Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಸಮಾಜದ ಸ್ವಾಸ್ಥ್ಯ ಕಾಪಾಡುವ ಸಾಹಿತ್ಯ ರಚನೆ ಬಹಳ ಅಗತ್ಯವಿದೆ : ಶ್ರೀ ಶಿವಲಿಂಗಾನಂದ ಸ್ವಾಮೀಜಿಗಳು

Facebook
Twitter
Telegram
WhatsApp

ಚಿತ್ರದುರ್ಗ, (ಮೇ.29) : ಸಮಾಜದ ಸ್ವಾಸ್ಥ್ಯ ಕಾಪಾಡುವ ಸಾಹಿತ್ಯ ರಚನೆ ಬಹಳ ಅಗತ್ಯವಿದೆ ಎಂದು ಶ್ರೀ ಸದ್ಗುರು ಕಬೀರಾನಂದಾಶ್ರಮದ ಶ್ರೀ ಶಿವಲಿಂಗಾನಂದ ಸ್ವಾಮೀಜಿಗಳು ಹೇಳಿದರು.

ಜಿಲ್ಲಾ ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ, ವಿಶೇಷ ಚೇತನರ ವೀಣಾಪಾಣಿ ಸಾಹಿತ್ಯ ಮತ್ತು ಸಾಂಸ್ಕøತಿಕ ವೇದಿಕೆ, ಕೊರ್ಲಕುಂಟೆ ಗ್ರಾಮದ ಕನ್ನಡ ರಕ್ಷಣಾ ಮತ್ತು ಸಾಂಸ್ಕøತಿ ಸಹಯೋಗದಲ್ಲಿ ಭಾನುವಾರ ಶ್ರೀಸದ್ಗುರು ಕಬೀರಾನಂದಾಶ್ರಮ ಮಠದಲ್ಲಿ ಹಮ್ಮಿಕೊಂಡಿದ್ದ ಕವಿ ಕೆ.ಎಚ್.ಜಯಪ್ರಕಾಶ್ ಅವರ ‘ನಿರೀಕ್ಷೆ ರಹದಾರಿ’ ಕವನ ಸಂಕಲನ ಬಿಡುಗಡೆ ಮತ್ತು ಜಿಲ್ಲಾ ಮಟ್ಟದ ಕವಿಗೋಷ್ಟಿ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.

ಪ್ರಸ್ತುತ ಸಮಾಜದಲ್ಲಿ ಸಮಾನತೆ ಕಾಪಾಡಿಕೊಳ್ಳುವ ಜಾಗೃತಿ ಆಗಬೇಕು. ಮನಸ್ಸುಗಳನ್ನು ಚೇತನವಾಗಿಸುವ ಮತ್ತು ಸಮಾಜಮುಖಿಯಾಗಿಸುವ ಬರಹ ಸಾಹಿತ್ಯವಾಗಿ ಬರಬೇಕು. ಸಾಹಿತ್ಯ ವಲಯಕ್ಕೆ ಕೊಡುಗೆ ನೀಡುವ ಸಂಖ್ಯೆ ಹೆಚ್ಚಾಗಲಿ ಎಂದು ಶುಭ ಹಾರೈಸಿದರು.

ಕವನ ಸಂಕಲನ ಕುರಿತು ಮಾತನಾಡಿದ ಆರ್ಯ ವೈಶ್ಯ ಸಾಹಿತ್ಯ ಪರಿಷತ್ತು ಗೌರವಾಧ್ಯಕ್ಷ ಟಿ.ವಿ. ಸುರೇಶ್‍ಗುಪ್ತ, ಸಮಾಜದ ಜವಾಬ್ದಾರಿಗೆ ಕಿವಿಗೊಡದೆ ಮತ್ತು ಮಾತನಾಡದವರು ಪ್ರಚಾರ ಮತ್ತು ಬಹುಮಾನಗಳಿಗೆ ಅಬ್ಬರಿಸುತ್ತಾರೆ.

ಮಾರಿಕೊಳ್ಳುವ ಮತ್ತು ಮಾರಾಟವಾಗುವ ಮನಸ್ಥಿತಿಯಲ್ಲಿ ಪ್ರಜಾಪ್ರಭುತ್ವದ ವ್ಯವಸ್ಥೆ ಮಾಯವಾಗುತ್ತದೆ ಎನ್ನುವ ವಿಡಂಬನಾತ್ಮಕ ಕವಿತೆಗಳು ಸಂಕಲನಕ್ಕೆ ಜೀವಕಳೆಯಾಗಿವೆ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಕವಿ ಕೊರ್ಲಕುಂಟೆ ತಿಪ್ಪೇಸ್ವಾಮಿ ಮಾತನಾಡಿ, ಸಮಾಜವನ್ನು ತಲ್ಲಣಗೊಳಿಸುತ್ತಿರುವ ಸ್ವಯಂಪ್ರೇರಿತ ಹಿತಾಸಕ್ತಿಗಳನ್ನು ನಿಯಂತ್ರಿಸುವ ಸಾಹಿತ್ಯದ ದನಿ ಹುಟ್ಟಬೇಕಿದೆ. ಪರರ ನೋವು, ದುಮ್ಮಾನಗಳನ್ನು ತನ್ನದೆನ್ನುವ ಒಳಗಣ್ಣಿನ ಭಾವನೆಯಲ್ಲಿ ಸಾಹಿತ್ಯ ರಚನೆಯಾಗಬೇಕು. ದೈಹಿಕ ಹೂನತೆಯನ್ನು ಲೆಕ್ಕಿಸದೆ ಸಾಹಿತ್ಯ ಗೀಳು ಹಚ್ಚಿಕೊಂಡ ಕೆ.ಎಚ್. ಜಯಪ್ರಕಾಶ್ ಮೂರು ಸಂಕಲನಗಳನ್ನು ಸಾಹಿತ್ಯ ವಲಯಕ್ಕೆ ನೀಡುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಶಿಕ್ಷಕ ಧನಂಜಯ ಮೆಂಗಸಂದ್ರ ಮಾತನಾಡಿ, ಸಮಾಜವನ್ನು ಮತ್ತೆ ಮತ್ತೆ ಕಾಡುವ ಸಾಹಿತ್ಯ ಜೀವಂತಿಕೆಯಾಗಿ ಉಳಿದುಕೊಳ್ಳುತ್ತದೆ. ವಾಸ್ತವಿಕ ನೆಲೆಯಲ್ಲಿ ಕವಿತೆಯಾಗಿಸಲು ಜೀವನದ ಅನುಭವಗಳು ಆಧಾರ ಆಗಬೇಕು. ಕುವೆಂಪು, ದರಾ ಬೇಂದ್ರ, ಮಾಸ್ತಿ, ತರಾಸು ಇಂತಹ ಮಹನೀಯರ ಬರಹವನ್ನು ಅಧ್ಯಯನ ಮಾಡುವ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದ ಅವರು, ಕವಿಗೋಷ್ಟಿಯಲ್ಲಿ ವಾಚನ ಮಾಡಿದ 25 ಕವಿತೆಗಳ ವಿಶ್ಲೇಷಣೆಯಲ್ಲಿ ಪ್ರಸ್ತುತ ಕವಿತಾ ವಾಚನದಲ್ಲಿ ಮಾನವೀಯತೆ ಮತ್ತು ಆಡಳಿತ ಬಿಕ್ಕಟ್ಟುಗಳ ಕವಿತಾ ರಚನೆಗಳು ಉತ್ತಮ ಕವಿತೆಗಳಾಗಿವೆ ಎಂದು ಹೇಳಿದರು.

ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ಜಿಲ್ಲಾಧ್ಯಕ್ಷೆ ದಯಾಪುತ್ತೂರ್ಕರ್ ಮಾತನಾಡಿ, 16 ವರ್ಷಗಳ ಹಿಂದೆ ಕಬೀರಾನಂದ ಮಠದಲ್ಲಿ ಆರಂಭಗೊಂಡ ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ಕಾರ್ಯಕ್ರಮಗಳ ಮೂಲಕ ಉದಯೋನ್ಮುಖ ಬರಹಗಾರರನ್ನು ಗುರುತಿಸುವ ಕೆಲಸ ಮಾಡಲಾಗಿದೆ. ಶ್ರೀಗಳ ಸಮ್ಮುಖದಲ್ಲಿ ವೇದಿಕೆ ಅಧ್ಯಕ್ಷ ಸ್ಥಾನವನ್ನು ಮುಖ್ಯಶಿಕ್ಷಕಿ ಪುಷ್ಪವಲ್ಲಿ, ಉಪಾಧ್ಯಕ್ಷೆ ಸ್ಥಾನ ಶೋಭ ಮಲ್ಲಿಕಾರ್ಜುನ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದರು.

ಕಾರ್ಯಕ್ರಮದಲ್ಲಿ ಕೃತಿಕಾರ ಕೆ.ಎಚ್. ಜಯಪ್ರಕಾಶ್, ಸಿರಸ್ತೇದಾರ್ ಕೆ.ಎನ್. ದೇವರಾಜ್, ರವಿಅಂಬೇಕರ್, ಡಾ.ಶಫೀವುಲ್ಲಾ ಸೇರಿದಂತೆ ಕವಿಗೋಷ್ಟಿಯಲ್ಲಿ ಎಚ್.ಮಧು, ಸತ್ಯಪ್ರಭಾ ವಸಂತಕುಮಾರ್, ಬೆಳಗೆರೆ ಪ್ರವೀಣ್, ಜಯದೇವ್‍ಮೂರ್ತಿ, ಮಹಮ್ಮದ್ ಸಾಧತ್, ಜಿ.ಆರ್. ಶಿವಕುಮಾರ್, ಎಚ್. ಸತೀಶ್‍ಕುಮಾರ್, ಪಗಡಲಬಂಡೆ ನಾಗೇಂದ್ರಪ್ಪ, ತಿಪ್ಪೀರಮ್ಮ, ಶಶಿಕಲಾ ದೀಪಿಕಾಬಾಬು, ಪೂಜಾ, ಉಷಾಗೋಪಿ, ಕಾಟಯ್ಯ, ಚಳ್ಳಕೆರೆ ದ್ಯಾಮಕ್ಕ, ಮೆಹಬೂಬಿ, ನಂದಿನಿ, ಗೊಂದಾಳಪ್ಪ, ಲೋಕೇಶ್, ಮಂಜಮ್ಮ ತಿಮ್ಮಶೆಟ್ರು, ಜಿ.ಟಿ. ಪ್ರಮೀಳಾ, ಅ.ಇ. ಮುನಾವರ್ ಮತ್ತು ಇತರರು ಕವಿತಾ ವಾಚನ ಮಾಡಿದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಮೂರನೇ ಬಾರಿಗೆ ಸೋತ ನಿಖಿಲ್ ಕುಮಾರಸ್ವಾಮಿ…!

ಸುದ್ದಿಒನ್ | ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭಾ ಚುನಾವಣೆಗಳ ಜೊತೆಗೆ ದೇಶಾದ್ಯಂತ ವಿವಿಧ ರಾಜ್ಯಗಳ 48 ವಿಧಾನಸಭಾ ಸ್ಥಾನಗಳಿಗೆ ಉಪಚುನಾವಣೆ ನಡೆಯಿತು. ಕರ್ನಾಟಕದಲ್ಲಿ ಮೂರು ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಸಂಡೂರು ಕ್ಷೇತ್ರದಿಂದ ಅನ್ನಪೂರ್ಣ

ಮಹಾರಾಷ್ಟ್ರದಲ್ಲಿ ಯಾರಾಗಲಿದ್ದಾರೆ ನೂತನ ಸಿಎಂ ?

ಸುದ್ದಿಒನ್ | ಮಹಾರಾಷ್ಟ್ರದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಹಾಗಾದರೆ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಬಿಜೆಪಿ ಮುಖಂಡ ಪ್ರವೀಣ್ ದಾರೇಕರ್ ಪ್ರತಿಕ್ರಿಯಿಸಿದ್ದಾರೆ. ದೇವೇಂದ್ರ ಫಡ್ನವೀಸ್

ಸಿಎಂ ಸಿದ್ದರಾಮಯ್ಯ ಅವರ ಪ್ರಚಾರದಿಂದ ಗೆಲುವು : ಬಿಜೆಪಿ ಸೋಲಿನ ಬಗ್ಗೆ ಜನಾರ್ದನ ರೆಡ್ಡಿ ಫಸ್ಟ್ ರಿಯಾಕ್ಷನ್

ಬಳ್ಳಾರಿ: ಇಂದು ಸಂಡೂರು ವಿಧಾನಸಭಾ ಕ್ಷೇತ್ರದಲ್ಲೂ ಫಲಿತಾಂಶ ಬಂದಿದ್ದು, ಕಾಂಗ್ರೆಸ್ ಅಭ್ಯರ್ಥಿ ಅನ್ನಪುರ್ಣ ತುಕರಾಂ ಗೆಲುವು ಸಾಧಿಸಿದ್ದಾರೆ. ಸಂಜೆ ವೇಳೆಗೆ ಅಧಿಕೃತ ಅನೌನ್ಸ್ ಆಗಲಿದೆ. ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವುದಕ್ಕಾಗಿ ಜನಾರ್ದನ ರೆಡ್ಡಿ ಅವರು ಸಾಕಷ್ಟು

error: Content is protected !!