ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮೇಲೆ ಚಾರ್ಹ್ ಶೀಟ್ ಹಾಕಲಾಗಿದೆ ಈ ಸಂಬಂಧ ಮಾತನಾಡಿರುವ ಅವರು, ಅವರು ಚಾರ್ಜ್ ಶೀಟ್ ಹಾಕಿದ್ದಾರೆ ಎಂಬುದು ಕೆಲವು ನ್ಯಾಷನಲ್ ಚಾನೆಲ್ ನಿಂದ ಗೊತ್ತಾಯ್ತು. ಅವರು ಕೋರ್ಟ್ ಗೆ ಸಬ್ಮಿಟ್ ಮಾಡಿದ್ದಾರೆ. ಆದರೆ ನಮಗಿನ್ನು ಆ ಕಾಪಿ ಕೊಟ್ಟಿಲ್ಲ. ಸಾಮಾನ್ಯವಾಗಿ ನಾನು ಜೈಲಿನೊಳಗಡೆ ಹೋದಾಗ 60 ದಿನದಲ್ಲಿ ಮಾಡುವ ಪದ್ಧತಿ ಇತ್ತು. ಮೂರು ಮೂರುವರೆ ವರ್ಷ ತೆಗೆದುಕೊಂಡು ಮಾಡಿದ್ದಾರೆ. ಚಾರ್ಜ್ ಶೀಟ್ ಬರಲಿ ಆಮೇಲೆ ನೋಡೋಣಾ. ಹೊಸದಾಗಿ ಅಂತು ಸೃಷ್ಟಿ ಮಾಡುವುದಕ್ಕೆ ಸಾಧ್ಯವಿಲ್ಲ. income tax ನವರಂತು ಬೇಕಾದಷ್ಟು ಸೃಷ್ಟಿ ಮಾಡಿದ್ದಾರೆ. ಕಾಪಿ ಬರಲಿ, ಈ ದೇಶದಲ್ಲಿ ಇನ್ನು ಕಾನೂನಿದೆ ಎಂದಿದ್ದಾರೆ.
ಯಾರು ಅವರಿಗೆ ರಾಜಕೀಯವಾಗಿ ತೊಂದರೆ ಇದೆ ಆ ಎಲ್ಲವನ್ನು ನಿರ್ಮೂಲ ಮಾಡುವಂತ ಒಂದು ಪದ್ಧತಿ. ಇಲ್ಲ ಅವರ ಜೊತೆ ಹೋಗಬೇಕು, ಇಲ್ಲ ಸರೆಂಡರ್ ಆಗಬೇಕು, ಇಲ್ಲ ಅಂದ್ರೆ ಅವರನ್ನು ಮುಗಿಸಬೇಕು ಎಂದಿದ್ದಾರೆ.
ರಾಜಕೀಯವಾಗಿ ಇರುವಂತ ಎಲ್ಲಾ ಅಸ್ತ್ರಗಳನ್ನು ಪ್ರಯೋಗ ಮಾಡುತ್ತಿದ್ದಾರೆ. ಶಾಸಕರು, ಮಂತ್ರಿಗಳು ದೊಡ್ಡ ದೊಡ್ಡವರೆಲ್ಲಾ ಏನು ಬೇಕೋ ಅದನ್ನು ಹೇಳಿದ್ರು. ಅವರು ಹೇಳಿದಂತೆ ಇವರು ಮಾಡುತ್ತಿದ್ದಾರೆ. ಅವರಿಗೆ ಎಲ್ಲಾ ಗೊತ್ತು. ಕೋರ್ಟ್ ಗೊತ್ತು, ಪೊಲೀಸ್ ಗೊತ್ತು. ಮಾಡಿಕೊಳ್ಳಲಿ ನೋಡೋಣಾ. ಸಾಮಾನ್ಯವಾಗಿ 60 ದಿನದಲ್ಲಿ ಜಾರ್ಚ್ ಶೀಟ್ ಹಾಕೋರು. ಅದಕ್ಕೂ ಮುನ್ನ ನಂಗೆ ಬೇಲ್ ಸಿಕ್ಕಿತ್ತು. ಜಾಮೀನು ಕ್ಯಾನ್ಸಲ್ ಮಾಡುವುದಕ್ಕೆ ಹೊರಟಿದ್ದರು. ಸುಪ್ರೀಂ ಕೋರ್ಟ್ ಸಾಧ್ಯವಿಲ್ಲ ಎಂದು ಹೇಳಿತ್ತು. ಅವರು ನಮಗೆ ನೋಟೀಸ್ ಕೊಡ್ತಾರೆ ಅದು ಕಾನೂನು.