ಹಾಸನ: ಜಿಲ್ಲೆಯಲ್ಲಿ ಸುದ್ದಿಗೋಷ್ಟಿ ನಡೆಸಿದ ಮಾಜಿ ಸಚಿವ ಜೆಚ್ ಡಿ ರೇವಣ್ಣ ಕಾಂಗ್ರೆಸ್ ಹಾಗೂ ಬಿಜೆಪಿ ಮೇಲೆ ಕಿಡಿಕಾರಿದ್ದಾರೆ. ಇದೇ ವೇಳೆ ಸಚಿವ ಅಶ್ವತ್ಥ್ ನಾರಾಯಣ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಶಿಕ್ಷಣ ಕ್ಷೇತ್ರದಲ್ಲಿ ಬಹಳ ಕ್ರಾಂತಿ ಮಾಡುತ್ತಾರೆ ಎಂದುಕೊಂಡಿದ್ದೆ ಎಂದು ವ್ಯಂಗ್ಯವಾಡಿದ್ದಾರೆ.

ಶಿಕ್ಷಣ ಸಚಿವರ ಬಗ್ಗೆ ನಮಗೆ ಗೌರವವಿದೆ. ಬಿಜೆಪಿ ಐದು ವರ್ಷ ಅಧಿಕಾರದಲ್ಲಿತ್ತು. ಆದರೆ ಹಾಸನಕ್ಕೆ ಒಂದು ಲ್ಯಾಬ್ ಕೂಡ ಕೊಟ್ಟಿಲ್ಲ. ನೈತಿಕತೆ ಇದ್ದರೆ ಈ ಬಗ್ಗೆ ಹೇಳಲಿ. ಸಮಯ ಬಂದಾಗ ಇವರ ಹಗರಣಗಳ ಬಗ್ಗೆ ಹೇಳುತ್ತೇನೆ. ನಾಚಿಕೆಯಾಗಬೇಕು ಅವರಿಗೆ.

ನಾನು ಸಾಮಾನ್ಯ ರೈತನ ಮಗ. ನಾವಂತೂ ಯಾವ ಶಿಕ್ಷಣ ಸಂಸ್ಥೆಯನ್ನು ನಡೆಸಿಲ್ಲ. ಖಾಸಗಿಯವರ ಜೊತೆ ಶಾಮೀಲಾಗಿದ್ದಾರೆ. ಇಲ್ಲಿಗೆ ಬಂದು ನೋಡಲು ಹೇಳಿ ಶಿಕ್ಷಣ ಎಂದರೆ ಏನು ಅಂತ ಗೊತ್ತಾಗುತ್ತದೆ ಶಿಕ್ಷಣ ಮಂತ್ರಿಗೆ. ನಾನು ಹಳ್ಳಿ ಗಮಾಡು ಆದರೆ ಒಂದನೇ ಸ್ಥಾನಕ್ಕೆ ತೆಗೆದುಕೊಂಡು ಹೋಗಿದ್ದೇನೆ. ಅಶ್ವತ್ಥ್ ನಾರಾಯಣ್ ಅವರೇ ಖಾಸಗಿ ಗುಲಾಮರಾಗಿ ಅಧಿಕಾರ ನಡೆಸಬೇಡಿ. ಸ್ವಲ್ಪ ಹಾಸನ ಜಿಲ್ಲೆಯನ್ನು ನೋಡಿ ಎಂದಿದ್ದಾರೆ.


