ಬೆಂಗಳೂರು: ಪಿಎಸ್ಐ ಹಗರಣಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮಾತನಾಡಿ, ಯಾರು ಇದರಲ್ಲಿ ಭಾಗಿಯಾಗಿದ್ದಾರೆ, ಯಾರ ಕುಮ್ಮಕ್ಕಿದೆ, ಯಾವ ಮಂತ್ರಿ ಇದರಲ್ಲಿ ಶಾಮೀಲಾಗಿದ್ದಾರೆ, ಯಾರ ಬಳಿಯಿಂದ ಹಣ ವಸೂಲಿ ಮಾಡುತ್ತಿದ್ದಾರೆ. ಇದು ಬರೀ 80 ಲಕ್ಷ ಅಲ್ಲ. ಮಾಗಡಿ ಒಂದರಲ್ಲಿಯೇ 2 ಕೋಟಿ ಕಲೆಕ್ಟ್ ಆಗಿದೆ. ನೀವೂ ಮಾಧ್ಯಮದವರೇ ತನಿಖೆ ಮಾಡಿ. ಇದರಲ್ಲಿ ಯಾರ್ಯಾರು ಭಾಗಿಯಾಗಿದ್ದಾರೆ ಆ ಮಂತ್ರಿಗಳೆಲ್ಲಾ ರಾಜೀನಾಮೆ ಕೊಡಬೇಕಾಗುತ್ತದೆ. ಕಾಂಗ್ರೆಸ್ ಪಕ್ಷ ಈ ಬಗ್ಗೆ ಹೋರಾಟ ಮಾಡುತ್ತೆ.
ಸಿಎಂ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದು, ಯತ್ನಾಳ್ ಆದರೂ ಮಾತನಾಡಲಿ ಯಾರು ಬೇಕಾದರೂ ಮಾತನಾಡಲಿ. ನಮಗೆ ಅದು ಪ್ರಶ್ನೆಯಲ್ಲ. ಸಮರ್ಥರೋ, ಅಸಮರ್ಥರೋ, ಯಾವ ಫಾರ್ಮೂಲಾ ಬರುತ್ತೋ ನಂಗಂತು ಗೊತ್ತಿಲ್ಲ. ಯುಪಿ ಫಾರ್ಮೂಲಾ ಆದ್ರೂ ಬರಲಿ, ಗುಜರಾತ್ ಆದರೂ ಬರಲಿ ಕರ್ನಾಟಕಕ್ಕೆ ಹೊಸ ಫಾರ್ಮೂಲಾವನ್ನೆ ತರಲಿ. ನಮ್ಮ ಕಾಂಗ್ರೆಸ್ ಪಕ್ಷ ಹೇಳೋದು ಒಳ್ಳೆ ಆಡಳಿತ ನಡೆಸೋದಕ್ಕೆ ಬರಬೇಕು. ಭ್ರಷ್ಟಾಚಾರವನ್ನ ತೋರಿಸುತ್ತಾ ಇದ್ದೀರಿ. ಏನು ನಡೀತಾ ಇದೆ ಅಂತ. ಸರಿಯಾದ ರೀತಿಯಲ್ಲಿ ಪೊಲೀಸಿನವರು ಕೂಡ ಇದನ್ನು ಸರಿಯಾಗಿ ತನಿಖೆ ನಡೆಸಬೇಕು.
ದರ್ಶನ್ ಗೌಡನನ್ನು ಕರೆದುಕೊಂಡು ಬಂದ್ರು. ಅವನು ಏನು ಹೇಳಿಕೆ ಕೊಟ್ಟ, ಯಾಕೆ ಕರೆಸಿದ್ರಿ, ವಾಪಾಸ್ ಮನೇಗೆಕೆ ಕಳುಹಿಸಿದ್ರಿ..? ಅವನಿಗ್ಯಾಕೆ ಆರೋಗ್ಯ ಕೆಡ್ತು..? ಹೀಗೆ ಡಿಕೆ ಶಿವಕುಮಾರ್ ನಾನಾ ಪ್ರಶ್ನೆಗಳನ್ನು ಕೇಳಿದ್ದಾರೆ.