ಚಿತ್ರದುರ್ಗ,(ಮೇ. 19) : ಚಿತ್ರದುರ್ಗ ತಾಲ್ಲೂಕಿನ 15 ಗ್ರಾಮಗಳು ಹಾಗೂ ಹೊಸದುರ್ಗ, ತಾಲ್ಲೂಕಿನ 1 ಗ್ರಾಮ ವ್ಯಾಪ್ತಿಯ ಪಡಿತರ ಚೀಟಿದಾರರ ಹಾಗೂ ಸಾರ್ವಜನಿಕ ವಿತರಣಾ ವ್ಯವಸ್ಥೆ ಪರಿಣಾಮಕಾರಿಗೊಳಿಸುವ ದೃಷ್ಠಿಯಿಂದ ಹೊಸದಾಗಿ ನ್ಯಾಯಬೆಲೆ ಅಂಗಡಿ ಮಂಜೂರು ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
ಚಿತ್ರದುರ್ಗ ತಾಲ್ಲೂಕಿನ
ಚಿಕ್ಕಪುರ ಗೊಲ್ಲರಹಟ್ಟಿ -151, ಹುಣಸೇಕಟ್ಟೆ-190, ಹಿರೇಗುಂಟನೂರು ಗೊಲ್ಲರಹಟ್ಟಿ-133, ಹುಲ್ಲೇಹಾಲ್ ಗೊಲ್ಲರಹಟ್ಟಿ-118, ಹಿರೇಬೆನ್ನೂರು ಗೊಲ್ಲರಹಟ್ಟಿ 194, ಕೊಳಹಾಳ್ ಗೊಲ್ಲರಹಟ್ಟಿ-153, ಕೊಡಿರಂಗವ್ವನಹಳ್ಳಿ ವಡ್ಡರಹಳ್ಳಿ-112, ಚೌಳಿಹಳ್ಳಿ ಗೊಲ್ಲರಹಟ್ಟಿ-210, ಭರಮಸಾಗರ ಗೊಲ್ಲರಹಟ್ಟಿ-117, ಯಳವರರ್ತಿ ಗೊಲ್ಲರಹಟ್ಟಿ-110, ಇಂಗಳದಾಳ್ ಲಂಬಾಣಿಹಟ್ಟಿ-142, ಚಿಕ್ಕಗೊಂಡನಹಳ್ಳಿ ಗೊಲ್ಲರಹಟ್ಟಿ-119, ಗೊಲ್ಲನಕಟ್ಟೆ-142, ಇಸಾಮುದ್ರ ಗೊಲ್ಲರಹಟ್ಟಿ-273, ಜೋಡಿಚಿಕ್ಕೇನಹಳ್ಳಿ ಗೊಲ್ಲರಹಟ್ಟಿ-160, ಹಂಪಯ್ಯನಮಾಳಿಗೆ ಗೊಲ್ಲರಹಟ್ಟಿ-115, ಮಲ್ಲಾಪುರ ಗೊಲ್ಲರಹಟ್ಟಿ-668, ಪಡಿತರ ಚೀಟಿಗಳು ಇವೆ.
ಹೊಸದುರ್ಗ ತಾಲ್ಲೂಕಿನ ಹೊಸದುರ್ಗ ಟೌನ್ ವಾರ್ಡ್ ನಂ 8,9,10, ಕೇಂದ್ರಸ್ಥಾನ 812 ಪಡಿತರ ಚೀಟಿಗಳು ಇವೆ. ಆಸಕ್ತರು ಪ್ರಕಟಣೆ ಹೊರಡಿಸಿದ ದಿನಾಂಕದಿಂದ 30 ದಿನದೊಳಗಾಗಿ, ಅಗತ್ಯ ಧೃಡೀಕೃತ ದಾಖಲೆಗಳೊಂದಿಗೆ ಜಂಟಿ ನಿರ್ದೇಶಕರು, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣ ಚಿತ್ರದುರ್ಗ, ಇವರಿಗೆ ಅರ್ಜಿ ಸಲ್ಲಿಸಬಹದು. ನಿಗಧಿತ ಅವಧಿಯ ನಂತರ ಸಲ್ಲಿಕೆಯಾಗುವ ಅಥವಾ ಬೇರೆ ಕಚೇರಿಯಲ್ಲಿ ಸಲ್ಲಿಕೆಯಾಗುವ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.
ಚಿತ್ರದುರ್ಗ, ಹೊಸದುರ್ಗ, ತಾಲ್ಲೂಕಿನ ತಹಶೀಲ್ದಾರ್ ಕಚೇರಿಯಲ್ಲಿ ಅರ್ಜಿಗಳನ್ನು ಪಡೆಯಬಹುದು ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.