ರಾಮನಗರ: ಸಂಸದೆ ಸುಮಲತಾ ಅವರು ಬಿಜೆಪಿಗೆ ಬಂದರೆ ಸ್ವಾಗತ ಅಂತ ಸಿ ಪಿ ಯೋಗೀಶ್ವರ್ ಈಗಾಗಲೇ ಸಾಕಷ್ಟು ಬಾರಿ ಹೇಳಿದ್ದರು. ಭೇಟಿ ಕೂಡ ಮಾಡಿದ್ದರು. ಈ ಬಗ್ಗೆ ಮಾತನಾಡಿರುವ ಸಿಪಿ ಯೋಗೀಶ್ವರ್,ಮದುವೆ ಕಾರ್ಯಕ್ರಮವೊಂದರಲ್ಲಿ ಭೇಟಿ ಮಾಡಿದ್ದೆ. ಅವತ್ತು ಸಿಎಂ ಕೂಡ ಇದ್ದರು. ಪಕ್ಷಕ್ಕೆ ನಾವೂ ಕೂಡ ಆಹ್ವಾನ ಮಾಡಿದ್ದೇವೆ ಇಲ್ಲ ಅಂತ ಅಲ್ಲ. ತೀರ್ಮಾನ ಅವರಿಗೆ ಬಿಟ್ಟದ್ದು. ಪಕ್ಷಕ್ಕೆ ಸಪೋರ್ಟ್ ಮಾಡಿ ಎಂದು ಕೇಳಿದ್ದೇವೆ. ಅವರ ಗೆಲುವಿಗೂ ನಮ್ಮ ಪಕ್ಷ ಸಾಕಷ್ಟು ಸಹಾಯ ಮಾಡಿತ್ತು. ಮಂಡ್ಯದಲ್ಲಿ ಮುಂದಿನ ದಿನಗಳಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲುತ್ತಾರೆ. ಆಗಾಗಿ ಒಂದು ತೀರ್ಮಾನ ಮಾಡಿ ಅಂತ ಹೇಳಿದ್ದೇವೆ.
ಕೂಸು ಹುಟ್ಟುವುದಕ್ಕು ಮುನ್ನ ಕುಲಾವಿ ಹೊಲೆಸಿದಂತೆ ಆಗುತ್ತೆ. ಅವರೆ ಇನ್ನು ಬಂದಿಲ್ಲ ಎಂದು ಸುಮಲತಾ ಬಿಜೆಪಿಗೆ ಬರುವ ಬಗ್ಗೆ ಮಾತನಾಡಿದ್ದು, ಅಭಿಷೇಕ್ ಗೆ ಟಿಕೆಟ್ ಕೊಡುವ ಬಗ್ಗೆಯೂ ಸಿ ಪಿ ಯೋಗೀಶ್ವರ್ ಮಾತನಾಡಿದ್ದಾರೆ. ಸಮಾಜಕ್ಕೆ ಅನುಕೂಲವಾಗುವಮನತ, ಸಮಾಜಕ್ಕಾಗಿ ಕೆಲಸ ಮಾಡುವಙತ ಪ್ರಮುಖರನ್ನ ಪಕ್ಷಕ್ಕೆ ಆಹ್ವಾನ ಮಾಡುತ್ತೇವೆ. ಅದು ನಮ್ಮ ಕರ್ತವ್ಯ. ಒಂದಷ್ಟು ಜನರನ್ನು ಗುರುತಿಸಿ ಆಹ್ವಾನ ಮಾಡಿದ್ದೇವೆ. ಅವರು ಏನು ತೀರ್ಮಾನ ಮಾಡುತ್ತಾರೆ ನೋಡಬೇಕು ಎಂದಿದ್ದಾರೆ.
ಹಳೇ ಮೈಸೂರು ಭಾಗದ ಜವಬ್ದಾರಿ ಬಗ್ಗೆ ಮಾತನಾಡಿ, ಇದು ಸಾಮೂಹಿಕ ಜವಬ್ದಾರಿ. ನಾನೇನು ಆಪರೇಷನ್ ಎಕ್ಸ್ ಪರ್ಟ್ ಏನು ಅಲ್ಲ. ನಾನು ಇಲ್ಲಿಯ ಸ್ಥಳೀಯ ಆಗಿರೋದ್ರಿಂದ ಹೆಚ್ಚಿನ ಆದ್ಯತೆ ಸಿಗುತ್ತೆ ಅಷ್ಟೆ. ವೈಯಕ್ತಿಕವಾದ ಜವಬ್ದಾರಿಯಲ್ಲ ಅದು. ಮುಂದಿನ ಚುನಾವಣೆಗೆ ಗೆಲುವಿಗೆ ಏನೆಲ್ಲಾ ಮಾಡಬೇಕು ಎಂಬುದನ್ನು ಮಾಡ್ತಾ ಇದ್ದೀವಿ. ಪಕ್ಷದ ಕಾರ್ಯಕರ್ತನಾಗಿ ನಾನು ಹೆಚ್ಚು ಕೆಲಸ ಮಾಡುತ್ತಿದ್ದೇನೆ ಎಂದಿದ್ದಾರೆ.