ಈಗಾಗಲೇ ಸೆಷನ್ ಕೋರ್ಟ್ ಗೆ ವರದಿ ಸಲ್ಲಿಸಬೇಕೆಂದು ಸೂಚನೆ ನೀಡಿತ್ತು. ಇದೀಗ ವರದಿ ಸಲ್ಲಿಸಲು ಟೀಂ ಸಮಾಯವಾಕಾಶಕೋರಿದೆ. ವಿಡಿಯೋ ಮೂಲಕ ಸರ್ವೆ ಮಾಡಿರುವುದನ್ನು ಲಿಖಿತ ರೂಪದಲ್ಲಿ ಕೊಡಲು ಕಾಲಾವಕಾಶವನ್ನು ಕೇಳಲಾಗಿದೆ.
ಮುಸ್ಲಿಂ ಬೋರ್ಡ್ ಈ ಬೆನ್ನಲ್ಲೇ ಸಭೆ ಕರೆದಿದ್ದು, ಹಲವು ವಿಚಾರಗಳನ್ನು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಎಲ್ಲಾ ಸಾಕ್ಷಿಗಳು ಸಿಕ್ಕಿದರೆ ಮಸೀದಿಯನ್ನು ಬಂದ್ ಮಾಡುವ ಸಾಧ್ಯತೆ ಇದೆ. ಹೀಗಾಗಿ ಈ ವಿಚಾರಕ್ಕೆ ಮುಸ್ಲಿಂ ಮುಖಂಡರು ಆಕ್ರೋಶಗೊಂಡಿದ್ದಾರೆ ಎನ್ನಲಾಗಿದೆ. ಮುಸ್ಲಿಂ ಸಂಘಟನೆಗಳು ಕರೆದಿದ್ದು, ಆ ಸಂಘಟನೆಯಲ್ಲಿ ಕೆಲವೊಂದು ವಿಚಾರಗಳು ಚರ್ಚೆಯಾಗಿದೆ. ಸರ್ವೆ ವರದಿಯಿಂದಾಗಿ ಮಸೀದಿ ಬಂದ್ ಮಾಡುವುದು ಸರಿಯಲ್ಲ ಎಂಬ ಚರ್ಚೆಗಳು ನಡೆಯುತ್ತಿದೆ. ಇಂತಹ ಘೋರವಾದ ಅನ್ಯಾಯ ಸಲ್ಲಿಸಲು ಸಾಧ್ಯವಿಲ್ಲ ಎಂಬ ಮಾತುಗಳು ಕೇಳಿ ಬಂದಿದೆ ಎನ್ನಲಾಗಿದೆ.
ಕಳೆದ ಮೂರು ದಿನಗಳಿಂದ ಜ್ಞಾನವ್ಯಾಪಿ ಮಸೀದಿಯಲ್ಲಿ ಹಿಂದೂ ದೇವರ ಕುರುಹುಗಳು ಇದೆ ಎಂಬುದು ಸೂಕ್ಷ್ಮತೆಗಳು ತಿಳಿದು ಬಂದ ಮೇಲೆ, ಕೋರ್ಟ್ ಆದೇಶದ ಮೇಲೆ ಒಂದು ತಂಡ ರಚಿಸಿ, ಸಂಪೂರ್ಣ ಶೋಧ ಮಾಡಲಾಗಿದೆ. ಈಗಾಗಲೇ ಶೋಧ ಕಾರ್ಯ ಮುಗಿಸಿರುವ ಟೀಂ, ಸೆಷನ್ ಕೋರ್ಟ್ ಗೆ ಸಾಕ್ಷಿಗಳನ್ನು ಸಲ್ಲಿಸಲಿದೆ.