ಕೊಪ್ಪಳ: ಇತ್ತಿಚಿನ ಅಭಿವೃದ್ಧಿ ಅನ್ನೋದು ಕೆಲವೊಂದು ಕಡೆ ನೆಲಕಚ್ಚುತ್ತಿದೆ. ಇತ್ತಿಚೆಗೆ ಮಂಗಳೂರಿನ ತೇಲುವ ಸೇತುವೆಯೂ ಉದ್ಘಾಟನೆಯಾದ ಕಡಿಮೆ ಸಮಯದಲ್ಲಿ ನೆಲಸಮವಾಗಿತ್ತು. ಇದೀಗ ಕೊಪ್ಪಳದಲ್ಲಿ ನಿರ್ಮಾಣವಾದ ಸೇತುವೆ ವಿಚಾರದಲ್ಲಿ ಕೂಡ ಇಂಥದ್ದೇ ಸ್ಥಿತಿ ನಿರ್ಮಾಣವಾಗಿದೆ.
ಜೂನ್ 2 ರಿಂದ ರಾಜ್ಯದಲ್ಲಿ ಮುಂಗಾರು ಮಳೆ ಆರಂಭವಾಗಿದೆ. ಸುರಿದ ಜೋರು ಮಳೆಗೆ ಅಳವಂಡಿ ಸಮೀಪ ನಿರ್ಮಾಣ ಮಾಡಿದ್ದ ಕವಲೂರು-ಹಂದ್ರಾಳ ಸಮೀಪದ ಕಾಂಕ್ರಿಟ್ ರಸ್ತೆ ಕಿತ್ತುಕೊಂಡು ಹೋಗಿದೆ. ಕವಲೂರಿನ ಹಂದ್ರಾಳಿಂದ ಕೊಪ್ಪಳಕ್ಕೆ ತೆರಳಲು ಅನುಕೂಲವಾದಂತ ಸಂಪರ್ಕ ಮಾರ್ಗ ಇದಾಗಿತ್ತು. ಈ ರಸ್ತೆ ನಿರ್ಮಾಣ ಮಾಡಿ ಇನ್ನು ಹದಿನೈದು ದಿನವಷ್ಟೇ ಆಗಿತ್ತು. ಆದರೆ ಒಮ್ಮೆ ಸುರಿದ ಮಳೆಗೇನೆ ಸಂಪೂರ್ಣವಾಗಿ ಕಿತ್ತು ಹೋಗಿದೆ.
ಸೇತುವೆ ಅಪಾಯಕಾರಿ ಸ್ಥಿತಿಯಲ್ಲಿದೆ. ವಿದ್ಯಾರ್ಥಿಗಳು, ಜನರು ಓಡಾಡಲು ಸಾಕಷ್ಟು ಕಷ್ಟಪಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇನ್ನು ರೈತರು ತಮ್ಮ ಕೃಷಿ ಭೂಮಿಗೆ ಹೋಗುವುದಕ್ಕೆ ಎಂಟತ್ತು ಕಿಲೋ ಮೀಟರ್ ಸುತ್ತಿಕೊಂಡು ಬರಬೇಕಾದ ಸ್ಥಿತಿ ಇದೆ. ಈಗ ಸಂಪರ್ಕಕ್ಕೆಂದು ಮಾಡಿದ್ದ ಕಾಂಕ್ರಿಟ್ ರಸ್ತೆಯೂ ಅಧೋಗತಿಯಾಗಿದೆ. ಈ ಸಂಬಂಧ ಸ್ಥಳೀಯ ಶಾಸಕ ರಾಘವೇಂದ್ರ ಹಿಟ್ನಾಳ್ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ. ಹಾಗೆ ಅಧಿಕಾರಿಗಳಿಗೂ ಕ್ಲಾಸ್ ತೆಗೆದುಕೊಂಡಿದ್ದಾರೆ.