ಮುಂಬೈ: ನೋಟಿನಲ್ಲಿ ಮಹಾತ್ಮಗಾಂಧಿ ಫೋಟೋ ತೆಗೆದು, ಟ್ಯಾಗೂರ್ ಫೋಟೋ ಹಾಕಲಿದೆ ಎಂದು ಆರ್ಬಿಐ ಬಗ್ಗೆ ಸುದ್ದಿಯೊಂದು ಹರಿದಾಡುತ್ತಿತ್ತು. ಇದೀಗ ಅದಕ್ಕೆ ಆರ್ಬಿಐ ಸ್ಪಷ್ಟ ಉತ್ತರ ನೀಡಿದೆ. ಕರೆನ್ಸಿ ನೋಟುಗಳಲ್ಲಿ ಮಹಾತ್ಮ ಗಾಂಧೀಜಿ ಚಿತ್ರವನ್ನು ಬದಲಾಯಿಸಿ, ಬೇರೆಯವರ ಚಿತ್ರವನ್ನು ಬಳಸುವ ಯಾವುದೇ ಪ್ರಸ್ತಾವ ಇಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಸೋಮವಾರ ಸ್ಪಷ್ಟಪಡಿಸಿದೆ.
Several media reports claim that @RBI is planning to introduce new currency notes with the photos of Dr. APJ Abdul Kalam & Rabindranath Tagore#PIBFactCheck
▶️This Claim is #FAKE
▶️@RBI clarifies no change in existing currency notes
🔗https://t.co/U1ULRQ8cKB pic.twitter.com/5B5u91GpPr
— PIB Fact Check (@PIBFactCheck) June 6, 2022
ಹಾಲಿ ಇರುವ ಕರೆನ್ಸಿ ನೋಟುಗಳಲ್ಲಿ ಕೆಲವು ಬದಲಾವಣೆಗಳನ್ನು ತರುವ ಬಗ್ಗೆ ಆರ್‌ಬಿಐ ಆಲೋಚನೆ ನಡೆಸುತ್ತಿದ್ದು, ಮಹತ್ಮ ಗಾಂಧೀಜಿ ಚಿತ್ರಕ್ಕೆ ಬದಲಾಗಿ ರವೀಂದ್ರನಾಥ ಟ್ಯಾಗೋರ್ ಮತ್ತು ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಚಿತ್ರವನ್ನು ಬಳಸುವ ಬಗ್ಗೆ ಆರ್‌ಬಿಐ ಪರಿಶೀಲನೆ ನಡೆಸುತ್ತಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಆದರೆ, ಅಂತಹ ಯಾವ ಪ್ರಸ್ತಾವವೂ ರಿಸರ್ವ್ ಬ್ಯಾಂಕ್ ಮುಂದೆ ಇಲ್ಲ’ ಎಂದು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.
ಕೆಲವು ನಿರ್ದಿಷ್ಟ ಮುಖಬೆಲೆಯ ನೋಟುಗಳಲ್ಲಿ ಗಾಂಧೀಜಿ ಚಿತ್ರದ ಜೊತೆಗೆ ಟ್ಯಾಗೋರ್ ಮತ್ತು ಕಲಾಂ ಭಾವಚಿತ್ರವನ್ನೂ ಬಳಸುವ ಬಗ್ಗೆ ಹಣಕಾಸು ಸಚಿವಾಲಯ ಮತ್ತು ಆರ್‌ಬಿಐ ಆಲೋಚನೆ ನಡೆಸುತ್ತಿವೆ ಎಂದು ಕೂಡ ವರದಿಯಾಗಿತ್ತು.