ಆಸ್ಪತ್ರೆಯೊಂದರಲ್ಲಿ ಸಂಭವಿಸಿದ ಆಕಸ್ಮಿಕ ಬೆಂಕಿ ದುರಂತದಿಂದ ಹನ್ನೊಂದು ನವಜಾತ ಶಿಶುಗಳು ಬೆಂಕಿಯಲ್ಲಿ ಸಾವನ್ನಪ್ಪಿರುವ ದಾರುಣ ಘಟನೆ ಆಫ್ರಿಕಾದ ಸೆನೆಗಲ್‌ನಲ್ಲಿ ನಡೆದಿದೆ.
ಸೆನೆಗಲ್‌ನ ಟಿವೋನ್ ಸಿಟಿಯಲ್ಲಿರುವ ಮೆಮ್ ಅಬ್ದು ಅಜೀಜ್ ಸೈ ದಬಾಖ್ ಆಸ್ಪತ್ರೆಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ. ಮಕ್ಕಳ ವಾರ್ಡ್‌ನಲ್ಲಿ ಬೆಂಕಿಯ ತೀವ್ರತೆ ಹೆಚ್ಚಾಗಿ ನಿಯಂತ್ರಣಕ್ಕೆ ಸಿಗದೆ ಅಲ್ಲಿದ್ದ 11 ನವಜಾತ ಶಿಶುಗಳು ಸಾವನ್ನಪ್ಪಿವೆ. ಅಲ್ಲಿನ ಸಿಬ್ಬಂದಿಯು ಹರಸಾಹಸ ಪಟ್ಟು ಮೂವರು ಮಕ್ಕಳನ್ನು ಮಾತ್ರ ಉಳಿಸಲು ಸಾಧ್ಯವಾಯಿತು.
ಅಪಘಾತದ ಸುದ್ದಿ ಕೇಳಿ ತೀವ್ರ ಆಘಾತಕ್ಕೊಳಗಾಗಿದ್ದೇ ಎಂದು ಅಧ್ಯಕ್ಷ ಮ್ಯಾಸಿ ಸಾಲ್ ಟ್ವಿಟ್ಟರ್ ನಲ್ಲಿ ಮೃತರ ಕುಟುಂಬ ಸದಸ್ಯರಿಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ದೇಶದಲ್ಲಿ ಮೂರು ದಿನಗಳ ಶೋಕಾಚರಣೆ ಘೋಷಿಸಲಾಗಿದೆ. ಸೆನೆಗಲ್‌ನಲ್ಲಿ ಈ ಹಿಂದೆ ಇದೇ ರೀತಿಯ ಅಗ್ನಿ ದುರಂತ ಸಂಭವಿಸಿ ಗಡೇದಡಿ ಲಿಂಗೋರಿನಲ್ಲಿರುವ ಆಸ್ಪತ್ರೆಯಲ್ಲಿ ಬೆಂಕಿ ಕಾಣಿಸಿಕೊಂಡು ನಾಲ್ಕು ಶಿಶುಗಳು ಸಾವನ್ನಪ್ಪಿದ್ದರು.