ಚಿತ್ರದುರ್ಗ, (ಮೇ.19) : ನಗರದ ಪ್ರತಿಷ್ಠಿತ ಶಾಲೆಗಳಲ್ಲೊಂದಾದ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯ, ವಿದ್ಯಾರ್ಥಿಗಳು 2021-22ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇಕಡ 100ಕ್ಕೆ 100ರಷ್ಟು ಫಲಿತಾಂಶ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.
ರಕ್ಷಾ ಬಿ.ಎಂ 625ಕ್ಕೆ 625 ಅಂಕ ಗಳಿಸಿ ಜಿಲ್ಲೆಗೆ ಹಾಗೂ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿರುತ್ತಾರೆ.
ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 139 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದು, ಇದರಲ್ಲಿ 92 ವಿದ್ಯಾರ್ಥಿಗಳು ಶೇ.85ಕ್ಕಿಂತ ಹೆಚ್ಚು ಅಂಕ, 45 ವಿದ್ಯಾರ್ಥಿಗಳು ಶೇ.60 ಕ್ಕಿಂತ ಹೆಚ್ಚು ಅಂಕ ಹಾಗೂ ಇಬ್ಬರು ವಿದ್ಯಾರ್ಥಿಗಳು ಶೇ.50ಕ್ಕಿಂತ ಹೆಚ್ಚು ಅಂಕ ಪಡೆದು ಶಾಲೆಗೆ ಕೀರ್ತಿ ತಂದಿರುತ್ತಾರೆ.
ಪರೀಕ್ಷೆ ತೆಗೆದುಕೊಂಡ ವಿದ್ಯಾರ್ಥಿಗಳ ಒಟ್ಟು ಸಂಖ್ಯೆ – 139
ಶಾಲೆಯ ಶೇಕಡವಾರು ಫಲಿತಾಂಶ – 100 %
ಶೇಕಡಾ 85% ಕ್ಕಿಂತ ಹೆಚ್ಚು ಅಂಕಗಳು – 92
ಶೇಕಡಾ 60% ಕ್ಕಿಂತ ಹೆಚ್ಚು ಅಂಕಗಳು -45
ಶೇಕಡಾ 50% ಕ್ಕಿಂತ ಹೆಚ್ಚು ಅಂಕಗಳು – 02
100ಕ್ಕೆ 100 ಅಂಕಗಳನ್ನು ಪಡೆದ ವಿದ್ಯಾರ್ಥಿಗಳ ವಿವರ.
ಕನ್ನಡ – (125/125) – 29
ಇಂಗ್ಲೀಷ್ – (100/100) – 13
ಹಿಂದಿ – (100/100) – 28
ಗಣಿತ – (100/100) – 05
ಸಾಮಾನ್ಯ ವಿಜ್ಞಾನ – (100/100) – 08
ಸಮಾಜ ವಿಜ್ಞಾನ – (100/100) – 22
ಅತ್ಯುತ್ತಮ ಸಾಧನೆಗೈದ ಈ ವಿದ್ಯಾರ್ಥಿಗಳಿಗೆ ಸಂಸ್ಥೆಯ ಕಾರ್ಯದರ್ಶಿಗಳಾದ ಬಿ.ವಿಜಯ್‍ಕುಮಾರ್‍ರವರು, ಶಾಲಾ ಮುಖ್ಯೋಪಾಧ್ಯಾಯರಾದ ಸಂಪತ್ ಕುಮಾರ್ ಸಿ.ಡಿ, ಕ್ಯಾಂಪಸ್ ಇನ್‍ಚಾರ್ಜ್ ಪೃಥ್ವೀಶ್ ಎಸ್.ಎಂ, ಹೆಡ್ ಕೋ-ಆರ್ಡಿನೇಟರ್ ಬಸವರಾಜಯ್ಯ ಪಿ ಹಾಗೂ ಸಂಸ್ಥೆಯ ಬೋಧಕ/ಬೋಧಕೇತರ ವರ್ಗ ಶ್ಲಾಘಿಸಿ ತುಂಬು ಹೃದಯದಿಂದ ಅಭಿನಂದಿಸಿರುತ್ತಾರೆ.