ಬಿಜೆಪಿಯ ಮಾಜಿ ವಕ್ತಾರೆ ನೀಡಿದ ಹೇಳಿಕೆಯಿಂದ ಭುಗಿಲೆದ್ದ ಹಿಂಸಾಚಾರ.. ಪೊಲೀಸರಿಗೂ ಗಾಯ..!

ರಾಂಚಿ: ಬಿಜೆಪಿಯ ವಕ್ತಾರೆಯಾಗಿದ್ದ ನೂಪೂರ್ ಶರ್ಮಾ ಪ್ರವಾದಿ ಮೊಹಮ್ಮದ್ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಈ ಹೇಳಿಕೆ ಸಾಕಷ್ಟು ವಿವಾದಕ್ಕೀಡಾಗಿತ್ತು. ಬಳಿಕ ಆಕೆಯನ್ನು ಬಿಜೆಪಿ ಅಮಾನತು ಮಾಡಿತ್ತು. ಆದ್ರೆ ಆಕೆ ನೀಡಿದ ಹೇಳಿಕೆ ಖಂಡಿಸಿ, ಇನ್ನು ಪ್ರತಿಭಟನೆ ನಡೆಯುತ್ತಲೆ ಇದೆ. ಹಿಂಸಾಚಾರ ಭುಗಿಲೆದ್ದಿದೆ.

ನೂಪೂರ್ ಶರ್ಮಾ ಹೇಳಿಕೆಯನ್ನು ಖಂಡಿಸಿ, ಇಂದು ರಾಂಚಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಪ್ರತಿಭಟನಾಕಾರರು ಹಲವು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಈ ಘಟನೆಯಲ್ಲಿ ಪೊಲೀಸರಿಗೂ ಗಾಯವಾಗಿದೆ ಎನ್ನಲಾಗಿದೆ.

ನೂಪೂರ್ ಶರ್ಮಾ ನೀಡಿದ ಹೇಳಿಕೆಗೆ ಹಲವೆಡೆ ಅಕ್ರೋಶ ವ್ಯಕ್ತವಾಗುತ್ತಿದೆ. ಪ್ರತಿಭಟನೆಗಳು ನಡೆಯುತ್ತಿದ್ದು, ರಾಂಚಿಯಲ್ಲಿ ಹಿಂಸಾಚಾರ ಭುಗಿಲೆದ್ದಿದೆ.

Share This Article
Leave a Comment

Leave a Reply

Your email address will not be published. Required fields are marked *