ಕಲಬುರಗಿ: ಜಿಲ್ಲೆಯಲ್ಲಿ ಬಿಜೆಪಿ ಸಮಾವೇಶ ನಡೆಯುತ್ತಿದ್ದು, ಇದರಲ್ಲಿ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಕಾಂಗ್ರೆಸ್ ನಾಯಕರ ವಿರುದ್ಧ, ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನರೇಂದ್ರ ಮೋದಿಯವರು ಪ್ರಧಾನಿಯಾಗುವುದಕ್ಕೆ ಮುನ್ನ ಕಿಸಾನ್ ಸಮ್ಮಾನ್ ಯೋಜನೆ ಜಾರಿಯಾಗಿರಲಿಲ್ಲ. ರೈತರ ಖಾತೆಗೆ ಕರ್ನಾಟಕದಲ್ಲಿ ಹತ್ತು ಸಾವಿರ ಹಣ ಬರ್ತಾ ಇದೆಯಲ್ಲ, ಕಾಂಗ್ರೆಸ್ ಇದ್ದಾಗ ಕೊಟ್ಟಿದ್ದಲ್ಲ, ಮಣ್ಣಿನ ಮಗ ದೇವೇಗೌಡರಿದ್ದಾಗ ಕೊಟ್ಟಿದ್ದಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ದೇಶಭಕ್ತ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ಮೇಲೆ ಕಿಸಾನ್ ಸಮ್ಮಾನ್ ಯೋಜನೆ, ಫಸಲ್ ಭೀಮಾ ಯೋಜನೆ ಬಂತು. ಇದೊಂದು ದಾಖಲೆ. ಹಾಗೆ 8 ಸಾವಿರ ದೇಶದ ಉದ್ಧಗಲಕ್ಕೆ ಪ್ರಧಾನಮಂತ್ರಿ ಜನೌಷಧ ಕೇಂದ್ರಗಳು ಕಾರ್ಯನಿರ್ವಹಿಸುತ್ತಾ ಇದಾವೆ. ನಾವೂ ಸಾಧನೆಗಳನ್ನು ಮರೆಯಬಾರದು. ಸಾಧನೆಗಳ ಬಗ್ಗೆ ಮಾತನಾಡುವುದನ್ನು ಬಿಡಬಾರದು. ಸಾಧನೆಗಳನ್ನು ಮತ್ತೆ ಮತ್ತೆ ನೆನಪು ಮಾಡುವಂತ ಕೆಲಸಗಳಾಗಬೇಕು ಎಂದಿದ್ದಾರೆ.
ಹಣದುಬ್ಬರ ಮತ್ತು ಬೆಲೆ ಏರಿಕೆಯ ಬಿಸಿಗೆ ಬಹುತೇಕ ದೇಶಗಳು ತತ್ತರಿಸಿ ಹೋಗಿವೆ. ಶ್ರೀಲಂಕಾದಲ್ಲಿ ಅರಾಜಕತೆ ತಾಂಡವವಾಡುತ್ತಿದೆ. ಸಂಸದೆನ್ನೆ ಅಟ್ಟಾಡಿಸಿ ಕೊಂದಂತ ಧಾರುಣ ಘಟನೆಯೂ ಶ್ರೀಲಂಕಾದಲ್ಲಿ ನಡೆದಿದೆ. ಪೆಟ್ರೋಲ್, ಹಾಲು, ಅಕ್ಕಿ, ಗೋಧಿ, ಸೀಮೆ ಎಣ್ಣೆಯೂ ಸಿಗದಂತ ಸ್ಥಿತಿ ಶ್ರೀಲಂಕಾದಲ್ಲಿದೆ. ಪಾಕಿಸ್ತಾನ ಅಯೋಮಯ ಸ್ಥಿತಿಯಲ್ಲಿದೆ. ಅಫ್ಘಾನಿಸ್ತಾನ ಬದುಕುವುದಕ್ಕೋಸ್ಕರ ಭಾರತದ ಗೋಧಿಯನ್ನು ಅವಲಂಬಿಸಿದೆ. ಆದರೆ ಭಾರತದಲ್ಲಿ ಮೋದಿಯವರ ಕೈನಲ್ಲಿ ಭಾರತ ಸುರಕ್ಷಿತವಾಗಿದೆ ಎಂದಿದ್ದಾರೆ.