ತುಮಕೂರು: ಚುನಾವಣೆಗೆ ಇನ್ನು ಒಂದು ವರ್ಷವಿರುವಾಗಲೇ ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಗಾಗಿ ಕಿತ್ತಾಟ ಶುರುವಾಗಿದೆ. ಇನ್ನು ಕುಣಿಗಲ್ ನಲ್ಲಿ ಹಾಲಿ ಶಾಸಕ ಡಾ.ರಂಗನಾಥ್ ಮತ್ತು ಮಾಜಿ ಶಾಸಕ ರಾಮಸ್ವಾಮಿಗೌಡ ನಡುವೆ ಟಿಕೆಟ್ ಫೈಟ್ ಶುರುವಾವಿದ್ದು, ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷರ ಮೇಲೆಯೇ ಮಾಜಿ ಶಾಸಕ ರಾಮಸ್ವಾಮಿಗೌಡ ಗರಂ ಆಗಿದ್ದಾರೆ.
ಈ ಸಂಬಂಧ ಮಾತನಾಡಿರುವ ರಾಮಸ್ವಾಮಿ ಗೌಡ, ಟಿಕೆಟ್ ಸಿಕ್ಕಿಲ್ಲ ಎಂದರು ನಾನು ಸ್ಪರ್ಧಿಸುತ್ತೇನೆ. ಬಂಡಾಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ. ಹಾಲಿ ಮಾಜಿ ಎಂಬುದು ಬರುವುದಿಲ್ಲ, ಸಂಬಂಧಿ ಎನ್ನುವುದು ಬರಬಹುದು. ಟಿಕೆಟ್ ಸಿಕ್ಕಿಲ್ಲ ಎಂದರೂ ನಾನು ನಿಂತೆ ನಿಲ್ಲುತ್ತೇನೆ ಗೆದ್ದೆ ಗೆಲ್ಲುತ್ತೇನೆ, ಎಂಎಲ್ಎ ಆಗುತ್ತೇನೆ ಎಂದು ರೆಬೆಲ್ ಆಗಿದ್ದಾರೆ.
ಅವರಿಗೆ ನಾನು ಒಂದು ಎರಡು ಮೂರು ಅಂತ ಚಾನ್ಸ್ ಕೊಟ್ಟುಬಿಟ್ಟಿದ್ದೀನಿ. ಅವರ ಮನಸ್ಸಲ್ಲಿ ಅದು ಉಳಿಯಬೇಕಿತ್ತು. ಚುನಾವಣೆಗೆ ನಿಂತೇ ನಿಲ್ಲುತ್ತೇನೆ. ನನಗೆ ಕಾಂಗ್ರೆಸ್ ಬಲವಿದೆ ಎನ್ನುತ್ತಾರೆ. ಬಿಜೆಪಿ ಆರ್ಭಟದಲ್ಲಿ ತುಮಕೂರು ಸಿಟಿ ಯಾವ ರೀತಿ ಆಗುತ್ತೆ ಎಂಬುದು ಗೊತ್ತಿಲ್ಲ. ಮುದ್ದಹನುಮೇಗೌಡರನ್ನೇ ತಗೋಳ್ತಾ ಇದ್ದೀರಿ. ನಾನು ಕೂಡ ಅವರಂತೆ ಶಾಸಕ ಇದ್ದೀನಿ. ನನಗೂ ಸಿದ್ದರಾಮಣ್ಣ, ಡಿಕೆ ಶಿವಕುಮಾರ್ ಪ್ರಾಮಿಸ್ ಮಾಡಿದ್ದರು. ಟಿಕೆಟ್ ಕೂಡ ಅನೌನ್ಸ್ ಆಗಿತ್ತು. ಆದರೆ ಅನೌನ್ಸ್ ಆಗಿರುವ ಟಿಕೆಟ್ ಮತ್ತೆ ಬದಲಾಯಿಸಿದ್ರು. ಬಳಿಕ ನನಗೆ ಪ್ರಾಮಿಸ್ ಮಾಡಿದ್ದರು. ಮುಂದಿನ ಚುನಾವಣೆಯಲ್ಲಿ ಟಿಕೆಟ್ ಕೊಡ್ತೀನಿ ಅಂತ. ಈಗ ಮುಂದಿನ ಚುನಾವಣೆ ಬಂತಲ್ಲ ನೋಡ್ತೀನಿ ಎಂದಿದ್ದಾರೆ.