ಬೆಂಗಳೂರು: ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲೆಡೆ ವರಯಣನ ಅಬ್ಬರ ಜೋರಾಗಿದೆ. ಇನ್ನು ಮೂರು ದಿನಗಳ ಕಾಲ ರಾಜ್ಯದಲ್ಲಿ ಸೈಕ್ಲೋನ್ ಮುಂದುವರೆಯಲಿದೆ ಎನ್ನಲಾಗುತ್ತಿದೆ.
ದಕ್ಷಿಣ ಅಂಡಮಾನ್ ನಲ್ಲಿ ವಾತುಭಾರ ಕುಸಿತ ಉಂಟಾಗಿದೆ. ಆಂಧ್ರಪ್ರದೇಶದ ವಿಶಾಖಪಟ್ಟಣಂ, ಒರಿಸ್ಸಾದ ದಕ್ಷಿಣ ಪ್ರದೇಶಗಳಿಗೆ ಸೈಕ್ಲೋನ್ ಅಪ್ಪಳಿಸಲಿದೆ. ಗಾಳಿಯ ವೇಗ 60-70KM ಇರಲಿದೆ. ಮೇ 10ನೇ ತಾರೀಖಿನ ವೇಳೆಗೆ ಸೈಕ್ಲೋನ್ ಅಪ್ಪಳಿಸುವ ಸಾಧ್ಯತೆ ಇರುತ್ತದೆ.
ಮೇ 10ರ ತನಕ ರಾಜ್ಯದಲ್ಲಿ ಈಗ ಸುರಿಯುತ್ತಿರುವ ಮಳೆಯ ಪ್ರಮಾಣದಂತೆಯೇ ಮಳೆಯಾಗುವ ಸಾಧ್ಯತೆ ಇದೆ. ಆದರೆ ರಾಜ್ಯಕ್ಕೆ ಸೈಕ್ಲೋನ್ ಎಫೆಕ್ಟ್ ಇರುವುದಿಲ್ಲ. ಬೆಂಗಳೂರು ಮಾತ್ರವಲ್ಲದೆ ಮಲೆನಾಡು, ದಕ್ಷಿಣ ಒಳನಾಡು, ಕರಾವಳಿ ಜಿಲ್ಲೆಗಳಲ್ಲೂ ಮಳೆ ಮುಂದುವರೆಯಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದ್ದು, ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಅದರ ಜೊತೆಹೆ ಬಲವಾದ ಮೇಲ್ಮೈ ಗಾಳಿ ಬೀಸುವ ಸಾಧ್ಯತೆ ಇದೆ. ರಾಜ್ಯದಲ್ಲಿ ನಿನ್ನೆ ಸಂಜೆಯೂ ಜೋರು ಮಳೆಯಾಗಿದೆ. ಕೆಲವು ಕಡೆ ರಾತ್ರಿ ಮಳೆ ಸುರಿದರೆ, ಇನ್ನು ಕೆಲವು ಕಡೆ ಮಧ್ಯರಾತ್ರಿ ಮಳೆ ಸುರಿದಿದೆ. ಕೆಲವೊಂದು ಜಿಲ್ಲೆಯಲ್ಲಿ ಮಳೆಯಿಂದಾಗಿ ಅನಾಹುತವೂ ಸಂಭವಿಸಿದೆ. ಹೀಗಾಗಿ ಇನ್ನು ಮೂರು ದಿನ ಮಳೆ ಇರುವ ಕಾರಣ ಜನ ಕೂಡ ಎಚ್ಚರದಿಂದರಬೇಕಾಗುತ್ತದೆ.