Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಪಠ್ಯ ಮರು ಪರಿಷ್ಕರಣ ಸಮಿತಿಯನ್ನು ಕೂಡಲೇ ರದ್ದುಪಡಿಸಿ : ನಾರಾಯಣಗೌಡ ಬಣದ ಕರವೇ ಪ್ರತಿಭಟನೆ

Facebook
Twitter
Telegram
WhatsApp

ಚಿತ್ರದುರ್ಗ, (ಮೇ.31) :  ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯ ಮರು ಪರಿಷ್ಕರಣ ಸಮಿತಿಯನ್ನು ಸರ್ಕಾರ ಕೂಡಲೇ ರದ್ದುಪಡಿಸಿ ಹಿಂದಿನ ವರ್ಷದ ಪಠ್ಯವನ್ನೇ ಮಕ್ಕಳಿಗೆ ವಿತರಣೆ ಮಾಡುವಂತೆ ಆಗ್ರಹಿಸಿ ನಾರಾಯಣಗೌಡ ಬಣದ ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆಯನ್ನು ನಡೆಸಿತು.

ರಾಜ್ಯ ಸರ್ಕಾರವು ಪ್ರೊ.ಬರಗೂರು ರಾಮಚಂದ್ರಪ್ಪರವರ ನೇತೃತ್ವದ ಪಠ್ಯ ಪರಿಷ್ಕರಣ ಸಮಿತಿ ಸಿದ್ದಪಡಿಸಿದ ಶಾಲಾ ಪಠ್ಯ ಪುಸ್ತಕಗಳನ್ನು ತುರಾತುರಿಯಲ್ಲಿ ಮರು ಪರಿಷ್ಕರಿಸಲು ರೋಹಿತ್ ಚಕ್ರವರ್ತಿ ಎಂಬುವವರ ನೇತೃತ್ವದಲ್ಲಿ ಪಠ್ಯ ಮರು ಪರಿಷ್ಕರಣೆ ಸಮಿತಿಯನ್ನು ನೇಮಿಸಿ ಅದರ ಶಿಫಾರಸ್ಸಿನ ಅನ್ವಯ ಭಾಷಾ ಪಠ್ಯ ಹಾಗೂ ಸಮಾಜ ವಿಜ್ಞಾನ ಪಠ್ಯಗಳಲ್ಲಿ ಖಂಡನಾರ್ಹ ಬದಲಾವಣೆ ತರಲಾಗಿದೆ. ಈ ಪುಸ್ತಕಗಳನ್ನು ಸರ್ಕಾರ ಮಕ್ಕಳಿಗೆ ಹಂಚಲು ಹೂರಟಿದೆ. ಇದು ಅತಂತ್ಯ ಬೇಜವಾಬ್ದಾರಿಯ ಕ್ರಮವಾಗಿದೆ ಇದರಿಂದ ಮಕ್ಕಳ ಮತ್ತು ಶಿಕ್ಷಣದ ಮೇಲೆ ನಕಾರಾತ್ಮಕವಾದ ಪರಿಣಾಮ ಬೀರಲಿದೆ ಎಂದಿದ್ದಾರೆ.

ಪಠ್ಯ ಪುಸ್ತಕಗಳಲ್ಲಿ ಬದಲಾವಣೆ ತರುವಾಗ ಸರ್ಕಾರ ಮನಸಿಗೆ ಬಂದಂತೆ ಮಾಡುವಂತಿಲ್ಲ ಇದಕ್ಕೆ ತನ್ನದೆ ಆದ ರೀತಿ, ನೀತಿ ನಿಯಮಗಳಿವೆ ಆದರೆ ಸರ್ಕಾರ ಇವುಗಳನ್ನು ಪಾಲಿಸಿಲ್ಲ, ಸಂವಿದಾನ ತತ್ವಗಳಿಗೆ ಅನುಸಾರವಾಗಿ ಸಮಿತಿಗಳನ್ನು ರಚನೆ ಮಾಡಬೇಕಿದೆ ಯಾರೂದೂ ಅಜೆಂಡಾವನ್ನು ಶಿಕ್ಷಣದಲ್ಲಿ ತರಲು ಸರ್ಕಾರ ಆತುರವಾಗಿ ತನ್ನ ಬೆಂಬಲಿಗರನ್ನು ಸಮಿತಿಯಲ್ಲಿ ಇರಿಸಿದೆ. ಕನ್ನಡ ಸಂಸ್ಕೃತಿ ಪರಂಪರೆ ತಕ್ಕದಾದ ಪಠ್ಯವನ್ನು ಯಾವುದೇ ಕಾರಣ ನೀಡಿದೆ ತೆಗೆದು ಹಾಕಿದೆ ಇದರ ಬದಲಿಗೆ ಸಂಘ ಪರಿಹಾರದ ಸಿದ್ದಾಂತ ಸಂಘಟನೆಯ ಪರವಾದ ಪಠ್ಯವನ್ನು ತುರುಕಲಾಗಿದೆ. ಇದು ಕುವೆಂಪು ಹೇಳಿದ ವಿಶ್ವ ಮಾನವತೆ ವಿರುದ್ದ ದಿಕ್ಕಿನಲ್ಲಿ ನಡೆದಿದೆ ಎಂದು ತಿಳಿಸಿದ್ದಾರೆ.

ರಾಜ್ಯ ಸರ್ಕಾರ ನೇಮಿಸಿರುವ ಸಮಿತಿಯಲ್ಲಿ ಯಾವುದೇ ಶಿಕ್ಷಣ ತಜ್ಞ ಇರುವುದಿಲ್ಲ, ರೋಹಿತ್ ಚಕ್ರವರ್ತಿ ಕುವೆಂಪುರವರ ನಾಡ ಗೀತೆಯನ್ನು ವಿಕೃತಗೂಳಿಸಿ ಪ್ರಚಾಋ ಮಾಡಿದ್ದಲ್ಲದೆ ಕುವೆಂಪು ಮತ್ತು ತೇಜಸ್ವಿಯವರನ್ನು ಬ್ರಾಹ್ಮಣ ವಿರೋಧಿ ಎಂದು ಬಿಂಬಿಸಿದ್ದಾರೆ. ಬೇಜವಾಬ್ದಾರಿ ವ್ಯಕ್ತಿಗೆ ಸರ್ಕಾರ ಉನ್ನತವಾದ ಹುದ್ದೆಯನ್ನು ನೀಡಿರುವುದು ಸರಿಯಲ್ಲ, ಇಂತಹ ಅಯೋಗ್ಯ ವ್ಯಕ್ತಿಯ ಮೂಲಕ ಮಕ್ಕಳ ಓದುವ ಪಠ್ಯ ಪುಸ್ತಕ ಬದಲಾಯಿಸಲು ಅವಕಾಶ ಮಾಡಿಕೂಟ್ಟಿರುವುದಕ್ಕೆ ಸರ್ಕಾರ ಕನ್ನಡಿಗರ ಬಳಿ ಕ್ಷಮೆ ಯಾಚಿಸಬೇಕು, ಕೂಡಲೇ ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯ ಮರು ಪರಿಶೀಲನಾ ಸಮಿತಿಯನ್ನು ರದ್ದುಪಡಿಸಿ ಆದೇಶವನ್ನು ಹೂರಡಿಸುವಂತೆ ಒತ್ತಾಯಿಸಲಾಯಿತು.

ಕರವೇ ಜಿಲ್ಲಾಧ್ಯಕ್ಷ ರಮೇಶ್, ಉಪಾಧ್ಯಕ್ಷರಾದ ಶಿವಮೂರ್ತಿ, ವೆಂಕಟೇಶ್, ಲಕ್ಷ್ಮಣ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಕಾಶ್, ಚಿತ್ರದುರ್ಗ ತಾಲ್ಲೂಕು ಅಧ್ಯಕ್ಷ ರಾಜಪ್ಪ, ಹಿರಿಯೂರಿನ ಉದಯ್ ಕುಮಾರ್, ಜಿಲ್ಲಾ ಸಂಚಾಲಕ ಗಣೇಶ್, ಮಹಿಳಾ ಘಟಕದ ಅಧ್ಯಕ್ಷರಾದ ಚಂದ್ರಕಲಾ, ಚಳ್ಳಕೆರೆಯ ಜಯಲಕ್ಷ್ಮಿ, ಮಂಜುಳ ಸುಮ, ಸೇರಿದಂತೆ ಇತರರು ಭಾಗವಹಿಸಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಸಿಇಎನ್ ಪೊಲೀಸರ ದಾಳಿ : ಅಂತರ್ ರಾಜ್ಯ ಗಾಂಜಾ ಪೆಡ್ಲರ್ ಬಂಧನ

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 22 : ಆಂದ್ರಪ್ರದೇಶದ ವಿಶಾಖಪಟ್ಟಣಂ ನಿಂದ ಗಾಂಜಾವನ್ನು ತಂದು ಚಿತ್ರದುರ್ಗ ನಗರಕ್ಕೆ ಬಂದು ಗಾಂಜಾ ಮಾರಾಟ ಮಾಡುತ್ತಿದ್ದ ಡ್ರಗ್ಸ್‌ ಪೆಡ್ಲರ್‌ನನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಹರಿ ಓಂಕುಮಾರ್(24

ಪೆಟ್ರೋಲ್ ಬಂಕಿನಲ್ಲಿ ವಂಚನೆ ಆರೋಪ : ಗ್ರಾಹಕರು ಹಾಗೂ ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ನವೆಂಬರ್. 22 : ಬೈಕ್ ಗಳಿಗೆ ಪೆಟ್ರೋಲ್ ಹಾಕುವ ವೇಳೆ ಗ್ರಾಹಕರಿಗೆ ಇಲ್ಲಿನ ಸಿಬ್ಬಂದಿ ವಂಚನೆ

ಅಕ್ರಮ ಕಸಾಯಿ ಖಾನೆ ಬಂದ್ ಮಾಡಿ : ದಾದಾ ಪೀರ್ ಆಗ್ರಹ : ವಿಡಿಯೋ ವೈರಲ್..!

ಸುದ್ದಿಒನ್, ಹಿರಿಯೂರು : ಅಕ್ರಮವಾಗಿ ಕಸಾಯಿ ಖಾನೆ ನಡೆಸುತ್ತಿರುವವರ ವಿರುದ್ಧ ದಾದಾ ಪೀರ್ ಎಂಬುವವರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಾದಾ ಪೀರ್ 6ನೇ ವಾರ್ಡ್ ನಲ್ಲಿ ವಾಸಿಸುವವ ವ್ಯಕ್ತಿಯಾಗಿದ್ದಾರೆ. ಕಸಾಯಿ ಖಾನೆಯಿಂದ ಮಕ್ಕಳು ಅನಾರೋಗ್ಯಕ್ಕೆ

error: Content is protected !!