ನವದೆಹಲಿ: ಭಾರತೀಯ ಕಿಸಾನ್ ಒಕ್ಕೂಟದಿಂದ ರಾಕೇಶ್ ಟಿಕಾಯತ್ ಅವರನ್ನು ಉಚ್ಛಾಟನೆ ಮಾಡಲಾಗಿದೆ. ಅದರ ಜೊತೆಗೆ ಅವರ ಸಹೋದರ ನರೇಶ್ ಟಿಕಾಯತ್ ಅವರನ್ನು ಒಕ್ಕೂಟದ ಅಧ್ಯಕ್ಷ ಸ್ಥಾನದಿಂದ ಹೊರಹಾಕಲಾಗಿದೆ. ರೈತ ಹೋರಾಟದ ರುವಾರಿಯಾಗಿದ್ದ ರಾಕೇಶ್ ಟಿಕಾಯತ್ ಉಚ್ಛಾಟನೆ ಕೆಲವರಿಗೆ ಶಾಕ್ ಎನಿಸಿದೆ.
ಉಚ್ಛಾಟನೆ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಭಾರತೀಯ ಕಿಸಾನ್ ಒಕ್ಕೂಟ, ರೈತರ ಹೋರಾಟವನ್ನು ರಾಜೇಶ್ ಟಿಕಾಯತ್ ತಮ್ಮ ರಾಜಕೀಯ ಉದ್ದೇಶಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಹೋರಾಟಕ್ಕೆ ರಾಜಕೀಯ ಬಣ್ಣ ಬಳಿಯುತ್ತಿದ್ದಾರೆ. ಇದು ಒಕ್ಕೂಟದಲ್ಲಿ ಬಿರುಕು ಮೂಡುವುದಕ್ಕೆ ಆಸ್ಪದ ಮಾಡಿಕೊಡುತ್ತಿದೆ. ಹೀಗಾಗಿ ಟಿಕಾಯತ್ ಅವರನ್ನು ಒಕ್ಕೂಟದಿಂದ ಹೊರಹಾಕುತ್ತಿದ್ದೇವೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ರಾಕೇಶ್ ಟಿಕಾಯತ್ ಎಂದ ಕೂಡಲೇ ನೆನಪಾಗುವುದು ರೈತರ ಹೋರಾಟ. ಕೇಂದ್ರ ಮೂರು ರೈತ ವಿರೋಧಿ ಕಾನೂನುಗಳನ್ನು ವಾಒಅಸ್ ಪಡೆಯಲು ಸತತ ಒಂದು ವರ್ಷಕ್ಕೂ ಹೆಚ್ಚಿನ ಕಾಲ ರೈತರು ಹೋರಾಟ ನಡೆಸಿದರು. ಅದರಲ್ಲಿ ಮುಂದಾಳತ್ವ ವಹಿಸಿದವರು ರಾಕೇಶ್ ಟಿಕಾಯತ್. ಬಿಸಿಲು, ಮಳೆ, ಗಾಳಿ ಎನ್ನದೆ ರೈತರು ಹೋರಾಡಿದ್ದರು. ಕಡೆಗೆ ಕೇಂದ್ರ ಸರ್ಕಾರ ಮಣಿದು ಆ ಮೂರು ಕಾಯ್ದೆಗಳನ್ನು ವಾಪಾಸ್ ಪಡೆದಿದೆ. ಈ ಹೋರಾಟಕ್ಕೆ ರಾಜಕೀಯ ಬಣ್ಣ ಬಳಿಯಲಾಗಿದೆ ಎಂದು ಟಿಕಟಯತ್ ಅವರನ್ನು ಉಚ್ಛಾಟನೆ ಮಾಡಲಾಗಿದೆ.