ರಾಮನಗರ: ಜನತಾ ಜಲಧಾರೆಯ ಸಮಾರೋಪ ಸಮಾರಂಭ ಇಂದುನಡೆಯಲಿದೆ. ಈ ಹಿನ್ನೆಲೆ ಹೆಚ್ ಡಿ ಕುಮಾರಸ್ವಾಮಿ ಅವರು ದೇವಸ್ಥಾನಗಳಿಗೆ ಭೇಟಿ ನೀಡಿದ್ದಾರೆ. ಈ ವೇಳೆ ಕಾಂಗ್ರೆಸ್ ನವರ ಟ್ವೀಟಾಸ್ತ್ರದ ಬಗ್ಗೆ ಮಾತನಾಡಿ, ಕಾಂಗ್ರೆಸ್ ನವರದ್ದು ನಿನ್ನೆಯಿಂದ ತೋರಿಸುತ್ತಾ ಇದ್ದೀರಿ. ಅಷ್ಟು ದೊಡ್ಡಮಟ್ಟದ ಸಮಸ್ಯೆ ನಮ್ಮ ಪಕ್ಷದಲ್ಲಿಲ್ಲ. ಬಗೆಹರಿಸಿಕೊಳ್ಳದೆ ಇರುವಂಥ ಸಮಸ್ಯೆಗಳೇನು ಇಲ್ಲ. ಆದಷ್ಟು ಬೇಗ ಬಗೆಹರಿಸಿಕೊಳ್ಳುತ್ತೇವೆ. ಆ ಗಲಾಟೆಯಲ್ಲ ಅವರ ಪಕ್ಷಕ್ಕೆ ಸಂಬಂಧಿಸಿದ್ದು, ನಾನ್ಯಾಕೆ ಆ ಬಗ್ಗೆ ತಲೆಕೆಡಿಸಿಕೊಳ್ಳಲಿ.
ಕನಿಷ್ಟ 4-5 ಲಕ್ಷ ಜನ ಆ ಸಭೆಯಲ್ಲಿ ಭಾಗವಹಿಸುತ್ತಾ ಇದ್ದಾರೆ. ಎಲ್ಲಾ ರೀತಿಯ ಸುಸಜ್ಜಿತ ವ್ಯವಸ್ಥೆಗಳು ನಡೆದಿದೆ. ವೇದಿಕೆ ಕೂಡ ಸರಿಯಾದ ರೀತಿಯಲ್ಲಿ ಮಾಡಲಾಗಿದೆ. ಎಲ್ಲಾ ಕಡೆ ಜಗಜ್ಜಾಹೀರಾಗಿದೆ. ಎಲ್ಲಿ ಜನತಾ ಜಲಧಾರೆಯ ಕಳಸ ಇರುವ ವಾಹನಗಳು ಪ್ರವಾಸ ಹೊರಟವು ಆ ಪ್ರದೇಶದಲ್ಲಿ ಸಂಪೂರ್ಣವಾಗಿ ಮಳೆಯಾಗಿದೆ. ಎಲ್ಲರಿಗೂ ಅದೇ ಆಶ್ಚರ್ಯ. ಇವತ್ತು ಜೆಡಿಎಸ್ ನ ಜನತಾ ಜಲಧಾರೆಯ ಕಳಸಾ ವಾಹನಗಳು ಬಂದಂತ ಭಾಗದಲ್ಲಿ, ಕಾರ್ಯಕ್ರಮ ಏರ್ಪಾಡು ಮಾಡಿದ ಬಳಿಕ ಧಾರಾಕಾರವಾಗಿ ಮಳೆ ಬಂದಿದೆ. ಇದು ಒಂದು ರೀತಿಯ ಕಾಕತಾಳೀಯ. ಆದರೆ ಇದು ಹೋರಾಟದ ಹುಮ್ನಸ್ಸು ನೀಡಿದೆ.
ಇಲ್ಲಿ ಜನಗಳ ವಿಶ್ವಾಸಗಳಿಸುವುದಕ್ಕೆ ಜನತಾ ಜಲಧಾರೆ ಹೋಗಿದ್ದು. ಜನಗಳಲ್ಲಿ ತಿಳುವಳಿಕೆ ಬರಬೇಕು. ಯಾವುದೇ ನದಿಯ ನೀರನ್ನು ಬಳಸಿಕೊಳ್ಳುವಲ್ಲಜ ನಮ್ಮ ವಿಫಲತೆ ಏನಾಗಿದೆ ಅದನ್ನು ಸರಿಪಡಿಸುವ ಕೆಲಸವಾಗಿದೆ. ಜನತಾ ಜಲಧಾರೆ ಬಗ್ಗೆ ಸಾರ್ವಜನಿಕವಾಗಿ ಚರ್ಚೆ ನಡೆಯುತ್ತಿದೆ. ಇದೊಂದು ಉತ್ತಮವಾದ ಕಾರ್ಯ, ಈ ಒಂದು ಬಾರಿ ಕುಮಾರಸ್ವಾಮಿ ಅವರನ್ನು ಆಶೀರ್ವದಿಸೋಣಾ ಎಂಬ ಚರ್ಚೆಗಳು ಶುರುವಾಗಿವೆ ಎಂದಿದ್ದಾರೆ.