ಬೆಂಗಳೂರು: ಅಮಿತ್ ಶಾ ನೇತೃತ್ವದಲ್ಲಿ ಬಿಜೆಪಿ ಪಕ್ಷ ಸೇರ್ಪಡೆಯಾದ ಸಭಾಪತಿ ಬಸವರಾಜ್ ಹೊರಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ. ಜೆಡಿಎಸ್ ಬಿಟ್ಟು ಇದೀಗ ಬಿಜೆಪಿ ಸೇರಿರುವುದಕ್ಕೆ ಕಾರಣ ರಾಜಕಾರಣ ಎಂದು ತಮಾಷೆಯಾಗಿ ಹೇಳಿದ್ದಾರೆ. ಜೆಡಿಎಸ್ ಬಗ್ಗೆ ಪಕ್ಷದಲ್ಲಿರುವವರ ಬಗ್ಗೆ ಒಳ್ಳೆ ಅಭಿಪ್ರಾಯವಿದೆ. ಆದರೆ ಜನತೆಗೋಸ್ಕರ ಬದಲಾವಣೆ ಮಾಡಿಕೊಳ್ಳಬೇಕಾಯಿತು. ಈಗ ಅದಕ್ಕೆ ಬೇರೆ ಪಕ್ಷ ಸೇರುತ್ತಿದ್ದೇನೆ ಎಂದಿದ್ದಾರೆ.
ಅಮಿತ್ ಶಾ ಅವರ ಭೇಟಿಯಲ್ಲಿ ಅಮನತದ್ದೇನು ಆಗಿಲ್ಲ. ನೀವೂ ಬಂದಿದ್ದು ಒಳ್ಳೆಯದ್ದಾಯಿತು. ನಿಮ್ಮಂತವರು ಬರುವುದರಿಂದ ಪಾರ್ಟಿಗೂ ಒಳ್ಳೆಯದ್ದೆ ಆಗುತ್ತೆ ಅಂತ ಹೇಳಿದ್ರು. ಆಯ್ತು ಸರ್ ಎಂದೇ. ಹೆಚ್ಚೇನು ಮಾತನಾಡಲಿಲ್ಲ. ನಾನು ಸಮೀಪದಲ್ಲೇ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಕೊಟ್ಟ ಬಳಿಕ ದಿನಾಂಕ ಫಿಕ್ಸ್ ಮಾಡಿ, ಈ ಬಾರಿ ನಡೆಯುವ ಚುನಾವಣೆಯಲ್ಲಿ ನಿಲ್ಲುತ್ತೇನೆ ಎಂದಿದ್ದಾರೆ.
ಇನ್ನು ಬಿಜೆಪಿ ಸೇರಿದ ಉದ್ದೇಶದ ಬಗ್ಗೆ ಮಾತನಾಡಿ, ಸಾಕಷ್ಟು ವರ್ಷ ಒಂದೇ ಕಡೆ ಇದ್ವಿ. ಈಗ ಬದಲಾವಣೆಯಾಗಿದೆ. ಯಾವ ಆತಂಕದಲ್ಲೂ ಬಿಜೆಪಿಯನ್ನು ಸೇರುತ್ತಿಲ್ಲ. ರಾಜಕಾರಣ ಸಿದ್ಧಾಂತದ ಬಗ್ಗೆ ದಯಮಾಡಿ ಕೇಳಬೇಡಿ. ಸದ್ಯಕ್ಕೆ ಬಿಜೆಪಿ ಸೇರಿದ್ದೇನೆ. ಮುಂದೆ ಎಲೆಕ್ಷನ್ ನಿಲ್ಲುವ ಯೋಜನೆ ಇದೆ ಎಂದಿದ್ದಾರೆ.