ಚಿತ್ರದುರ್ಗ: ಪೂರ್ವಿಕರ ತ್ಯಾಗದ ಕಾರಣ ಸನಾತನ ಸಂಸ್ಕೃತಿ ಇನ್ನು ಉಳಿದಿದೆ ಎಂದು ವಿಧಾಸನಭಾಧ್ಯಕ್ಷ ವಿಶ್ವೇಶ್ವರಹೆಗಡೆ ಕಾಗೇರಿ ಹೇಳಿದರು.
ಗೋನೂರು ಸಮೀಪವಿರುವ ರಾಜರಾಜೇಶ್ವರಿ ದೇವಸ್ಥಾನಕ್ಕೆ ಮಂಗಳವಾರ ಭೇಟಿ ನೀಡಿದ ಅವರು ಪತ್ರಿಕೆಯೊಂದಿಗೆ ಮಾತನಾಡುತ್ತ ಭಾರತೀಯ ಸನಾತನ ಹಿಂದೂ ಧರ್ಮ ನಮ್ಮದು. ಹಿರಿಯರ ತ್ಯಾಗ ಬಲಿದಾನಗಳ ಕಾರಣ ಇನ್ನು ಈ ಸಂಸ್ಕೃತಿ ಉಳಿದುಕೊಂಡಿದೆ. ಹಿಂದೂಗಳಲ್ಲಿ ಧರ್ಮ ಜಾಗೃತಿಯಾಗುತ್ತಿರುವುದು ಸ್ವಾಗತಾರ್ಹ.
ದೇವರ ಕೆಲಸ ಎಂದರೆ ಶ್ರದ್ದಾಭಕ್ತಿಯಿಂದ ಮಾಡಬೇಕು. ಈ ದೇವಸ್ಥಾನ ದಕ್ಷಿಣ ಕನ್ನಡದಲ್ಲಿರುವ ದೇವಸ್ಥಾನಗಳ ಮಾದರಿಯಲ್ಲಿ ಭವ್ಯವಾಗಿ ನಿರ್ಮಾಣಗೊಂಡಿದೆ. ಕುಟುಂಬ ವರ್ಗ ಹಾಗೂ ಸ್ಥಳೀಯರ ಸಹಕಾರದಿಂದ ಗುಡ್ಡದ ಮೇಲೆ ಸುಂದರ ಪರಿಸರದಲ್ಲಿ ರಾಜರಾಜೇಶ್ವರಿ ದೇವಸ್ಥಾನವನ್ನು ನಿರ್ಮಾಣ ಮಾಡಿರುವುದು ಮನಸ್ಸಿಗೆ ಖುಷಿ ಕೊಡುತ್ತದೆ. ಮುಂದೆ ಇದೊಂದು ಆಧ್ಯಾತ್ಮಿಕ ಕೇಂದ್ರವಾಗಲಿದೆ ಎಂದರು.
ರಾಜರಾಜೇಶ್ವರಿ ದೇವಸ್ಥಾನ ಟ್ರಸ್ಟ್ನ ಅಧ್ಯಕ್ಷ ನಾಗರಾಜ್‌ಭಟ್, ಆರ್ಯವೈಶ್ಯ ಸಂಘದ ಕಾಶಿವಿಶ್ವನಾಥಶೆಟ್ಟಿ, ಮಾರುತಿ ಮೋಹನ್, ರಾಜೀವಲೋಚನ ನರಸಿಂಹಮೂರ್ತಿ, ಸುಭಾಷ್, ರಾಜೇಶ್ ಇನ್ನು ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.