ಹಾಸನ: ಪಠ್ಯ ಪುಸ್ತಕದಲ್ಲಿ ಹೆಡ್ಗೆವಾರ್ ಅವರ ಪಠ್ಯ ಅಳವಡಿಸುವ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಅವರು ಮಾತನಾಡಿದ್ದು, ಇವತ್ತ್ ಬೆಳಗ್ಗೆ ಒಂದು ಟ್ವೀಟ್ ಮಾಡಿದ್ದೆ ನಾನು. ಭಗತ್ ಸಿಂಗ್ ಅಂತ ಒಬ್ಬ ದೇಶ ಪ್ರೇಮಿ, ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಂತ ವ್ಯಕ್ತಿ. ಅಂತವರ ವಿಷಯಗಳನ್ನು ತೆಗೆದು ಹಾಕಿ ಹೆಡ್ಗೆವಾರ್ ಎಂಬಂತದ್ದು, ಇನ್ಯಾರೋ ಗೋಡ್ಸೆ ವಿಷಯ ಇಟ್ಟುಕೊಳ್ತೀರೋ, ಅಥವಾ ಸಾವರ್ಕರ್ ಇಟ್ಟುಕೊಳ್ತಿರೋ ಮುಂದೊಂದು ದಿನ ಬೇರೆ ಏನೇನೋ ಇಟ್ಟುಕೊಳ್ತಿರೋ ಗೊತ್ತಿಲ್ಲ ಎಂದು ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಇದರಿಂದ ಸಮಾಜದ ಸಾಮರಸ್ಯಕ್ಕೆ ಧಕ್ಕೆಯುಂಟಾಗುತ್ತಿದೆ. ಅದೆ ನಿಮಗೂ ಬೇಕಾಗಿದೆ. ಈಗ ಕಾಶ್ಮೀರಿ ಫೈಲ್ ಏನೊ ತೆಗೆದ್ರಿ, ಕಾಶ್ಮೀರಿ ಫೈಲ್ಸ್ ತೆಗೆದಾಗಿನಿಂದ ಶಾಂತಿ ನೆಲೆಸುವುದಕ್ಕೆ ಅವಕಾಶ ಕೊಟ್ಟಿದ್ದೀರಾ..? ಇವತ್ತು ಅಲ್ಲಿನ ರಾಜಕಾರಣಿಗಳು ಏನು ಹೇಳಿಕೆ ಕೊಟ್ಟಿದ್ದಾರೆ ಎಂಬುದನ್ನು ಗಮನಿಸಿದ್ದೀನಿ. ವಿಷದ ಮನೋಭಾವ ಬಿತ್ತಿಸಬೇಡಿ. ಪ್ರತಿಯೊಬ್ಬರಲ್ಲಿ ಸಾಮರಸ್ಯ, ಭಾವೈಕ್ಯತರ ಯಾವ ರೀತಿ ತರಬೇಕು ಎಂಬುದರ ಬಗ್ಗೆ ಗಮನ ಕೊಡಿ ಎಂದಿದ್ದಾರೆ.
ಪಠ್ಯದಲ್ಲಿ ಯಾವ ವಿಚಾರವನ್ನಾದರೂ ಇಟ್ಟುಕೊಳ್ಳಿ ಮಕ್ಕಳಿಗೆ ಬೇಕಾಗಿರುವುದು ಉತ್ತಮವಾದ ಶಿಕ್ಷಣ. ಎಲ್ಲಿಯೋ ಸುದ್ದಿ ನೋಡಿದೆ, ಅಲ್ಲೊಂದು ಶಾಲೆಯಲ್ಲಿ ಮಕ್ಕಳಿಗೆ ಕಟ್ಟಡವೇ ಇರಲ್ಲ ಎಂದು ಶ್ರೀನಿವಾಸಪುರದಲ್ಲಿ. ಹೊರಗಡೆ ಮರಗಳ ನಡುವೆ ಪಾಠ ಮಾಡುತ್ತಿದ್ದಾರೆ ಎಂದು. ಇಲ್ಲಿ ಗುಣಾತ್ಮಕವಾದ ಶಿಕ್ಷಣ ಬೇಕು. ಇಲ್ಲಿ ಯಾವ ವ್ಯಕ್ತಿಗಳನ್ನು ಮುಂದಿಟ್ಟುಕೊಂಡು ಅವರ ಬಗ್ಗೆ ಪಾಠ ಹೇಳಿ ಕಲಿಸುವುದು ಬೇಡ. ಮಕ್ಕಳಿಗೆ ಕಲಿಸಬೇಕಾಗಿರುವುದ ಮನುಷ್ಯತ್ವ, ಹೃದಯ ವೈಶಾಲ್ಯತೆ, ಬದುಕುವಂತ ಮಾರ್ಗ. ಕಲಿಸವೇಕಾಗಿರುವುದು ಇದು. ಅದರ ಕಡೆ ಗಮನ ಕೊಡಲಿ ಎಂಬುದು ನನ್ನ ಅಭಿಪ್ರಾಯ ಎಂದಿದ್ದಾರೆ.