ಬೆಂಗಳೂರು: ನಾನು ಬದುಕಿರುವಷ್ಟು ದಿನ ರೈತರ ಪರ ಹೋರಾಟ ಮಾಡುತ್ತೇನೆ. ಆದರೆ ರಾಜಕಾರಣ ಅತ್ಯಂತ ಹೀನಾಯ ಸ್ಥಿತಿ ತಲುಪಿದ ಮೇಲೆ, ಒಬ್ಬ ನಾಗರಿಕನಾಗಿ ನೋಡಿಕೊಂಡು ಸುಮ್ಮನೆ ಇರಲಾಗದು ಎಂಬ ಕಾರಣಕ್ಕೆ ಕಳೆದ ತಿಂಗಳು ಆಮ್ ಆದ್ಮಿ ಪಕ್ಷದ ಜೊತೆಗೆ ಘೋಷಣೆ ಮಾಡಿದ್ದೇನೆ. ಅದು ರೈತರ ಮುಖವಾಣಿಯಂತೆ ಇರಲಿದೆ. ಈ ಮಧ್ಯೆ ರಾಮುಲು ಮತ್ತು ಸಿಎಂಗೆ ವಿನಂತಿ ಮಾಡುತ್ತೇನೆ. ನಾಲ್ಕು ವಾರಗಳಲ್ಲಿ ನ್ಯಾಯ ಸಿಗುತ್ತೆ ಎಂದಿದ್ದಿರಿ. ಈಗ ನಾಲ್ಕು ವಾರ ನಾಲ್ಕು ತಿಂಗಳಾಗಿದೆ. ಅದಕ್ಕೆ ನಾವೂ ನಾಲ್ಕು ವಾರದ ಗಡುವು ನೀಡುತ್ತಿದ್ದೇವೆ. ಆಮೇಲೆ ಮುಂದಿನ ಹೋರಾಟವನ್ನು ಘೋಷಣೆ ಮಾಡುತ್ತೇವೆ ಎಂದಿದ್ದಾರೆ.
ನಾಲ್ಕು ವಾರಗಳಲ್ಲಿ ನೌಕರರ ಸಮಸ್ಯೆ ಬಗೆಹರಿಸುತ್ತೀವಿ ಅಂತ ಸಚಿವ ಶ್ರೀರಾಮುಲು ಅವರು ಆದೇಶ ಹೊರಡಿಸಿದ್ದರು. ಆದರೆ ಆ ನಾಲ್ಕು ವಾರಗಳು ಹೋಗಿ ಈಗ ನಾಲ್ಕು ತಿಂಗಳು ಕಳೆಯಿತು. ಆದರೆ ಯಾವುದು ಪರಿಣಾಮಕಾರಿಯಾಗಿ ಜಾರಿಗೆ ಬಂದಿಲ್ಲ ಎಂದು ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ. ಮತ್ತೆ ಸಾರಿಗೆ ನೌಕರರಿಂದ ಪ್ರತಿಭಟನೆ ಮಾಡುವ ಸೂಚನೆ ನೀಡಿದ್ದಾರೆ.
ದಂಡನೆ ಮಾಡುವಂತದ್ದನ್ನು ತ್ವರಿತವಾಗಿ ನಿಲ್ಲಿಸಬೇಕು. ಸಾರಿಗೆ ನೌಕರರ ನಿಗಮಗಳನ್ನು ಒಳಗೊಂಡಂತೆ ನೇಮಕಾತಿಗೆ ಸಂಬಂಧಿಸಿದಂತೆ ತಕ್ಷಣವೇ ಆದೇಶ ಹೊರಡಿಸಬೇಕು. ವರ್ಗಾವಣೆ ಇತ್ಯಾದಿ ದೋಷಗಳು ಅಂತ ಹೇಳಿ ಇಟ್ಟುಕೊಂಡಿರುವ ಪೆಂಡಿಂಗ್ ಅನ್ನು ಕ್ಲಿಯರ್ ಮಾಡಬೇಕು. ನನ್ನನ್ನು ಒಳಗೊಂಡಂತೆ ಸಾಕಷ್ಟು ಕ್ರಿಮಿನಲ್ ಕೇಸ್ ಗಳನ್ನು ಬುಕ್ ಮಾಡಿದ್ದೀರಿ. ನಾನು ಮತ್ತು ಸಾರಿಗೆ ನೌಕರರು ಮಾಡಿದ ಅಪರಾಧಗಳೇನು..? ಸತ್ಯಾಗ್ರಹ ಮಾಡಿದ್ದು ತಪ್ಪಾ, ಅರೆ ಹೊಟ್ಟೆ ಮಾಡುತ್ತಿದ್ದೀರಿ ಎಂಬುದು ತಪ್ಪಾ..?ಕೇಳಿದ್ದು ತಪ್ಪಾ..? ನಾವೂ ಕಳಕಳಿಯಿಂದ ಹೇಳುತ್ತಿದ್ದೇವೆ. ಎಲ್ಲಾ ಕೇಸ್ ಗಳು ವಿತ್ ಡ್ರಾ ಆಗಬೇಕು, ನೌಕರರು ಕೆಲಸಕ್ಕೆ ಹಾಜರಾಗಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.