ಬೆಂಗಳೂರು: ರಾಜ್ಯಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಪಕ್ಷಗಳಿಗೆ ಇನ್ನು ಕಗ್ಗಂಟಾಗಿಯೇ ಉಳಿದಿದೆ. ಈ ಮಧ್ಯೆ ರಾಜ್ಯಸಭೆಗೆ ನನಗೆ ಟಿಕೆಟ್ ನೀಡಬೇಡಿ ಎಂದು ಬಿಜೆಪಿ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ, ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರಿಗೆ ಪತ್ರ ಬರೆದಿದ್ದಾರೆ.
ಸುರಾನಾ ಅವರು ಪರಿಷತ್ ಚುನಾವಣೆಗೆ ಟಿಕೆಟ್ ಆಕಾಂಕ್ಷಿಯಾಗಿದ್ದರು. ಅವರ ಹೆಸರನ್ನು ಶಿಫಾರಸು ಕೂಡ ಮಾಡಲಾಗಿತ್ತು. ಬಳಿಕ ಅವರ ಹೆಸರು ಘೋಷಣೆಯಾಗಲಿಲ್ಲ. ಇದೀಗ ರಾಜ್ಯಸಭೆಗೂ ಅವರನ್ನು ಶಿಫಾರಸು ಮಾಡಲಾಗಿದೆ. ಆದರೆ ರಾಜ್ಯಸಭೆಯ ಟಿಕೆಟ್ ಬೇಡವೆಂದು ಸುರಾನಾ ಮನವಿ ಮಾಡಿದ್ದಾರೆ.
ಮೂಲಗಳ ಪ್ರಕಾರ ಪರಿಷತ್ ಗೆ ಟಿಕೆಟ್ ಸಿಗದ ಕಾರಣ ಸುರಾನಾ ಬೇಸರಗೊಂಡಿದ್ದಾರೆ ಎನ್ನಲಾಗಿದೆ. ಹೀಗಾಗಿಯೇ ರಾಜ್ಯಸಭೆಗೆ ಟಿಕೆಟ್ ಬೇಡವೇಂದು ಪತ್ರ ಬರೆದಿದ್ದಾರೆ ಎನ್ನಲಾಗಿದೆ. ಆದರೆ ಪತ್ರದಲ್ಲಿ ಪಕ್ಷ ಸಂಘಟನೆಯ ಒತ್ತಡದಲ್ಲಿ ಟಿಜೆಟ್ ನಿರಾಕರಿಸಿದ್ದೇನೆ ಎಂದು ಬರೆದಿದ್ದಾರೆ.