ಸಣ್ಣಪುಟ್ಟ ಮನಸ್ತಾಪ ಇಂಥ ಸಮಯದಲ್ಲು ಬಿಡಬೇಕು : ಸಿದ್ದರಾಮಯ್ಯಗೆ ರೇವಣ್ಣ ಮನವಿ

ಹಾಸನ: ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗೇನೆ ಬೆಂಬಲ ನೀಡಿ ಎಂದು ಜೆಡಿಎಸ್ ನಿಯೋಗ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿತ್ತು. ಆದರೆ ಏನು ಪ್ರಯೋಜನವಾಗಿಲ್ಲ. ಕಾಂಗ್ರೆಸ್ ತಮ್ಮ ಎರಡನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿಯೇ ಬಿಟ್ಟಿದೆ. ಜೂನ್ 10ಕ್ಕೆ ನಡೆಯುವ ಚುನಾವಣೆಗೆ ಇನ್ನು ಕೀಡ ಜೆಡಿಎಸ್ ಪ್ರಯತ್ನ ನಡೆಸುವ ಸಾಧ್ಯತೆ ಇದೆ. ಈ ಬಗ್ಗೆ ಮಾತನಾಡಿರುವ ಹೆಚ್ ಡಿ ರೇವಣ್ಣ, ನಂಗೆ ಈ ಬಗ್ಗೆ ಎಲ್ಲಾ ಗೊತ್ತಿಲ್ಲ ಕಾಂಗ್ರೆಸ್ ಮುಖಂಡರನ್ನೇ ಕೇಳಿ ಎಂದಿದ್ದಾರೆ.

ಸಿದ್ದರಾಮಯ್ಯನವರಿಗೂ ಡಿಕೆ ಶಿವಕುಮಾರ್ ಅವರಿಗೂ ಹೇಳುತ್ತೇನೆ. ಖರ್ಗೆ ಸಾಹೇಬರಿಗೂ ಮನವಿ ಮಾಡುತ್ತೇನೆ. ದಯವಿಟ್ಟು ಬಿಜೆಪಿಯನ್ನು ದೂರ ಇಡಬೇಕು ಎಂಬ ಭಾವನೆ ಇದ್ರೆ, ಸಣ್ಣ ಪುಟ್ಟದ್ದು ಏನೇ ಇರಲಿ. ರಾಜಕಾರಣದಲ್ಲಿ ಇದೆಲ್ಲ ಇದ್ದೆ ಇರುತ್ತೆ. ಕುಮಾರಸ್ವಾಮಿ ಅವರಿಗೂ ಮನವಿ ಮಾಡುತ್ತೇನೆ.

ಇವತ್ತು ನಾವೂ ಕೋಮುವಾದಿಗಳನ್ನು ದೂರ ಇಡಬೇಕು. ಆ ದೃಷ್ಟಿಯಿಂದ ಒಟ್ಟಾಗಿ ರಾಜ್ಯಸಭೆಯಲ್ಲಿ ನಮ್ಮ ಅಭ್ಯರ್ಥಿ ಕುಪೇಂದ್ರ ರೆಡ್ಡಿಗೆ ಬೆಂಬಲ ನೀಡಿ ಎಂದು ಮತ್ತೊಮ್ಮೆ ಕೇಳಿಕೊಳ್ಳುತ್ತೇನೆ. ಸಣ್ಣ ಪುಟ್ಟದ್ದೆಲ್ಲಾ ಇರುತ್ತೆ. ಈ ಇದರಲ್ಲಿ ಅದನ್ನೆಲ್ಲಾ ಬಿಟ್ಟಾಕಬೇಕು. ದೇವೇಗೌಡ ಅವರು ಹೇಳಿದ್ದಾರೆ. ರಾಜಕೀಯ ದ್ವೇಷ ಇಟ್ಟುಕೊಳ್ಳಬಾರದು. ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಗೆ ಕೋಮುವಾದಿಗಳನ್ನು ದೂರ ಇಡಬೇಕೆಂಬ ಭಾವನೆ ಇದೆ. ನಾವೆಲ್ಲಾ ಒಟ್ಟಾಗಿ ಮಾಡೋಣಾ. ಒಂದು ಪ್ರಾದೇಶಿಕ ಪಕ್ಷ ಉಳಿದುಕೊಳ್ಳಲಿ. ಯಾವತ್ತಾದರೂ ಒಂದಿನ ಉಪಯೋಗಕ್ಕೆ ಬರ್ತೀವಿ ಎಂದಿದ್ದಾರೆ.

Leave a Reply

Your email address will not be published. Required fields are marked *

error: Content is protected !!