ಮಂಡ್ಯ: ಶಾಲಾ ಆವರಣದಲ್ಲಿ ಹಿಜಾಬ್ ಧರಿಸಬಾರದು ಎಂದು ನಿರ್ಬಂಧಿಸಲಾಗಿದೆ. ಆದರೆ ಕೊಡಗಿನ ಶಾಲೆಯೊಂದರ ಆವರಣದಲ್ಲಿ ಭಜರಂಗದಳದವರು ಶಸ್ತ್ರಾಸ್ತ್ರ ತರಬೇತಿ ನೀಡಿದ್ದಾರೆ. ಈ ಸಂಬಂಧ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಮಾತನಾಡಿ, ಯಾವುದು ಕಾನೂನುಬಾಹಿರವಿದೆ ಅದಕ್ಕೆ ಅವಕಾಶನೀಡಬಾರದು ಎಂದಿದ್ದಾರೆ.
ಜಾಮೀಯಾ ಮಸೀದಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಯಾರ್ಯಾರು ಅರ್ಜಿ ಕೊಡುತ್ತಾರೋ ಕೊಡಲಿ, ಕಾನೂನು ಪ್ರಕಾರ ಅರ್ಜಿ ವಿಚಾರಣೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ನಾಯಕರ ಮೇಲೆ ಕಿಡಿಕಾರಿದ್ದು, ಹಿಂದೂಪರ ಸಂಘಟನೆಗಳನ್ನು ಮುಂದೆ ಬಿಡುತ್ತಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿ, ಅವರು ಎಲ್ಲದರಲ್ಲೂ ರಾಜಕಾರಣ ಮಾಡುತ್ತಾರೆ. ಅವರ ವೈಫಲ್ಯಗಳನ್ನು ಮುಚ್ಚಿಕೊಳ್ಳುವುದಕ್ಕೆ ಈ ರೀತಿ ಹೇಳಿಕೆ ಕೊಡುತ್ತಾರೆ. ಯಾಕೆ ಹಿಜಾಬ್ ಯಾರು ಪ್ರಾರಂಭ ಮಾಡಿದ್ದು ಎಂಬುದು ಜಗತ್ತಿಗೆ ಗೊತ್ತಿದೆ. ಅದರಿಂದಿರುವ ಎಲ್ಲಾ ಶಕ್ತಿಗಳು ಕಾಂಗ್ರೆಸ್ ಮಿತ್ರರೆ. ಎಲ್ಲದಕ್ಕೂ ಕೂಡ ಕಾನೂನು ಬಾಹಿರವಾಗಿ ಮಾಡುವುದು, ಆಮೇಲೆ ಇನ್ನೊಬ್ಬರ ಮೇಲೆ ಗೂಬೆ ಕೂರಿಸುವುದು ಅದಕ್ಕೆ ಹೆಚ್ಚಿನ ಮಹತ್ವ ಕೊಡುವ ಅಗತ್ಯವಿಲ್ಲ ಎಂದಿದ್ದಾರೆ.