ಗದಗ: ಇಂದು ನಾಡಿನೆಲ್ಲೆಡೆ ಬಸವ ಜಯಂತಿ ಹಾಗೂ ಮುಸ್ಲಿಂರ ಪವಿತ್ರ ಹಬ್ಬ ರಂಜಾನ್ ಆಚರಣೆ ಮಾಡಲಾಗಿದೆ. ಗದಗ ಜಿಲ್ಲೆಯ ಗಜೇಂದ್ರಗಡ ಹಾಗೂ ಮುಂಡರಗಿ ಅನ್ನದಾನೀಶ್ವರ ಮಠದಲ್ಲಿ ಇಂದು ವಿಭಿನ್ನವಾಗಿ ಬಸವ ಜಯಂತಿ ಹಬ್ಬದ ಜೊತೆಗೆ ರಂಜಾನ್ ಆಚರಣೆ ಮಾಡಲಾಗಿದೆ.
ಭಾವೈಕ್ಯತೆ ನಡಿಗೆ ಸಾಮರಸ್ಯದ ಕಡೆಗೆ ಎಂಬ ಘೋಷ ವಾಕ್ಯದೊಂದಿಗೆ ವಿಶೇಷವಾದ ಪಾದಯಾತ್ರೆ ಮಾಡಲಾಗಿದೆ. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಮರಸ್ಯ ಬಿಂಬಿಸುವ ಪಾದಯಾತ್ರೆ ನಡೆದಿದೆ. ಈ ವೇಳೆ ಟ್ರ್ಯಾಕ್ಟರ್ ನಲ್ಲಿ ಬಸವಣ್ಣನ ಫೋಟೋ ಇಟ್ಟು ಮೆರವಣಿಗೆ ಮಾಡಿದ್ದಾರೆ.
ಮಠದ ಸ್ವಾಮೀಜಿಗಳ ಜೊತೆಗೆ ಮುಸ್ಲಿಂ ಬಾಂಧವರು ಸೇರಿದ್ದರು. ಎಲ್ಲರೂ ಒಂದೇ ಎಂಬ ಮಂತ್ರ ಪಠಿಸಿದರು. ದೇಚರೊಂದೆ ನಾಮ ಹಲವು. ಧರ್ಮಕ್ಕಿ ದಯೆ ದೊಡ್ಡದು, ಜಾತಿಗಿಂತ ನೀತಿ ಮೇಲು, ಮಾನವ ಕುಲಕ್ಕೆ ಜಯವಾಗಲಿ. ಹಿಂದೂ ಮುಸ್ಲಿಂ ನಾವೇಲ್ಲಾ ಒಂದು ಎಂಬ ಘೋಷವಾಕ್ಯ ಕೂಗಿದರು.
ಹಿಂದೂ ಮುಸ್ಲಿಂ ಒಟ್ಟಾಗಿ ಬಸವಣ್ಣ ಹಾಗೂ ಪೈಗಂಬರರಿಗೆ ಒಟ್ಟಾಗಿಯೇ ಪೂಜೆ ಸಲ್ಲಿಸಿದರು. ಪ್ರಾರ್ಥಾನೆ ಮಾಡಿದರು, ಪೂಜೆ ಸಲ್ಲಿಸಿದರು. ಇನ್ನು ಈ ಕಾರ್ಯಕ್ರಮದಲ್ಲಿ ಬಸವಣ್ಣನ ಅನುಯಾಯಿಗಳಿಗೆ ಸನ್ಮಾನ ಕಾರ್ಯಕ್ರಮವೂ ನಡೆಯಿತು.