ಬೆಂಗಳೂರು: ಅಕ್ರಮ ಹಣ ವರ್ಗಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಗೆ ಸಂಬಂಧಿಸಿದಂತೆ ಇಡಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಿತ್ತು. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಇಂದು ವಿಚಾರಣೆ ನಡೆಸಿದ್ದು, ಸೋಮವಾರಕ್ಕೆ ಮುಂದೂಡಿಕೆಯಾಗಿದೆ.
ವಿಚಾರಣೆಯಲ್ಲಿ ಅಕ್ರಮ ಹಣ ವಾರ್ಗಾವಣೆ ತಡೆ (PMLA)ನಲ್ಲಿ IPC 120B ನಡಿ ಸ್ಪಷ್ಟನೆ ಕೇಳಿತ್ತು. ಕೋರ್ಟ್ ಕೇಳಿದ ಪ್ರಶ್ನೆಗೆ ಇಡಿ ಅಧಿಕಾರಿಗಳು ಸ್ಒಷ್ಟನೆ ಕೂಡ ನೀಡಿದ್ದಾರೆ. ಈ ಸೆಕ್ಷನ್ ಜೊತೆಗೂಡಿಸಿ, ವಿಚಾರಣೆ ನಡೆಸುವ ಅಧಿಕಾರ ವಿಶೇಷ ನ್ಯಾಯಾಲಯಕ್ಕಿದೆ ಎಂದು ಇಡಿ ಪರ ವಕೀಲ ಕೋರ್ಟ್ ನಲ್ಲಿ ವಾದ ಮಂಡಿಸಿದರು.
ವಾದ ಪ್ರತಿವಾದ ಆಲಿಸಿದ ಕೋರ್ಟ್ ಡಿಕೆ ಶಿವಕುಮಾರ್ ವಿರುದ್ಧ IPC 120B ಬಗ್ಗೆ ಪರಿಶಿಉಲನೆ ನಡೆಸುವುದಾಗಿ ತಿಳಿಸಿದೆ. ಈ ವಿಚಾರಣೆಯನ್ನು ಮೇ 31ಕ್ಕೆ ಮುಂದೂಡಿಕೆ ಮಾಡಿದೆ. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವಿರುದ್ಧ ಆದಾಯಕಗಕಿಂತ ಹೆಚ್ಚು ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಕೋರ್ಟ್ ಗೆ ಇತ್ತಿಚೆಗೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದರು. ಇದಕ್ಕೆ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ಕೂಡ ನೀಡಿದ್ದರು. ನಾನು ಜೈಲಿನಲ್ಲಿದ್ದಾಗ ಸಲ್ಲಿಸಬೇಕಾಗಿತ್ತು ಎಂದಿದ್ದರು.