ಬೆಂಗಳೂರು: ನಗರದಲ್ಲಿ ಮಾತನಾಡಿರುವ ಸಿದ್ದರಾಮಯ್ಯ ಬಿಜೆಪಿ, ಆರ್ ಎಸ್ಎಸ್ ಮೇಲೆ ಹರಿಹಾಯ್ದಿದ್ದಾರೆ. RSS ನವರಿದ್ದಾರಲ್ಲ ಇವರೇನು ಮೂಲ ಭಾರತದವರ..? ಇದೆಲ್ಲವನ್ನು ನಾವೂ ಚರ್ಚೆ ಮಾಡಬಾರದು ಅಂತ ಇದ್ದೀವಿ. ಆರ್ಯರು ಈ ದೇಶದವರಾ..? 609 ವರ್ಷ ಮೊಘಲರು ಬಂದು ಆಳುವುದಕ್ಕೆ ಯಾರು ಕಾರಣ..? ನೀವೆಲ್ಲಾ ಒಗ್ಗಟ್ಟಾಗಿ ಇದ್ದಿದ್ದರೆ ಅವರು ಯಾಕೆ ಬರ್ತಾ ಇದ್ರು. ಬ್ರಿಟಿಷರು ಆಳ್ವಿಕೆ ಮಾಡಿದ್ದಕ್ಕೆ ಯಾರು ಕಾರಣ. ಇದೆಲ್ಲವನ್ನು ನಾವೂ ಹೇಳಿದ್ರೆ ಮತ್ತೆ ನಮ್ಮ ಮೇಲೆ ಶುರು ಮಾಡ್ತಾರೆ ಎಂದಿದ್ದಾರೆ.
ಇಂದಿನ ಪ್ರಧಾನಿಗೂ ನೆಹರು ಅವರಿಗೂ ಹೋಲಿಕೆ ಮಾಡುವುದಕ್ಕೆ ಆಗಲ್ಲ. ನನ್ನ ಪ್ರಕಾರ ಹೋಲಿಕೆಯಾಗುತ್ತದೆ ಮಾಡಲು ಬಾರದು. ನೆಹರು ಎಲ್ಲಿ, ಮೋದಿ ಎಲ್ಲಿ. ಭೂಮಿಗೂ ಆಕಾಶ ಇದ್ದಂಗೆ. ಹೋಲಿಕೆನೆ ಅಲ್ಲ. ಖರ್ಗೆ ಅವರು ಹೇಳಿದ್ರಲ್ಲ. ನೆಹರು ಅವರು ಮಾಡಿದ ಒಳ್ಳೆ ಕೆಲಸಗಳನ್ನು ಅಳಿಸಿ ಹಾಕುವುದಕ್ಕೆ ಯತ್ನಿಸುತ್ತಿದ್ದಾರೆ. ನೆಹರು ಪಂಚವಾರ್ಷಿಕ ಯೋಜನೆ ಜಾರಿಗೆ ತಂದಿದ್ದರು. ಆ ಯೋಜನೆಗಳನ್ನು ದೇಶದ ಅಭಿವೃದ್ದಿಗಾಗಿ ರೂಪಿಸುತ್ತಾ ಇದ್ರು. ಆ ಯೋಜನೆಗಳೇ ಇಲ್ಲ ಈಗ. ಆ ಜಾಗದಲ್ಲಿ ನೀತಿ ಆಯೋಗ ಅಂತ ಮಾಡಿಬಿಟ್ಟವರೆ. ಆ ನೀತಿ ಆಯೋಗ ಸರ್ಕಾರದ ಕೈಗೊಂಬೆ ಆಗಿಬಿಟ್ಟಿದೆ.
ಇದೇ ವೇಳೆ ಚಕ್ರತೀರ್ಥ ಬಗ್ಗೆ ಮಾತನಾಡಿ, ರೋಹಿತ್ ಚಕ್ರ ತೀರ್ಥ. ಪಠ್ಯಪುಸ್ತಕದಲ್ಲಿ ಏನಿರಬೇಕು ಅನ್ನೋದನ್ನು ಮಾಡಲು ಆ ವ್ಯಕ್ತಿ ಬಳಿ ಕೊಟ್ರೆ ನಮ್ಮ ದೇಶ, ರಾಜ್ಯ ಯಾವ ಕಡೆ ಹೋಗ್ತಾ ಇದೆ ಯೋಚಿಸಿ. ಬಹುಶಃ ಹೆಡ್ಗೇವಾರ್ ಗಿಂತ ಒಂದೆಜ್ಜೆ ಮುಂದೆ ಇದ್ದಾನೆ. ಭಗತ್ ಸಿಂಗ್ ಅಂತ ದೇಶ ಭಕ್ತರ ಹೆಸರು ತೆಗೆದಾಕಿ, ಹೆಡ್ಗೆವಾರ್ ಸ್ಪೀಚ್ ಹಾಕ್ತಾರೆ ಅಂದ್ರೆ ಎಲ್ಲಿಗೆ ಬಂದಿದ್ದೀವಿ ಎಂದು ಆಕ್ರೋಶ ಹೊರಹಾಕಿದ್ದಾರೆ.