ದೇಶದಲ್ಲಿ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ : ಆರಗ ಜ್ಞಾನೇಂದ್ರ

suddionenews
2 Min Read

 

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಭೇಟಿ ವಿಚಾರವಾಗಿ, ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ಮಾತನಾಡಿದ, ಗೃಹ ಸಚಿವ ಆರಗ ಜ್ಞಾನೇಂದ್ರ, 20 ರಂದು ಮೋದಿ ರಾಜ್ಯಕ್ಕೆ ಬರ್ತಾರೆ. ಪ್ರವೀಣ್ ಸೂದ್ , ಕಮಿಷನರ್ ಹಾಗೂ SPG ಜೊತೆಗೆ ಸ್ಥಳ ವಿಕ್ಷಣೆ ಮಾಡಿದ್ದೇನೆ. ಬೆಳಗ್ಗೆ 11 ಗಂಟೆಗೆ ಇಲ್ಲಿಗೆ ಬರ್ತಾರೆ. ಸಂಜೆ 5:30ಕ್ಕೆ ಮೋದಿ ಮೈಸೂರಿಗೆ ಹೋಗ್ತಾರೆ. ಭದ್ರತೆ ದೃಷ್ಟಿಯಿಂದ ಸ್ಥಳ ಪರಿಶೀಲನೆ ಮಾಡಿ ಚರ್ಚೆ ಮಾಡಿಕೊಂಡು ಬಂದಿದ್ದೇನೆ. ಮೋದಿ ರೋಡ್ ಶೋ ಬಗ್ಗೆ ಇನ್ನೂ ಫೈನಲ್ ಆಗಿಲ್ಲ ಎಂದಿದ್ದಾರೆ.

ಎಸಿಬಿ ದಾಳಿ ಬಗ್ಗೆ ಮಾತನಾಡಿದ ಗೃಹ ಸಚಿವರು, 21 ಅಧಿಕಾರಿಗಳ 80 ನಿವಾಸ ಮತ್ತು ಬೇರೆ ಬೇರೆ ಕಡೆ ದಾಳಿಯಾಗಿದೆ. 350 ಕ್ಕೂ ಹೆಚ್ಚು ಸಿಬ್ಬಂದಿ ದಾಳಿಯಲ್ಲಿ ಭಾಗಿಯಾಗಿದ್ದಾರೆ. ಒಟ್ಟಾರೆ ಶುದ್ದ ಆಡಳಿತವನ್ನ ನೀಡಲು ಭ್ರಷ್ಟಾಚಾರ ಮುಕ್ತ ಆಡಳಿತ ನೀಡಲು ಈ ರೀತಿ ರೈಡ್ ಗಳು ಆಗುತ್ತೆ. ಒಂದು ಸಾರಿ ದಾಳಿ ಆದ ಮೇಲೆ ಅಕೌಂಟ್ ಕೊಡಬೇಕಾಗುತ್ತೆ. ಅವ್ರ ಹಣ ಮತ್ತು ಅಸ್ತಿ ಎಲ್ಲಿಂದ ಬಂತು ಅಂತ ಸಾಬೀತು ಮಾಡಬೇಕಾಗುತ್ತೆ. ಅದಕ್ಕೆ ಸ್ವಲ್ಪ ಕಾಲಾವಕಾಶ ಬೇಕು. ಕೋರ್ಟ್ ಗೆ ಹೋಗಲು ಅವಕಾಶ ಇದೆ. ಹೀಗಾಗಿ ವರ್ಷಾನುಗಟ್ಟಲೆ ಆಗುತ್ತೆ. ಆದರೆ ಚುರುಕು ಮುಟ್ಟಿಸುವ ಕೆಲಸ ಎಸಿಬಿಯಿಂದ ಆಗುತ್ತೆ ಎಂದಿದ್ದಾರೆ.

ಅಗ್ನಿಪಥ್ ಗೆ ವಿರೋಧ ಪಕ್ಷಗಳ ವಿರೋಧ ವಿಚಾರವಾಗಿ ಪ್ರತಿಜ್ರಿಸಿ, ಭವಿಷ್ಯದಲ್ಲಿ ಏನೋ ಆಗುತ್ತೆ ಅಂತ ಇವತ್ತು ಬೆಂಕಿ ಹಚ್ಚುವ ಕೆಲಸ ಆಗಬಾರದು. ಈ ದೇಶದಲ್ಲಿ ಕೆಲವೊಂದು ವರ್ಗ ಇದೆ. ಏನು ಪರಿವರ್ತನೆ ಆಗೋಕೆ ಬಿಡಲ್ಲ. ಅವರು ಮಾಡುತ್ತಾ ಇರುವ ಕೆಲಸ ಇದು. ಇನ್ನು ಜಾರಿ ಆಗಿಲ್ಲ. ತುಂಬಾ ಒಳ್ಳೆ ಯೋಜನೆ ಅದು. ಇಸ್ರೇಲ್ ಅಂತ ದೇಶಗಳಲ್ಲಿ ಯುವಕರು ಕಡ್ಡಾಯವಾಗಿ ಮಿಲಿಟರಿ ತರಬೇತಿ ಪಡೆದಿರಬೇಕು. ನಮ್ಮ ದೇಶದಲ್ಲಿ ನಾಲ್ಕು ವರ್ಷ ತರಬೇತಿ ಕೊಡ್ತೀವಿ. ಒಂದಷ್ಟು ಸೌಲಭ್ಯ ಕೊಡ್ತೀವಿ. ಇದರಿಂದ ಶೇ 25 ರಷ್ಟು ಜನರನ್ನ ಸೇನೆಗೆ ಸೇರಿಸಿಕೊಳ್ತೀವಿ

ಅದೇ ರೀತಿ ತರಬೇತಿ ಪಡೆದವರನ್ನ ಪೊಲೀಸ್ ಇಲಾಖೆಗೆ ಸೇರಿಸಿಕೊಳ್ತೀವಿ.

ಇವತ್ತು ನಿರುದ್ಯೋಗ ತಾಂಡವ ಆಡುತ್ತಿದೆ. ಲಕ್ಷಗಟ್ಟಲೆ ಯುವಕರಿಗೆ ಉದ್ಯೋಗ ಸಿಗುತ್ತೆ. ಮುಂದಿನ ಭವಿಷ್ಯ ಇವತ್ತೆ ಹೇಳೋಕೆ ಆಗುತ್ತಾ. ಯಾವ ಆಧಾರದ ಮೇಲೆ ಪ್ರತಿಭಟನೆ ಮಾಡ್ತಾ ಇದ್ದಾರೆ. ಯಾವ ವರ್ಗ ಈ ಕೆಲಸ ಮಾಡ್ತಾ ಇದೆ ಅದರ ಮೇಲೆ ಕೇಂದ್ರ ಸರ್ಕಾರ ಕಣ್ಣಿಟ್ಟಿದೆ. ಕೇಂದ್ರ ಸರ್ಕಾರ ಯಾರನ್ನ ನಿರುದ್ಯೋಗಿ ಆಗಿ ಇಡಲು ಇಷ್ಟ ಪಡಲ್ಲ. ಇದರಿಂದ ಯಾವ ಶಕ್ತಿ ಇದೆ ಅಂತ ನೋಡ್ತಾ ಇದೆ. ಕೇಂದ್ರ ಸರ್ಕಾರದ ಮೇಲೆ ವ್ಯವಸ್ಥಿತವಾದ ಪಿತೂರಿ ನಡೆಯುತ್ತಿದೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *