ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮಳೆಹಾನಿ ಪ್ರದೇಶಕ್ಕೆ ಭೇಟಿ ನೀಡಿದ್ದು, ಈ ವೇಳೆ ಮಾತನಾಡಿದ ಅವರು, ಕಳೆದ ಎರಡು ದಿನಗಳು ಕೆಲವು ಪ್ರದೇಶಗಳಿಗೆ ಭೇಟಿ ಕೊಟ್ಟಿದ್ದೇನೆ. ಕೆಲವು ಕಡೆ ಅತ್ಯಂತ ಕಳಪೆ ಕಾಮಗಾರಿಯಾಗಿದೆ. ಕೆಲವು ವರ್ಷದಿಂದ ಅಲ್ಲಿನ ಜನ ತುಂಬಾ ಸಮಸ್ಯೆ ಅನುಭವಿಸುತ್ತಿದ್ದಾರೆ. ಮಳೆ ಅನಾಹುತದ ಬಗ್ಗೆ ವರದಿ ಕೊಟ್ಟಿದ್ದಾರೆ. ಆದರೆ ಇಲ್ಲಿನ ಜನಕ್ಕೆ 10 ರಿಂದ ಹದಿನೈದು ವರ್ಷದಿಂದ ಪರಿಹಾರ ಸಿಕ್ಕಿಲ್ಲ.
ಇದು ನಗರದ ಪರಿಸ್ಥಿತಿ ಆದ್ರೆ ಹಳ್ಳಿಗಳ ಕಡೆಯಲ್ಲೂ ಸಾಕಷ್ಟು ಸಮಸ್ಯೆ ಎದುರಾಗಿದೆ. ರೈತರು ಬೆಳೆದ ಬೆಳೆ ನಾಶವಾಗುತ್ತಿದೆ. ದೊಡ್ಡ ಮಟ್ಟದಲ್ಲಿ ಹೆಚ್ಚಾಗಿದೆ. ಶಿವಮೊಗ್ಗ ಅಂತ ನಗರದಲ್ಲಿಯೇ ಸಮಸ್ಯೆಯಾಗಿದೆ. ಮುಖ್ಯಮಂತ್ರಿ ಬಿಜೆಪಿಯಿಂದ ಆ ಭಾಗದಲ್ಲಿ ನಾಲ್ಕು ಐದು ವರ್ಷದಿಂದ ಇದ್ದಾರೆ. ಮಂತ್ರಿಗಳಿದ್ದಾರೆ. ಶಿವಮೊಗ್ಗದಂತ ನಗರಗಳಲ್ಲಿಯೇ ಮನೆಗಳಿಗೆ ನೀರು ನುಗ್ಗಿದೆ. ಯಾರು ಕೂಡ ಸ್ಥಳಕ್ಕೆ ಭೇಟಿ ಕೊಟ್ಟು ಸರಿಯಾದ ರೀತಿಯಲ್ಲಿ ಪರಿಹಾರ ಕೊಟ್ಟಿಲ್ಲ ಅಂತ ಶಿವಮೊಗ್ಗದಲ್ಲಿ ಹೇಳುತ್ತಿದ್ದಾರೆ.
ಮುಖ್ಯಮಂತ್ರಿಗಳು ತಂಡಗಳೊಂದಿಗೆ ಹೊರಟಿದ್ದಾರೆ. ಝೋನಲ್ ವೈಸ್ ನಲ್ಲಿ ಮಂತ್ರಿಗಳಿಗೆ ಉಸ್ತುವಾರಿ ನೀಡಿದ್ದಾರೆ. ಅಶ್ವತ್ಥ್ ನಾರಾಯಣ್ ಕೂಡ ದಾವೋಸ್ ಹೋಗಿದ್ದಾರೆ. ಆದರೆ ನಾಮಾಕಾವಸ್ಥೆಗೆ ಹೋಗಿದ್ದಾರೆ. ಬೇರೆ ವಿಧಾನಸಭಾ ಕ್ಷೇತ್ರ ಬಿಡಿ, ಬೆಂಗಳೂರಿನ ಪರಿಸ್ಥಿತಿ ನೋಡಿದ್ದೀರಾ ಎಂದು ಕೇಳಿದ್ದಾರೆ.