ಬೆಂಗಳೂರು: ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಕಾಂಗ್ರೆಸ್ ನ ಬೆಂಬಲ ಕೋರಿರುವ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮಾತನಾಡಿದ್ದು, ನಾನೊಬ್ಬ ಕಾರ್ಯಕರ್ತ. ಅವರಲ್ಲಿ ಸ್ವಾತಂತ್ರ್ಯವಾಗಿ ಏನು ಬೇಕಾದರೂ ಮಾತನಾಡಬಹುದು. ನಾನು ಮಾತಾಡಬೇಕಾದರೆ ಪಕ್ಷದ ನಾಯಕರುಗಳು, ವರಿಷ್ಠರು ಎಲ್ಲಾ ಸೇರಿ ಮಾತನಾಡಬೇಕು.
ಕುಮಾರಣ್ಣನವರು ಸರ್ಕಾರ ಹೋಗಿದ್ದು, ತಾನು ಹೊರಗಡೆ ದೇಶದಲ್ಲಿ ಉಳಿದುಕೊಂಡಿದ್ದು, ಇಬ್ರಾಹಿಂ ಮಾತನಾಡಿದ್ದು ಇವೆಲ್ಲಾ ಕೂಡ ನಮ್ಮ ಕಣ್ಣುಗಳಲ್ಲಿ ಇದೆ. ಅದೆಲ್ಲವನ್ನು ನಾನು ವ್ಯಖ್ಯಾನ ಮಾಡುವುದಕ್ಕೆ ಹೋಗುವುದಿಲ್ಲ. ರಾಜಕೀಯದಲ್ಲಿ ಯಾವುದೂ ಶಾಶ್ವತವೂ ಇಲ್ಲ. ಅದನ್ನು ನಾನು ಒಪ್ಪುತ್ತೇನೆ. ಕಾಂಗ್ರೆಸ್ ಎಂದರೆ ನಾನೊಬ್ಬ ಅಲ್ಲ ಇಡೀ ನಮ್ಮ ಪಕ್ಷದ ನಾಯಕರುಗಳೆಲ್ಲ ಚರ್ಚೆ ಮಾಡಬೇಕು, ಅವರು ಚರ್ಚೆ ಮಾಡಿದ್ದಾರೆ. ನಿನ್ನೆ ಸುರ್ಜೆವಾಲ ಅವರು ಮನವಿ ಮಾಡಿದ್ದಾರೆ. ಸುರ್ಜೇವಾಲ ಮನವಿ ಎಂದರೆ ವರಿಷ್ಠರು ಮನವಿ ಮಾಡಿಕೊಂಡಂತೆ.
ಪಾಲಿಟಿಕ್ಸ್ ಈಸ್ ಎ ಆರ್ಟ್ ಆಫ್ ಪಾಸಿಬಲಿಟಿ. ನುಡಿದಂಗೆ ಯಾರಾದ್ರೂ ನಡೆದುಕೊಂಡಿದ್ದರೆ ಮಾತನಾಡಬಹುದು. ನಮ್ಮ ಸರ್ಕಾರ, ನಾವೂ 37 ಜನ ಇದ್ದದ್ದಕ್ಕೆ ಮುಖ್ಯಮಂತ್ರಿ ಸ್ಥಾನಕ್ಕೆ ಸಪೋರ್ಟ್ ಮಾಡಿದ್ದೀವಿ. ನನ್ನ ವೈಯಕ್ತಿಕ ವಿಚಾರ ಬೇರೆ. ಪಕ್ಷ ತುಂಬಾ ಮುಖ್ಯ. ಅವರಿಗೆ ಹೇಗೆ ಸ್ಚಾಭಿಮಾನ ಹೇಗೆ ಕಾಡುತ್ತಾ ಇದೆ. ಚುನಾವಣೆಗೆ ಅರ್ಜಿ ಹಾಕುವುದಕ್ಕೂ ಮುಂಚಿತವಾಗಿ ಕಾಂಗ್ರೆಸ್ ನವರ ಜೊತೆ ಮಾತುಕತೆ ಮಾಡಿ, ಬಂದು ತಿಳಿದುಕೊಂಡು ನಾವೀಗೆ ಇರ್ತೀವಿ ಅಂತ ಹೇಳಿ ವರಿಷ್ಟರ ಬಳಿ ಮಾತನಾಡಿ ಅವರು ಏನು ಹೇಳುತ್ತಾರೊ ಅದನ್ನು ಕೇಳುತ್ತೇವೆ ಎಂದಿದ್ದಾರೆ.