ಬೆಂಗಳೂರು: ಕೆಜಿಎಫ್2 ಸಿನಿಮಾ ಇಡೀ ದೇಶದಲ್ಲಿ ಸದ್ದು ಮಾಡುತ್ತಿದೆ. ಹೊಂಬಾಳೆ ಫಿಲಂಸ್ ಈ ಸಿನಿಮಾ ನಿರ್ಮಾಣ ಮಾಡಿದೆ. ಆದರೆ ಇದೀಗ ಮಾಜಿ ಸಂಸದ ವಿ ಎಸ್ ಉಗ್ರಪ್ಪ ಬೇರೆಯದ್ದೇ ಆರೋಪ ಮಾಡುತ್ತಿದ್ದಾರೆ. ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಸಿನಿಮಾಗೆ ನಿಜವಾಗಿಯೂ ಅಷ್ಟೊಂದು ಹಣ ಬಂತಾ ಅಥವಾ ಇವರ ಬ್ಲಾಕ್ ಮನಿಯನ್ನು ವೈಟ್ ಮಾಡಲು ಈ ರೀತಿ ಮಾಡುತ್ತಿದ್ದಾರಾ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ.
ಭ್ರಷ್ಟಚಾರದ ವಿಚಾರದಲ್ಲಿ ನಮ್ಮ ಸರ್ಕಾರ ಏನು ಮಾಡಿದೆ. ನಿಮ್ಮ ಸರ್ಕಾರ ಏನು ಮಾಡಿದೆ. ಆ ಎಲ್ಲಾ ವಿಚಾರದ ಬಗ್ಗೆ ಚರ್ಚೆಗೆ ನಾನು ಸದಾ ಸಿದ್ಧನಿದ್ದೇನೆ. ನಿಮಗೆ ಬದ್ಧತೆ ಇದ್ದರೆ ನಿಮ್ಮ ಪಾರ್ಡಿಯವರು ಈ ದೇಶವನ್ನು ಮತ್ತು ಈ ರಾಜ್ಯವನ್ನು ಹೇಗೆ ಲೂಟಿ ಮಾಡುತ್ತಿದ್ದಾರೆ. ನಮ್ಮ ಪಾರ್ಟಿಯವರು ಈ ದೇಶ ಕಟ್ಟಲು ಏನು ಮಾಡಿದ್ದೇವೆ ಎಂಬ ಬಗ್ಗೆ ಚರ್ಚೆ ಮಾಡೋಣಾ. ಅದಕ್ಕೆ ನೀವೂ ಸಿದ್ದರಿದ್ದರೆ, ಸವಾಲನ್ನು ಸ್ವೀಕರಿಸಿ, ಸಮಯ, ದಿನಾಂಕ ಹೇಳಿ ಎಂದಿದ್ದಾರೆ.
ಇನ್ನು ಕೆಜಿಎಫ್ ಸಿನಿಮಾ ಬಗ್ಗೆ ಮಾತನಾಡಿ, ನೋಡಿ ನಾನು ಹೆಚ್ಚಿಗೆ ಮೂವಿ ನೋಡುವವನಲ್ಲ. ಕೆಜಿಎಫ್ ಸಿನಿಮಾದಲ್ಲಿ ಇವರು ನಿರ್ಮಾಪಕರಂತೆ. ಕನ್ನಡದಲ್ಲು ಯಾವುದೇ ವಿಧವಾದ ಸಿನಿಮಾಗಳಿಗೆ ಹರಿದು ಬರದೆ ಇರುವ ಸಂಪತ್ತು ಈ ಸಿನಿಮಾಗೆ ಹರಿದು ಬಂದಿದೆ ಎಂದು ಮಾಧ್ಯಮದಲ್ಲಿ ಕಾಣುತ್ತಿದೆ. ಇದರಲ್ಲಿ ನಿಜಕ್ಕು ಸಂಪತ್ತು ಹರಿದು ಬಂದಿದೆಯಾ..? ಅಥವಾ ಇವರು ಗಳಿಸಿದ ಕಪ್ಪು ಹಣವನ್ನೇನಾದರೂ ವೈಟ್ ಮಾಡಿಕೊಳ್ಳುವುದಕ್ಕೆ ಇದನ್ನು ರೂಪಿಸಿದ್ದಾರಾ ಎಂಬುದು ತನಿಖೆ ಬಳಿಕ ಗೊತ್ತಾಗಲಿದೆ ಎನ್ನಿಸುತ್ತಿದೆ.
ನನ್ನದೊಂದೆ ಪ್ರಶ್ನೆ, ಹೊಂಬಾಳೆ ಸಂಸ್ಥೆ ಯಾರದ್ದು. ಅದರಲ್ಲಿ ನೀವೀದ್ದೀರಾ..? ನಿಮ್ಮ ಕುಟುಂಬದವರಿದ್ದಾರಾ..? ಎಷ್ಟು ಕೋಟಿಗಳಷ್ಟು ಮಾಡಿದ್ದೀರಿ. ಯೂನಿವರ್ಸಿಟಿ ಫಂಡ್ ಆಗಿ ಯಾವ ರೀತಿ ಬಳಸಿಕೊಂಡಿದ್ದೀರಿ.? ಇದರ ಬಗ್ಗೆ ಮಾತನಾಡಲು ನೀವೂ ಆಚೆ ಬರುತ್ತೀರಾ ಎಂದು ಪ್ರಶ್ನಿಸಿದ್ದಾರೆ.