ಅದು ಪ್ಯಾಸೆಂಜರ್ ಟ್ರೈನ್ ಆಗಲಿ, ಗೂಡ್ಸ್ ಗಾಡಿಯಾಗಲಿ ನಿಗದಿತ ಸಮಯಕ್ಕೆ ರೈಲು ಬರುವುದು ಕಷ್ಟ. ಒಮ್ಮೊಮ್ಮೆ ಮಾತ್ರ ಸರಿಯಾದ ಸಮಯಕ್ಕೆ ಬರುತ್ತೆ. ಆದರೆ ಇಲ್ಲೊಂದು ರೈಲು ಅಕ್ಕಿ ಮೂಟೆಗಳನ್ನೊತ್ತು ಸುಮಾರು ಒಂದು ವರ್ಷ ತಡವಾಗಿ ಆಗಮಿಸಿದೆ. ಇದನ್ನು ಕಂಡ ಅಧಿಕಾರಿಗಳೇ ಶಾಕ್ ಆಗಿದ್ದಾರೆ. ಯಾಕಂದ್ರೆ ಈ ರೈಲನ್ನು ಅಧಿಕಾರಿಗಳು ಮರೆತೇ ಹೋಗಿದ್ದರು ಎನಿಸುತ್ತದೆ.
ರೈಲುಗಳಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗುವುದು ಸಹಜ. ಅದನ್ನು ಮೊದಲೇ ಪರೀಕ್ಷಿಸಲಾಗುತ್ತದೆ. ಹೀಗೆ ಸುಮಾರು ಒಂದು ಸಾವಿರ ಅಕ್ಕಿ ಚೀಲ, 200-300 ದವಸ ಧಾನ್ಯವಿರುವ ಮೂಟೆಗಳನ್ನು ಹೊತ್ತು ಸಾಗಿತ್ತು. ಛತ್ತಿಸ್ ಗಡದಿಂದ 762 ಕಿಲೋ ಮೀಟರ್ ದೂರವಿರುವ ನ್ಯೂ ಗಿರಿದಿಹ್ ನಿಲ್ದಾಣ ತಲುಪಬೇಕಿತ್ತು. ಕಳೆದ ವರ್ಷ ಇದೇ ಸಮಯದಲ್ಲಿ ಹೊರಟಿದ್ದ ಟ್ರೈನ್ ಅದು. ಎಂಜಿನ್ ನಲ್ಲಿ ಸಮಸ್ಯೆ ಕಾಣಿಸಿಕೊಂಡ ಪರಿಣಾಮ ಸರಿಯಾದ ಸಮಯಕ್ಕೆ ಟ್ರೈನ್ ಹೊರಟಿಲ್ಲ.
ಆದ್ರೆ ಆಶ್ಚರ್ಯವೆಂದರೆ ಈ ಟ್ರೈನ್ ಬಗ್ಗೆ ಯಾರು ಕೂಡ ಅಷ್ಟಾಗಿ ತಲೆ ಕೆಡಿಸಿಕೊಂಡಿರಲಿಲ್ಲ. ಕಡೆಗೂ ವರ್ಷದ ಬಳಿಕ ಟ್ರೈನ್ ತಲುಪಬೇಕಾದ ಜಂಕ್ಷನ್ ತಲುಪಿದೆ. ಟ್ರೈನ್ ಕಂಡು ಅಧಿಕಾರಿಗಳೇ ದಂಗಾಗಿದ್ದಾರೆ. ಬಳಿಕ ಅದರಲ್ಲಿದ್ದ ಆಹಾರ ಪದಾರ್ಥಗಳನ್ಬು ನೋಡಿದಾಗ ಕೆಟ್ಟಿರುವುದು ಕಂಡು ಬಂದಿದೆ. ಮೇ 31ಕ್ಕೆ ಅಧಿಕಾರಿಗಳು ಆಗಮಿಸಲಿದ್ದು, ನಿರ್ಲಕ್ಷ್ಯವಹಿಸಿರುವ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಲಿದ್ದಾರೆ.