ಗೋ ಸಂಪತ್ ನಿಜವಾದ ಸಂಪತ್ ಆಗಿದೆ : ಶ್ರೀ ಶಿವಲಿಂಗಾನಂದ ಸ್ವಾಮೀಜಿ

suddionenews
2 Min Read

ಚಿತ್ರದುರ್ಗ (ಮೇ.28) :  ಗೋ ಸಂಪತ್ ನಿಜವಾದ ಸಂಪತ್ ಆಗಿದೆ. ಗೋವಿನಿಂದ ಬರುವ ಉತ್ಪನ್ನಗಳಿಂದ ವಿವಿಧ ರೋಗಳನ್ನು ನಿವಾರಣೆ ಮಾಡಬಹುದಾಗಿದೆ ಎಂದು ನಗರದ ಶ್ರೀ ಸದ್ಗುರು ಕಬೀರಾನಂದಾಶ್ರಮದ ಶ್ರೀ ಶಿವಲಿಂಗಾನಂದ ಶ್ರೀಗಳು ತಿಳಿಸಿದರು.

ವಿಶ್ವ ಹಿಂದು ಪರಿಷತ್ ವೀರಮದಕರಿ ಸೇವಾ ಟ್ರಸ್ಟ್ ,(ರಿ) ಚಿತ್ರದುರ್ಗ ವತಿಯಿಂದ ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾದ ಸಮರ್ಪಣ ಕಾರ್ಯಕ್ರಮದಡಿಯಲ್ಲಿ ಏರ್ಪಡಿಸಿದ್ದ ದೇಸಿ ತಳಿಗಳ ಗೋ ಪ್ರದರ್ಶನ ಸ್ಫರ್ದೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶ್ರೀಗಳು, ನಮ್ಮಲ್ಲಿ ನಾಯಿ, ಬೆಕ್ಕನ್ನು ಸಾಕಿ ಪ್ರಶಸ್ತಿಯನ್ನು ಪಡೆದಿದ್ದಾರೆ, ಆದೇ ನಮ್ಮ ನಿಜವಾದ ಸಂಪತ್ ಎಂದರೆ ಗೋವು ಇದನ್ನು ಸಾಕುವುದರಿಂದ ಉಪಯೋಗ ಬಹಳ ಇದೆ. ಸಾಕುವುದು ಕ್ಷಟ ಎಂದು ಹಲವಾರು ಜನ ಹಿಂದೆ ಸರಿದಿದ್ದಾರೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಸಹಾ ಗೋ ಸಂಪತ್ ಇದೆ ಎಂದರು.

ಗೋವಿನ ಸಗಣಿ, ಗೋಮೂತ್ರದಿಂದ ಹಲವಾರು ಉಪಯೋಗ ಇದೆ. ಇದನ್ನು ನಮ್ಮ ದೇಹಕ್ಕೆ ಬಳಕೆ ಮಾಡುವುದರಿಂದ ಕ್ಯಾನ್ಸರ್‌ನಂತಹ ರೋಗ ದೂರವಾಗುತ್ತದೆ. ಹಿಂದೂ ಸಂಪ್ರದಾಯದಂತೆ ಗೋವಿನಲ್ಲಿ ದೇವತೆಗಳು ವಾಸ ಮಾಡುತ್ತಾರೆ. ಗೋವನ್ನು ಪೂಜೆ ಮಾಡುವುದರಿಂದ ಎಲ್ಲಾ ದೇವತೆಯನ್ನು ಪೂಜೆ ಮಾಡಿದಂತೆ ಎಂಬ ಭಾವನೆ ನಮ್ಮಲ್ಲಿ ಇದೆ. ಗೋವಿನ ಆರಾಧನೆಯಿಂದ ನಮ್ಮ ಇಷ್ಠಾರ್ಥಗಳು ಲಭ್ಯವಾಗುತ್ತದೆ ಎಂಬ ನಂಬಿಕೆ ಇದೆ. ಗಂಗೆ, ಗೋವಿಂದ ಹಾಗೂ ಗೋವು ಪವಿತ್ರವಾಗಿದೆ ಎಂದು ಶ್ರೀಗಳು ತಿಳಿಸಿದರು.

ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ, ಕಳೆದ 50 ವರ್ಷದ ಹಿಂದೆ ನಮ್ಮಲ್ಲಿ ಗೋ ಸಂಪತ್ ಹೇರಳವಾಗಿತ್ತು. ಅದರ ಸಗಣಿಯನ್ನು ಬಳಸುವುದರ ಮೂಲಕ ವ್ಯವಸಾಯವನ್ನು ಮಾಡಲಾಗುತ್ತಿತು, ಇದರಿಂದ ಬೆಳೆದ ಆಹಾರಗಳು ದೇಹಕ್ಕೆ ಯಾವುದೇ ರೋಗವನ್ನು ತಾರದೆ ಉತ್ತಮವಾದ ಆರೋಗ್ಯವನ್ನು ನೀಡುತ್ತಿತ್ತು.

ಸರ್ಕಾರಗಳು ಇತ್ತಿಚೇಗೆ ಗೋಹತ್ಯೆಯನ್ನು ತಡೆಯುವ ಕಾರ್ಯಕ್ಕೆ ಮುಂದಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗೋಹತ್ಯೆಯ ವಿರುದ್ದ ಕಾನೂನು ತರುವುದರ ಮೂಲಕ ಗೋಹತ್ಯೆಯನ್ನು ನಿಯಂತ್ರಿಸಿದೆ ಎಂದರು.

ಉತ್ತರ ಪ್ರದೇಶದಲ್ಲಿ ಗೋಹತ್ಯೆ ನಿಷೇಧದ ಬಗ್ಗೆ ಕಾನೂನು ತಂದಾಗ ಅಲ್ಲಿನ ವಿರೋಧ ಪಕ್ಷದವರು ಇದನ್ನು ಚುನಾವಣೆಯಲ್ಲಿ ಅಜೆಂಡಾವನ್ನು ಇಡುವುದರ ಮೂಲಕ ಮತದಾರರ ದಾರಿಯನ್ನು ತಪ್ಪಿಸುವ ಕಾರ್ಯವನ್ನು ಮಾಡಿದ್ದರು.

ಆದರೆ ಬುದ್ದಿವಂತ ಮತದಾರ ಇದರ ಬಗ್ಗೆ ತೆಲೆಕೆಡಿಸಿಕೊಳ್ಳದೇ ಮತ್ತೇ ಯೋಗಿ ಆದಿತ್ಯನಾಥ್ ಸರ್ಕಾರಕ್ಕೆ ಬಹುಮತ ನೀಡಿದ್ದಾರೆ. ಚಿತ್ರದುರ್ಗ ಜಿಲ್ಲೆಯಲ್ಲಿ ಗೋವಿನ ರಕ್ಷಣೆಗಾಗಿ 4 ಕಡೆಯಲ್ಲಿ ಗೋಶಾಲೆಯನ್ನು ನಿರ್ಮಾಣ ಮಾಡಲಾಗುತ್ತಿದೆ ಇದರಿಂದ ಸರ್ಕಾರ ಗೋರಕ್ಷಣೆಗೆ ಒತ್ತು ನೀಡುತ್ತಿದೆ. ಅದರಲ್ಲೂ ಬಿಜೆಪಿ ಸರ್ಕಾರ ಗೋರಕ್ಷಣೆಗೆ ಕಂಕಣ ಬದ್ದವಾಗಿದೆ ಎಂದು ಶಾಸಕ ತಿಪ್ಪಾರೆಡ್ಡಿ ತಿಳಿಸಿದರು.

ಖನಿಜ ನಿಗಮದ ಅಧ್ಯಕ್ಷರಾದ ಲಿಂಗಮೂರ್ತಿ ಮಾತನಾಡಿ, ಹುಲಿಯನ್ನು ರಾಷ್ಟ್ರೀಯ ಪ್ರಾಣಿ ಎಂದು ಸರ್ಕಾರ ಘೋಷಿಸಿದೆ ಆದರೆ ಎಲ್ಲರಿಗೂ ಉಪಯೋಗವಾಗುವ ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಸರ್ಕಾರ ಘೋಷಣೆ ಮಾಡಬೇಕಿದೆ. ಇದರಿಂದ ಗೋ ಸಂಪತ್ ನ್ನು ಉಳಿಸಿದಂತೆ ಆಗುತ್ತದೆ ಸರ್ಕಾರ ಇದರ ಬಗ್ಗೆ ಚಿಂತನೆ ನಡೆಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾದ ಕಾಶಿ ವಿಶ್ವನಾಥ್ ಶೆಟ್ಟಿ, ಅಧ್ಯಕ್ಷರಾದ ಡಾ.ಮುಕುಂದರಾವ್, ಕಾರ್ಯಕಾರಿ ಸಮಿತಿ ಅಧ್ಯಕ್ಷರಾದ ಜೆ.ಆರ್ ರಾಮಮೂರ್ತಿ, ಸಿದ್ದಾಪುರದ ಪಟೇಲ್ ರುದ್ರಪ್ಪ, ಬದರಿನಾಥ್, ಡಾ. ಸಿದ್ಧಾರ್ಥ ಗುಂಡಾರ್ಪಿ, ಕೆ.ಬಿ.ಸುರೇಶ್, ಶ್ರೇಣೀಕ್ ಜೈನ್ ಭಾಗವಹಿಸಿದ್ದರು.

ಪಟೇಲ್ ಶಿವಕುಮಾರ್ ಸ್ವಾಗತಿಸಿದರೆ ಶಿಕ್ಷಕರಾದ ತಿಪ್ಪೇಸ್ವಾಮಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Share This Article
Leave a Comment

Leave a Reply

Your email address will not be published. Required fields are marked *