ದಾವಣಗೆರೆ: ಡಿಜಿಪಿ ರವೀಂದ್ರನಾಥ್ ಇತ್ತೀಚೆಗೆ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಈ ಸಂಬಂಧ ಮಾತನಾಡಿದ ಶಾಸಕ ರೇಣುಕಾಚಾರ್ಯ, ಐಪಿಎಸ್ ಅಧಿಕಾರಿ ಡಿಜಿಪಿ ಡಾ.ರವೀಂದ್ರನಾಥ್ ರಾಜೀನಾಮೆಗೆ ನಾನು ಕಾರಣನಲ್ಲ. ನಾನು ಈಗಾಗಲೇ ಸ್ಪಷ್ಟವಾಗಿ ನಾನು ಯಾವುದೇ ನಕಲಿ ಜಾತಿ ಪ್ರಮಾಣ ಪತ್ರವನ್ನು ಪಡೆದಿಲ್ಲ. ಹೊನ್ನಾಳಿ ತಾಲೂಕಿನ ಜನರು, ಹತ್ತು ಸಾವಿರಕ್ಕು ಹೆಚ್ಚು ಜನ ಸೇರಿ ಎಸ್ಎಸ್ಟಿ ಮೋರ್ಚಾ ಸಮಾವೇಶ ಮಾಡಿ, ಅಂಬೇಡ್ಕರ್ ಜಯಂತಿ ಆಚರಣೆ ಮಾಡಿ ಅದಕ್ಕೆ ಉತ್ತರ ಕೊಟ್ಟಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ. ಆದರೆ ಅದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಪ್ರತಿ ಹಳ್ಳಿಗಳಲ್ಲಿ ಅಂಬೇಡ್ಕರ್ ಜಯಂತಿಗೆ ನನ್ನನ್ನು ಆಹ್ವಾನ ಮಾಡಿದ್ದಾರೆ. ಅದರಲ್ಲಿ ನಾನು ಭಾಗವಹಿಸಿದ್ದೇನೆ. ಡಿಕೆ ಶಿವಕುಮಾರ್ ಅವರು ಇದನ್ನು ಅರ್ಥ ಮಾಡಿಕೊಳ್ಳಬೇಕು, ಈ ರೀತ ಸುಳ್ಳು ಹೇಳುವುದನ್ನು ನಿಲ್ಲಿಸಬೇಕು. ಈ ರೀತಿ ಸುಳ್ಳು ಹೇಳುತ್ತಾ ಹೋದರೆ ಮುಖ್ಯಮಂತ್ರಿಯಾಗಿ ಬಿಡುತ್ತೇನೆ ಎಂಬ ಭ್ರಮೆಯಲ್ಲಿದ್ದಾರೆ. ಅದನ್ನು ಬಿಡಬೇಕು.
ಹತಾಶ ಮನೋಭಾವನೆಯಿಂದ ಕೀಳು ಮಟ್ಟದ ರಾಜಕಾತಣಕ್ಕೆ ಇಳಿಯುತ್ತೀರಿ. ಕ್ಷುಲ್ಲಕ ಹೇಳಿಕೆಯನ್ನು ಕೊಡುತ್ತಿದ್ದೀರಿ. ರವೀಂದ್ರ ಅವರು ಯಾಕೆ ರಾಜೀನಾಮೆ ಕೊಟ್ಟಿದ್ದಾರೆ, ಏನು ಎಂಬುದು ನನಗೆ ಯಾವುದೇ ಮಾಹಿತಿಯಿಲ್ಲ. ಆದರೆ ಇದಕ್ಕೆ ನಾನು ಕಾರಣನಲ್ಲ. ಮೊದಲು ಅದನ್ನು ಅರ್ಥ ಮಾಡಿಕೊಳ್ಳಬೇಕು. ಈ ರೀತಿ ನನ್ನ ಮೇಲಿನ ಆರೋಪವನ್ನು ಬಿಡಬೇಕು ಎಂದು ಒತ್ತಾಯ ಮಾಡುತ್ತೇನೆ. ಕಾಂಗ್ರೆಸ್ ನ ಅನೇಕ ಗುಂಪುಗಳಿವೆ ಎಬಿಸಿಡಿ ಹೀಗೆ . ಆದರೆ ಬಿಜೆಪಿ ಪಾರ್ಟಿಯಲ್ಲಿ ನಾವೆಲ್ಲಾ ಒಟ್ಟಾಗಿದ್ದೇವೆ. ಮುಂದಿನ ಚುನಾವಣೆಯಲ್ಲೂ ಒಟ್ಟಾಗಿ ಎದುರಿಸಿ ಮತ್ತೆ ಅಧಿಕಾರಕ್ಕೆ ಬರುತ್ತೇವೆ. ನೀವೂ ಹಗಲು ಕನಸು ಕಾಣಬೇಡಿ ಎಂದಿದ್ದಾರೆ.