ನವದೆಹಲಿ: ದಿನದಿಂದ ದಿನಕ್ಕೆ ಎಲ್ಲಾ ವಸ್ತುಗಳ ಮೇಲೆ ಬೆಲೆ ಏರಿಕೆಯಾಗುತ್ತಿರುವುದು ಜನ ಸಾಮಾನ್ಯರನ್ನು ಕಂಗೆಡಿಸಿದೆ. ದುಡಿಮೆ ಕಡಿಮೆ, ಖರ್ಚು ಹೆಚ್ಚು ಎನ್ನುವಂತ ಸ್ಥಿತಿಯಿಂದಾಗಿ ಜನ ನಲುಗಿ ಹೋಗಿದ್ದಾರೆ. ಈ ನಡುವೆ ಕೇಂದ್ರ ಸರ್ಕಾರ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಗೋಧಿ ರಫ್ತಿನ ಮೇಲೆ ನಿಷೇಧ ಹೇರಿದೆ.
ಏರಿಕೆಯಾಗುತ್ತಿರುವ ದೇಶಿಯ ಬೆಲೆಗಳನ್ನು ನಿಯಂತ್ರಿಸಲು ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ಇನ್ನು ಇತರೆ ದೇಶಗಳು ಆಹಾರ ಭದ್ರತೆಯನ್ನು ಎದುರಿಸುತ್ತಿದ್ದರೆ, ಭಾರತ ಸರ್ಕಾರವನ್ನು ಮನವಿ ಮಾಡಿದರೆ, ಆ ಸಂದರ್ಭದಲ್ಲಿ ಅನುಮತಿ ನೀಡಲಾಗುತ್ತದೆ ಎಂದಿದ್ದಾರೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಗೋಧಿ ಹಿಟ್ಟಿನ ಬೆಲೆಯಲ್ಲಿ ಶೇಕಡ 13ರಷ್ಟು ಏರಿಕೆಯಾಗಿದೆ. ಚಿಲ್ಲರೆ ಮಾರುಕಟ್ಟೆ ಒಂದು ಕೆಜಿ ಗೋಧಿ ಹಿಟ್ಟು 59 ರೂಪಾಯಿ ತಲುಪಿದೆ.
ದೇಶಾದ್ಯಂತ ಆಹಾರ ಪದಾರ್ಥಗಳ ಬೆಲೆಗಳು ವೇಗವಾಗಿ ಹರಡುತ್ತಿವೆ. ಸಾಮಾನ್ಯರ ಜನರ ಜೀವನಕ್ಕೆ ಅಗತ್ತವಾದ ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆಯ ಜೊತೆಗೆ ಆಹಾರ ಪದಾರ್ಥಗಳಲ್ಲಿಯೂ ಏರಿಕೆ ಕಾಣುತ್ತಿದೆ. ಸದ್ಯ ಈರುಳ್ಳಿ ರಫ್ತಿನ ಮೇಲಿದ್ದ ಷರತ್ತುಗಳನ್ನು ಸಡಿಲಗೊಳಿಸಿದೆ.