಕಾಲಮಿತಿಯಲ್ಲಿ ವಿದ್ಯುತ್‌ ಸಮಸ್ಯಗಳಿಗೆ ಪರಿಹಾರವನ್ನೂ  ಒದಗಿಸಲಿದ್ದಾರೆ.

ಗ್ರಾಮೀಣ ಭಾಗದ ಜನರ ವಿದ್ಯುತ್‌ ಸಮಸ್ಯೆಗಳಿಗೆ ಅಧಿಕಾರಿಗಳು ತಕ್ಷಣ ಸ್ಪಂದಿಸಬೇಕು ಎನ್ನುವ ಸದುದ್ದೇಶದಿಂದ ಪ್ರತಿ ತಿಂಗಳ ಮೂರನೇ ಶನಿವಾರ ವಿದ್ಯುತ್‌ ಅದಾಲತ್‌ ನಡೆಸಲು ಇಂಧನ, ಕನ್ನಡ ಮತ್ತು ಸಂಸ್ಕೃತಿ  ಸಚಿವ ವಿ. ಸುನಿಲ್‌ ಕುಮಾರ್‌ ಎಲ್ಲ ಎಸ್ಕಾಂಗಳಿಗೆ ಸೂಚಿಸಿದ್ದರು.

ವಿದ್ಯುತ್‌ ಸಂಬಂಧಿತ ಕುಂದು-ಕೊರತೆಗಳನ್ನು ಆಲಿಸಿ ಅದಕ್ಕೆ ಸ್ಥಳದಲ್ಲೇ ಪರಿಹಾರ ಸೂಚಿಸುವುದು ಅಥವ ನಿಗದಿತ ಕಾಲಮಿತಿಯೊಳಗೆ ನಿವಾರಿಸುವ ಉದ್ದೇಶದಿಂದ ಎಲ್ಲ ಎಸ್ಕಾಂಗಳಲ್ಲಿ ಅದಾಲತ್‌ ಏಕಕಾಲದಲ್ಲಿ ನಡೆಯಲಿದೆ. ಬೆಸ್ಕಾಂ ವ್ಯಾಪ್ತಿಯ 104 ಹಳ್ಳಿಗಳಲ್ಲಿ ಶನಿವಾರ ( ಜೂನ್‌ 18) ಅದಾಲತ್‌ ನಡೆಯಲಿದ್ದು, ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಬೆಸ್ಕಾಂ ನ ಮುಖ್ಯ ಪ್ರಧಾನ ವ್ಯವಸ್ಥಾಪಕ (ಆಪರೇಷನ್ಸ್‌ ) ಎಂ.ಎಲ್. ನಾಗರಾಜು ತಿಳಿಸಿದ್ದಾರೆ.

ಗ್ರಾಹಕರು ದಿನನಿತ್ಯ ಎದುರಿಸುತ್ತಿರುವ ವಿದ್ಯುತ್‌ ಸಮಸ್ಯೆಗಳಾದ ವಿದ್ಯುತ್‌ ಪೂರೈಕೆಯಲ್ಲಿನ  ವ್ಯತ್ಯಯ, ಬಿಲ್ಲಿಂಗ್‌ ಇನ್ನಿತರ ಸಮಸ್ಯೆಗಳನ್ನು  ಅದಾಲತ್‌ ನಲ್ಲಿ ಆಲಿಸಿ ಪರಿಹಾರ ಸೂಚಿಲಾಗುವುದು ಎಂದು ಬೆಸ್ಕಾಂನ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರತಿ ಹಳ್ಳಿಗಳ ವ್ಯಾಪ್ತಿಯ ಉಪ-ವಿಭಾಗಗಳಲ್ಲಿ ನಡೆಯುವ ವಿದ್ಯುತ್‌ ಅದಾಲತ್‌ ಗೆ ಹಾಜರಾಗುವ ಹಿರಿಯ ಅಧಿಕಾರಿಗಳು,ಆ ಹಳ್ಳಿಗೆ ಒದಗಿಸಿರುವ ವಿದ್ಯುತ್‌ ಪೂರೈಕೆ ಮೂಲಸೌಕರ್ಯಗಳು ಮತ್ತು ಆ ಭಾಗದ ಜನರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸಂಪೂರ್ಣ ಮಾಹಿತಿ ಹೊಂದಿರಬೇಕು ಎಂದು ಬೆಸ್ಕಾಂ ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿದೆ.

ವಿದ್ಯುತ್‌ ಅದಾಲತ್‌ ಸಭೆಯಲ್ಲಿ, ವಿದ್ಯುತ್‌ ಸುರಕ್ಷತೆ, ವಿದ್ಯುತ್‌ ಕಳ್ಳತನ ತಡೆ, ಜನಸ್ನೇಹಿ ವಿದ್ಯುತ್‌ ಸೇವೆಗಳು, ಸೌರ ವಿದ್ಯುತ್‌, ವಾಟ್ಸ್‌ ಆಪ್‌ ಸಹಾಯವಾಣಿ ಮತ್ತು ಸರಕಾರದ ಇನ್ನಿತರ ಯೋಜನೆಗಳ ಕುರಿತು ಗ್ರಾಹಕರಿಗೆ ಹಿರಿಯ ಅಧಿಕಾರಿಗಳು ಮಾಹಿತಿ ನೀಡಲಿದ್ದಾರೆ.

ಆನ್‌ ಲೈನ್‌ ಜನಸ್ನೇಹಿ ವಿದ್ಯುತ್‌ ಸೇವೆಗಳ ಯೋಜನೆಯ ಪ್ರಯೋಜನಗಳನ್ನು ಪಡೆಯಲು ಗ್ರಾಹಕರಿಗೆ ಅರಿವು ಮೂಡಿಸಲಾಗುವುದು ಎಂದು ಬೆಸ್ಕಾಂ ತಿಳಿಸಿದೆ.

ಈ ಅಭಿಯಾನವನ್ನು ಆದ್ಯತೆಯ ಮೇರೆಗೆ ತಾಲೂಕಿನ ಗಡಿ ಭಾಗದ ಹಳ್ಳಿಗಳಿಂದ ಆರಂಭಿಸಿ ಪ್ರತಿ ಹಳ್ಳಿಗಳಿಗೆ ವಿಸ್ತರಿಸಲಾಗುವುದು.  ಪ್ರತಿ ತಿಂಗಳ  ಅಭಿಯಾನದ ಮಾಹಿತಿಗಳನ್ನು ನಿಗದಿತ ನಮೂನೆಯಲ್ಲಿ ನಮೂದಿಸಿ ಮಾಹಿತಿಯನ್ನು ಸರಕಾರಕ್ಕೆ ಸಲ್ಲಿಸಲು ಸೂಚಿಸಲಾಗಿದೆ ಎಂದು ಬೆಸ್ಕಾಂ  ಪ್ರಕಟಣೆ ತಿಳಿಸಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಳ್ಳಕೆರೆ | ರೈತ ಆತ್ಮಹತ್ಯೆ

ಸುದ್ದಿಒನ್, ಚಳ್ಳಕೆರೆ, ಮೇ. 12 : ತಾಲೂಕಿನ ಬಾಲೇನಹಳ್ಳಿ ಗ್ರಾಮದ ಮೋಹನ್ ಕುಮಾರ್(36) ಎಂಬ ರೈತ ಬೆಳಗಾಗಿ ಮಾಡಿದ ಸಾಲವನ್ನು ತೀರಿಸಲಾಗದೆ ಭಾನುವಾರ ಬೆಳಗಿನ ಜಾವ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ

ಹೊಸದುರ್ಗ | ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಫೇಲ್,‌ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ

  ಸುದ್ದಿಒನ್, ಚಿತ್ರದುರ್ಗ, ಮೇ. 12  : ಇತ್ತಿಚೀಗಷ್ಟೆ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಚಿತ್ರದುರ್ಗ ಜಿಲ್ಲೆ 21ನೇ ಸ್ಥಾನ ಪಡೆದುಕೊಂಡಿದೆ. ಇತ್ತ ವಿದ್ಯಾರ್ಥಿನಿಯೊಬ್ಬಳು ಪರೀಕ್ಷೆಯಲ್ಲಿ ಫೇಲ್ ಆಗಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ

ಖ್ಯಾತ ಕಿರುತೆರೆ ನಟಿ ಪವಿತ್ರಾ ಜಯರಾಮ್ ಅಪಘಾತದಲ್ಲಿ ಸಾವು…!

ಬೆಂಗಳೂರು : ಇಂದು ತಾಯಂದಿರ ದಿನ. ಎಲ್ಲರೂ ತಮ್ಮ ತಾಯಂದಿರ ಫೋಟೋ ಹಾಕಿಕೊಂಡು ವಿಶ್ ಮಾಡುತ್ತಿದ್ದಾರೆ. ತಾಯಂದಿರಿಗೆ ಗಿಫ್ಟ್ ಕೊಟ್ಟು ಸಂಭ್ರಮಿಸುತ್ತಿದ್ದಾರೆ. ಆದರೆ ಈ ನಟಿಯ ಮಕ್ಕಳಿಗೆ ಆ ಯೋಗ ಇಲ್ಲ. ಅಮ್ಮನನ್ನು ತಬ್ಬಿ

error: Content is protected !!