ಬೆಂಗಳೂರು: ರಾಜ್ಯಸಭೆಗೆ ಜೆಡಿಎಸ್ ನಿಂದ ಅಭ್ಯರ್ಥಿ ಸ್ಥಾನಕ್ಕೆ ಸ್ಪರ್ಧಿಸಿರುವ ಕುಪೇಂದ್ರ ರೆಡ್ಡಿ ದೇವೇಗೌಡ್ರ ಕುಟುಂಬಕ್ಕೆ ಕೋಟಿ ಕೋಟಿ ಸಾಲ ಕೊಟ್ಟಿದ್ದಾರೆ ಎಂಬುದು ಇತ್ತೀಚೆಗಷ್ಟೇ ವಿಚಾರ ರಿವಿಲ್ ಆಗಿತ್ತು. ಇದೀಗ ಯಾರ್ಯಾರಿಗೆ ಎಷ್ಟೆಷ್ಟು ಕೋಟಿ ಕೊಟ್ಟಿದ್ದಾರೆ ಎಂಬುದು ಚುನಾವಣೆಗೆ ಸಲ್ಲಿಸಿದ ಅಫಿಡೆವಿಟ್ ನಲ್ಲಿ ದಾಖಲಾಗಿದೆ.
ದಾಖಲಾತಿ ಸಲ್ಲಿಕೆಯ ಪ್ರಕಾರ, ಭವಾನಿ ರೇವಣ್ಣನಿಗೆ ಎರಡು ಕೋಟಿ, ಪ್ರಜ್ವಲ್ ರೇವಣ್ಣನಿಗೆ ಒಂದು ಕೋಟಿ, ಹೆಚ್ ಡಿ ರಮೇಶ್ 3.90 ಕೋಟಿ, ಸೂರಜ್ 5.80 ಕೋಟಿ, ಚನ್ನಾಂಬಿಕ ಫಿಲಂಸ್ 4 ಕೋಟಿ, ಜಮೀರ್ ಅಹ್ಮದ್ 1 ಕೋಟಿ, ಸಿ ಎಸ್ ಪುಟ್ಟರಾಜು 1.5 ಕೋಟಿ ಸಾಲವನ್ನು ನೀಡಿರುವುದನ್ನು ದಾಖಲಾತಿಯನ್ನು ನಮೂದಿಸಿದ್ದಾರೆ.
ಈ ಸಂಬಂಧ ಮಾಜಿ ಸಚಿವ ಹೆಚ್ ಡಿ ರೇವಣ್ಣ ಮಾತನಾಡಿದ್ದು, ಅವರ ಬಳಿ ಸಾಲ ತೆಗೆದುಕೊಳ್ಳಬಾರದು ಅಂತ ಏನಾದ್ರು ನಿಯಮವಿದೆಯಾ..? ಆ ಸಾಲ ತೆಗೆದುಕೊಂಡಿದ್ದು ನಾಲ್ಕು ವರ್ಷಗಳ ಹಿಂದೆ. ಅದು ಚುನಾವಣೆಯ ವಿಚಾರಕ್ಕೆ ಕದ್ದು ಮುಚ್ಚಿ ತಗೊಂಡಿಲ್ಲ. ಎಲ್ಲವನ್ನು ಅಕೌಂಟ್ ಮೂಲಕವೇ ತೆಗೆದುಕೊಂಡಿದ್ದೇವೆ ಎಂದಿದ್ದಾರೆ.