Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಪಿ.ಡಿ.ಓ.ಅಮಾನತ್ತಿಗೆ ಶಾಸಕ ಎಂ.ಚಂದ್ರಪ್ಪ ಸೂಚನೆ

Facebook
Twitter
Telegram
WhatsApp

ಚಿತ್ರದುರ್ಗ: ಎಂಬತ್ತು ಎಕರೆ ಕಂದಾಯ ಇಲಾಖೆ ಭೂಮಿಯಿದೆ. ಅದರಲ್ಲಿ ಮೂವತ್ತು ಎಕರೆ ವಶಕ್ಕೆ ಬಂದಿದೆ. ಇನ್ನು ಉಳಿದ ಐವತ್ತು ಎಕರೆಯಲ್ಲಿ ಬಡವರಿಗೆ ಮನೆಗಳನ್ನು ಕಟ್ಟಿಸಿಕೊಡಬೇಕಾಗಿರುವುದರಿಂದ ನಿವೇಶನ, ಮನೆಗಳಿಲ್ಲದ ಬಡವರನ್ನು ಗುರುತಿಸಿ ಪಟ್ಟಿ ತಯಾರು ಮಾಡಿ ಜಿಲ್ಲಾಧಿಕಾರಿಗೆ ಕಳಿಸಿ ಅರ್ಪೂವಲ್ ಮಾಡಿಸಿಕೊಂಡು ಬರುವುದು ನನ್ನ ಜವಾಬ್ದಾರಿ ಎಂದು ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಭರಮಸಾಗರ ಹೋಬಳಿಗೆ ಸೇರಿದ ಎಲ್ಲಾ ಗ್ರಾಮ ಪಂಚಾಯಿತಿ ಪಿ.ಡಿ.ಓ.ಹಾಗೂ ಕಾರ್ಯದರ್ಶಿಗಳಿಗೆ ಎಚ್ಚರಿಕೆ ನೀಡಿದರು.

ಶನಿವಾರ ಪ್ರವಾಸಿ ಮಂದಿರದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಶಾಸಕ ಎಂ.ಚಂದ್ರಪ್ಪ ಬಡವರ ಮನೆಗಳಿಗೆ ನೀವೆ ಹೋಗಿ ಎಲ್ಲಾ ಫಲಾನುಭವಿಗಳ ದಾಖಲಾತಿಗಳನ್ನು ಪಡೆದು ಅನುಮತಿ ನೀಡಿ ಜೂನ್ ಅಂತ್ಯದೊಳಗೆ ಮನೆಗಳ ಕಟ್ಟಿಸಿಕೊಡುವ ಕೆಲಸ ಚುರುಕಾಗಬೇಕು. ನಿವೇಶನ ಮನೆಗಳಿಲ್ಲದವರನ್ನು ಉದಾಸೀನ ಮಾಡಬೇಡಿ. ಜವಾಬ್ದಾರಿಯಿಂದ ಕೆಲಸ ಮಾಡದಿದ್ದರೆ ಶಿಸ್ತು ಕ್ರಮಕ್ಕೆ ಒಳಗಾಗಬೇಕಾಗುತ್ತದೆಂದರು.

ಅಳಗವಾಡಿಯಲ್ಲಿ ಕಾಂಕ್ರಿಟ್ ರಸ್ತೆ, ಚರಂಡಿ ನಿರ್ಮಾಣಕ್ಕೆ 40 ಲಕ್ಷ ರೂ.ಗಳನ್ನು ನೀಡಿದ್ದೇನೆ. ರೈತರಿಗೆ ಉಪಯೋಗವಾಗುವ ಕೆಲಸ ಮಾಡಿ ಕೆರೆಗಳ ಹೂಳೆತ್ತುವ ಕೆಲಸ ತಡವಾಗಬಾರದು. ಡಿಸೆಂಬರ್ ಒಳಗೆ ಎಲ್ಲಾ ಕರೆಗಳಿಗೂ ನೀರು ಬಂದರೆ ರೈತನ ಬದುಕು ಹಸನಾಗಲಿದೆ. ಈ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ಪಿ.ಡಿ.ಓ.ಮತ್ತು ಕಾರ್ಯದರ್ಶಿಗಳು ಮೈಚಳಿ ಬಿಟ್ಟು ಕೆಲಸ ಮಾಡಬೇಕು. ಮೈಗಳ್ಳತನ ಮಾಡಿದರೆ ಸಹಿಸುವುದಿಲ್ಲ ಎಂದು ಗರಂ ಆದರು.

ಪ್ರಧಾನ ಮಂತ್ರಿಗಳ ಆವಾಜ್ ಯೋಜನೆಯಡಿ ರಾಜ್ಯಕ್ಕೆ ಲಕ್ಷಾಂತರ ಮನೆಗಳು ಮಂಜೂರಾಗಿದೆ. ಅದರಂತೆ ಭರಮಸಾಗರದಲ್ಲಿ ಮನೆಗಳಿಲ್ಲದ ಬಡವರನ್ನು ಗುರುತಿಸಬೇಕಿದೆ. ಒಂದು ವಾರದೊಳಗೆ ಸ್ಕೆಚ್ ಆಗಿ ಪೋಡ್ ಮಾಡಬೇಕು. ಮನೆಗಳ ಹಂಚಿಕೆಯಲ್ಲಿ ಯಾರಿಗೂ ಅನ್ಯಾಯವಾಗದಂತೆ ಕೆಲಸ ಮಾಡಿ ಎಂದು ಸೂಚಿಸಿದರು.
ಎಲ್ಲಾ ಪಂಚಾಯಿತಿಗಳಿಗೂ ನಲವತ್ತು ಮನೆಗಳನ್ನು ನೀಡಿದ್ದೇನೆ.ಬಸವ ವಸತಿ ಯೋಜನೆಯಡಿ ಮಂಜೂರಾದ 331 ಮನೆಗಳಲ್ಲಿ 266 ಮನೆಗಳು ನಿರ್ಮಾಣವಾಗಿದೆ. 85 ಮನೆಗಳು ಬಾಕಿ ಇದೆ. ಅಲೆಮಾರಿಗಳಿಗೆ ಮಂಜೂರಾಗಿರುವ 317 ಮನೆಗಳಲ್ಲಿ 223 ಮನೆಗಳಿಗೆ ಫಲಾನುಭವಿಗಳು ಆಯ್ಕೆಯಾಗಿದ್ದಾರೆ ಎಂದು ತಾಲ್ಲೂಕು ಪಂಚಾಯಿತಿಯ ಲೋಕೇಶ್ ಮಾಹಿತಿ ನೀಡಿದಾಗ ಮನೆಗಳನ್ನು ನೀಡಿ ಎಂಟು ತಿಂಗಳಾಯಿತು ಇನ್ನು ಏಕೆ ಇದುವರೆವಿಗೂ ಪೂರ್ಣಗೊಂಡಿಲ್ಲ.

ಯಾವುದೇ ಜಾತಿ ತಾರತಮ್ಯವಿಲ್ಲದೆ ಎಲ್ಲಾ ಜಾತಿಯ ಬಡವರಿಗೆ ಮನೆಗಳು ಸಿಗಬೇಕು. ಮುಂದುವರೆದ ಲಿಂಗಾಯತ ಜಾತಿಯಲ್ಲಿನ ಬಡವರಿಗೂ ಮನೆಗಳು ಸಿಗಬೇಕು. ಬ್ಯಾಲಾಳು ಪಂಚಾಯಿತಿಯಲ್ಲಿ ಐದು ಎಕರೆ ಜಮೀನು ಗುರುತಿಸಲಾಗಿದೆ. ಕಂದಾಯ ಇಲಾಖೆಯವರು ಚಕ್ಕುಬಂದಿ ನೀಡಿ ಒಂದುವರೆ ವರ್ಷವಾಯಿತು. ಸ್ಕೆಚ್ ಮಾಡಿ ಕಲ್ಲು ನೆಡಬೇಕು.

ದೊಡ್ಡಿಗನಾಳ್‍ನಲ್ಲಿ 12 ಎಕರೆ, ದೊಡ್ಡಿಗನಾಳ್ ಹೊಸಹಟ್ಟಿಯಲ್ಲಿ ಐದು ಎಕರೆ, ಭರಮಸಾಗರದಲ್ಲಿ ಆರು ಎಕರೆ, ಕೋಡಿರಂಗವ್ವನಹಳ್ಳಿಯಲ್ಲಿ ಆರು ಎಕರೆ, ಚಿಕ್ಕಬೆನ್ನೂರಿನಲ್ಲಿ ಆರು ಎಕರೆ, ಕಾಲ್ಕೆರೆಯಲ್ಲಿ ಮೂರು ಎಕರೆ, ಕೊಳಹಾಳ್ ಎಮ್ಮೆಹಟ್ಟಿಯಲ್ಲಿ ಮೂರು ಎಕರೆ, ಅಡವಿಗೊಲ್ಲರಹಟ್ಟಿಯಲ್ಲಿ ಆರು ಎಕರೆ, ಹುಲ್ಲೆಹಾಳ್‍ನಲ್ಲಿ ಎಂಟು ಎಕರೆ 33 ಗುಂಟೆ, ಹುಲ್ಲೇಹಾಳ್ ಗೊಲ್ಲರಹಟ್ಟಿಯಲ್ಲಿ ಆರು ಎಕರೆ, ಕಾಲ್ಗೆರೆ ದಾಸನಹಳ್ಳಿಯಲ್ಲಿ ನಾಲ್ಕು ಎಕರೆ, ಬೇವಿನಹಳ್ಳಿಯಲ್ಲಿ ಎರಡು ಎಕರೆ, ಕೋಣನೂರಿನಲ್ಲಿ ಎರಡು ಎಕರೆ ನಾಲ್ಕು ಗುಂಟೆ ಆಲಘಟ್ಟದಲ್ಲಿ ಎರಡು ಎಕರೆ, ಕೋಗುಂಡೆಯಲ್ಲಿ ಐದು ಎಕರೆ ಜಾಗವಿದೆ ಎಂದು ಲೋಕೇಶ್ ಶಾಸಕರ ಗಮನಕ್ಕೆ ತಂದಾಗ ಬುಧವಾರ ಗುರುವಾರದೊಳಗೆ ನಿವೇಶನರಹಿತರ ಪಟ್ಟಿ ಕೊಡಿ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಹನುಮಂತಪ್ಪ ಎಲ್ಲಾ ಪಿ.ಡಿ.ಓ.ಹಾಗೂ ಕಾರ್ಯದರ್ಶಿಗಳಿಗೆ ಸೂಚಿಸಿದರು.

ಅಳಗವಾಡಿ ಪಿ.ಡಿ.ಓ.ಅಮಾನತ್ತಿಗೆ ಸೂಚನೆ: ಪಿ.ಡಿ.ಓ.ಕಾರ್ಯದರ್ಶಿಗಳ ಸಭೆಯಲ್ಲಿ ಪ್ರಗತಿ ಪರಿಶೀಲಿಸಿದ ಶಾಸಕ ಎಂ.ಚಂದ್ರಪ್ಪ ಸಭೆಗೆ ಚಕ್ಕರ್ ಹೊಡೆದ ಅಳಗವಾಡಿ ಪಿ.ಡಿ.ಓ.ಗೆ ನೋಟಿಸ್ ನೀಡಿ ಸೇವೆಯಿಂದ ಅಮಾನತ್ತುಗೊಳಿಸುವಂತೆ ದೂರವಾಣಿ ಮೂಲಕ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ನಂದಿನಿದೇವಿಗೆ ಸೂಚಿಸಿದರು.

ತಹಶೀಲ್ದಾರ್ ಜಿ.ಹೆಚ್.ಸತ್ಯನಾರಾಯಣ ಸಭೆಯಲ್ಲಿ ಹಾಜರಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ : ಜೂನ್ 3 ರಂದು ಮತದಾನ : ಜಿಲ್ಲಾಧಿಕಾರಿ ಟಿ.ವೆಂಕಟೇಶ್

ಚಿತ್ರದುರ್ಗ. ಮೇ.03: ಆಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರ ಆಯ್ಕೆಯ ಚುನಾವಣೆಗೆ ವೇಳಾಪಟ್ಟಿ ಪ್ರಕಟವಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ 4615 ಮತದಾರರು ಇದ್ದು , ಜೂನ್ 3 ರಂದು ಮತದಾನ ಜರುಗಲಿದೆ ಎಂದು ಆಗ್ನೇಯ

ಚಿತ್ರದುರ್ಗದ ರಾಜಬೀದಿಗಳಲ್ಲಿ ವಿಜೃಂಭಣೆಯಿಂದ ಸಾಗಿದ ಏಕನಾಥೇಶ್ವರಿ ಅಮ್ಮನವರ ಮೆರವಣಿಗೆ ಮತ್ತು ಗ್ರಾಮ ದೇವತೆ ಬರಗೇರಮ್ಮನವರ ಮೆರವಣಿಗೆ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,  ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮೇ. 03 : ಏಕನಾಥೇಶ್ವರಿ ಅಮ್ಮನ ಮೆರವಣಿಗೆ ನಗರದ ರಾಜಬೀದಿಗಳಲ್ಲಿ ಶುಕ್ರವಾರ ವಿಜೃಂಭಣೆಯಿಂದ ನಡೆಯಿತು. ಕೋಟೆ

ನೇಹಾ ಹತ್ಯೆ ವೇಳೆ ನೆರವಿಗೆ ಧಾವಿಸಿದ ಜೋಶಿ ವಿರುದ್ಧ ಪ್ರಚಾರ ಮಾಡ್ತಿದ್ದೀರಾ ಎಂದು ಕೇಳಿದ್ದಕ್ಕೆ ನೇಹಾ ತಂದೆ ಏನಂದ್ರು..?

ಹುಬ್ಬಳ್ಳಿ: ಲೋಕಸಭಾ ಚುನಾವಣೆಯ ಮೊದಲ ಹಂತದ ಚುನಾವಣೆ ನಡೆದಿದ್ದು, ಈಗ ಎರಡನೇ ಹಂತದ ಚುನಾವಣೆಗೆ ಭರ್ಜರಿ ಪ್ರಚಾರ ಕಾರ್ಯವೂ ನಡೆಯುತ್ತಿದೆ. ಹುಬ್ಬಳ್ಳಿ ಧಾರವಾಢ ಕಾಂಗ್ರೆಸ್ ಅಭ್ಯರ್ಥಿಯಾಗಿ ವಿನೋದ್ ಸೂಟಿ ಸ್ಪರ್ಧೆ ಮಾಡಿದ್ದು ಅದಕ್ಕೆ ವಿರುದ್ಧ

error: Content is protected !!