ಇತ್ತೀಚಿನ ದಿನಗಳಲ್ಲಿ ಎಲ್ಲಾ ಬೆಲೆ ಗಗನಕ್ಕೇರುತ್ತಿರುವುದನ್ನು ಕಂಡ ಸಾಮಾನ್ಯ ಜನ ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಅಗತ್ಯ ಬೆಲೆ ಹೀಗೆ ಹೆಚ್ಚಾಗುತ್ತಿದ್ದರೆ ಮುಂದಿನ ಜೀವನ ಸ್ಥಿತಿ ಭಯಂಕರವಾಗಿರಲಿದೆ ಎಂಬ ಆತಂಕ ಕಾಡುತ್ತಿದೆ. ಇದೀಗ ಆರ್ಬಿಐ ಕೂಡ ಬೆಳ್ಳಂಬೆಳಗ್ಗೆಯೇ ಶಾಕ್ ನೀಡಿದೆ.
ಆರ್ಬಿಐ ತನ್ನ ಬೆಂಚ್ ಮಾರ್ಕ್ ಪಾಲಿಸಿಯ ರೆಪೋ ದರವನ್ನು 50 ಬೇಸಿಸ್ ಪಾಯಿಮನಟ್ ಗಳಿಗೆ ಏರಿಕೆ ಮಾಡಿದೆ. ಈ ಮೂಲಕ ರೆಪೋ ದರ 4.80% ಕ್ಕೆ ಏರಿಕೆಯಾಗಿದೆ. ರೆಪೋ ದರ ಎಂದರೆ ಆರ್ಬಿಐ ಇತರೆ ಬ್ಯಾಂಕ್ ಗಳಿಗೆ ನೀಡುವ ಸಾಲದ ಮೇಲೆ ವಿಧಿಸುವ ದರ. ರೆಪೋ ರೇಟ್ ಹೆಚ್ಚಾದರೆ ಬ್ಯಾಂಕ್ ಗಳಲ್ಲಿ ಬಡ್ಡಿ ದರ ಹೆಚ್ಚಳವಾಗುತ್ತದೆ. ಈ ಮೂಲಕ ತಿಂಗಳಲ್ಲಿ ಕಟ್ಟುವ ಇಎಂಐ ದರ ಕೂದ ಹೆಚ್ಚಳವಾಗುತ್ತದೆ.
ಈ ಸಂಬಂಧ ಸುದ್ದಿಗೋಷ್ಟಿ ನಡೆಸಿದ ಗವರ್ನರ್ ಶಕ್ತಿಕಾಂತ್ ದಾಸ್, ದೇಶದಲ್ಲಿ ಹಣದುಬ್ಬರ ನಿರಂತರವಾಗಿ ಹೆಚ್ಚಾಗುತ್ತಿದೆ. ಇದರ ಅಗತ್ಯ ಅನಿವಾರ್ಯವಾಗಿದೆ. ಸಾಲದ ಹರಿವನ್ನು ನಿಯಂತ್ರಿಸುವ ಉದ್ದೇಶದಿಂದ ಈ ನಿಯಮ ಅಗತ್ಯವಾಗಿದೆ ಎಂದಿದ್ದಾರೆ. ಆರ್ಬಿಐ ಇದು ಎರಡನೇ ಬಾರಿ ಬೇಸಿಸ್ ಪಾಯಿಂಟ್ ಹೆಚ್ಚಿಸಿದೆ. ಕಳೆದ ಮೇ ತಿಂಗಳಲ್ಲಿ 40 ಬೇಸಿಸ್ ಪಾಯಿಂಟ್ ಹೆಚ್ಚಿಸಿತ್ತು.