ಕೊಪ್ಪಳ: ಮುಂಗಾರು ಮಳೆ ಆರಂಭದಲ್ಲಿಯೇ ಊಹಿಸಲಾರದ ಮಟ್ಟಿಗೆ ಅವಾಂತರ ಸೃಷ್ಟಿಸಿದೆ. ಬೆಂಬಿಡದೆ ಸುರಿಯುತ್ತಿರುವ ಮಳೆಗೆ ರೈತರ ಬೆಳೆ ನಾಶವಾಗಿದೆ, ಎಷ್ಟೋ ಜನರ ಮನೆಗಳು ಉದುರಿವೆ. ರೈತರ ಪಾಡಂತು ಸಂಕಷ್ಟದಲ್ಲಿ ಸಿಲುಕಿದೆ. ಇದೀಗ ಕೊಪ್ಪಳದಲ್ಲೂ ಅಂತದ್ದೊಂದು ಸ್ಥಿತಿ ಕಂಡು ಬಂದಿದೆ. ಸುರಿದ ಬಾರೀ ಮಳೆಗೆ ರೈತರ ಬೆಳೆ ಅಪಾರ ಪ್ರಮಾಣದಲ್ಲಿ ನಷ್ಟವಾಗಿದೆ.
ಕೊಪ್ಪಳದಲ್ಲಿ ಕಳೆದ ಮೂರು ದಿನದಿಂದ ಸುರಿದ ಬಾರೀ ಮಳೆಗೆ 800 ರೈತರ ಬೆಳೆ ಹಾನಿಯಾಗಿದೆ. 620 ಹೆಕ್ಟೇರ್ ಪ್ರದೇಶದ ಕೃಷಿ ಸಂಪೂರ್ಣ ಹಾನಿಯಾಗಿದ್ದು, 64.5 ಲಕ್ಷದಷ್ಟು ರೈತರಿಗೆ ನಷ್ಟವಾಗಿದೆ. ಅಷ್ಟೇ ಅಲ್ಲ ಕೊಪ್ಪಳದಲ್ಲಿ ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ.
ಸುಮಾರು 7 ಮನೆಗಳು ಸಂಪೂರ್ಣವಾಗಿ ಜಖಂ ಆಗಿದ್ದು, ಒಬ್ಬ ವ್ಯಕ್ತಿ ಮತ್ತು ಐದು ಜಾನುವಾರುಗಳು ಸಾವನ್ನಪ್ಪಿವೆ. 236 ಮನೆಗಳು, 24 ಶಾಲಾ ಕೊಠಡಿಗಳು, 139 ಅಂಗನವಾಡಿಗಳು ನೆಲಕ್ಕುರುಳಿವೆ. ವಿದ್ಯುತ್ ಲೈನ್ ಕೂಡ ನೆಲಕ್ಕುರುಳಿವೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.