ಭಾರತದ ಹಲವು ರಾಜ್ಯಗಳಲ್ಲಿ ಹಲವು ಸಂಪ್ರದಾಯಗಳಿರುತ್ತವೆ. ಕೆಲವೊಂದು ಕಡೆ ಆ ಸಂಪ್ರದಾಯಗಳು ಕಠಿಣ ಕೂಡ ಎನಿಸುತ್ತದೆ, ವಿಚಿತ್ರವಾದ ನಿಯಮಗಳು ಕೂಡ ಇರುತ್ತದೆ. ಅಂಥದ್ದೆ ನಿಯಮವೊಂದು ಇದೀಗ ಅನಾವರಣವಾಗಿದೆ. ಆ ಒಂದು ಹಳ್ಳಿಯಲ್ಲಿ ಚಪ್ಪಲಿಯನ್ನೆ ಹಾಕುವ ಹಾಗಿಲ್ಲ. ಅಷ್ಟೇ ಅಲ್ಲ ಹಾಕಿದರೆ ಶಿಕ್ಷೆ ಖಂಡಿತ.
ತಮಿಳುನಾಡಿನ ಅರಣ್ಯಪ್ರದೇಶದಲ್ಲಿರುವ ಸಣ್ಣ ಗ್ರಾಮವೆಂದರೆ ಅದು ವೆಲ್ಲಗವಿ ಗ್ರಾಮ. ಈ ಗ್ರಾಮದ ಪ್ರವೇಶ ದ್ವಾರದಲ್ಲಿ ಒಂದು ದೊಡ್ಡ ಆಲದ ಮರವಿದೆ. ಅಲ್ಲಿನ ಜಾಗವನ್ನು ಗ್ರಾನ ದೇವತೆಯಂತೆ ಪೂಜಿಸುತ್ತಾರೆ. ಎಲ್ಲರು ನಂಬುವ, ಆರಾಧಿಸುವ ಜಾಗವದು. ಹೀಗಾಗಿ ಊರಿನ ಒಳಗೆ ಯಾರು ಕೂಡ ಚಪ್ಪಲಿ ಧರಿಸುವಂತಿಲ್ಲ. ಎಷ್ಟೇ ಬಿಸಿಲಿದ್ದರು, ರಸ್ತೆಯಲ್ಲಿ ನಡೆಯಲು ಆಗದೆ ಹೋದರು ಚಪ್ಪಲಿ ಧರಿಸದೆ ನಡೆಯಲೇಬೇಕು. ಇದು ಅಲ್ಲಿನ ನಿಯಮ.
ಒಂದು ವೇಳೆ ನಿಯಮ ಮೀರಿದರೆ ಅಂತವರಿಗೆ ಶಿಕ್ಷೆಯನ್ನು ನೀಡಲಾಗುತ್ತದೆ. ಈ ವಿಚಾರದಲ್ಲಿ ಹಿರಿಯರಿಗೆ ಒಂದಷ್ಟು ವಿನಾಯಿತಿ ನೀಡಲಾಗಿದೆ. ಇದಷ್ಟೆ ಅಲ್ಲ ಈ ಗ್ರಾಮದಲ್ಲಿ ಯಾರು ಜೋರಾಗಿ ಮಾತನಾಡುವ ಹಾಗಿಲ್ಲ, ಸಂಗೀತ ಕೇಳುವ ಹಾಗಿಲ್ಲ, ರಾತ್ರಿ ಏಳು ಗಂಟೆಗೆಲ್ಲಾ ಮಲಗಲೇಬೇಕು. ಈ ನಿಯಮಗಳು ಯಾರಿಗೂ ಕಷ್ಟ ಎಂದೇ ಎನಿಸುವುದಿಲ್ಲವಂತೆ.