ಬೆಂಗಳೂರು: ಕಳೆದ ಎರಡು ದಿನದಿಂದ ರಾಜ್ಯದ ಜನರಿಗೆ ಮತ್ತೆ ಆತಂಕ ಶುರುವಾಗುತ್ತು. ಕೊರೊನಾ ಸಂಕಷ್ಟದಿಂದ ಸಹಜ ಸ್ಥಿತಿಯತ್ತ ಈಗ ನರಳುತ್ತಿರುವಾಗಲೇ ಮತ್ತೆ ಕಠಿಣ ನಿಯಮಗಳು ಭಯ ಹುಟ್ಟಿಸಿದ್ದವು. ಕೊರೊನಾ ಹೆಚ್ಚಾಗುತ್ತಿದೆ ಹೀಗಾಗಿ ಮತ್ತೆ ಕಠಿಣ ನಿಯಮ ಜಾರಿಯಾಗುತ್ತೆ ಎಂಬ ವಿಚಾರ ಜೋರು ಚರ್ಚೆಯಾಗುತ್ತಿತ್ತು. ಇದೀಗ ಈ ಸಂಬಂಧ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಮಾತನಾಡಿ ಕಠಿಣ ನಿಯಮ ಇಲ್ಲ ಎಂದಿದ್ದಾರೆ.

ಕೊರೊನಾ ಹೆಚ್ಚಾಗುತ್ತಿರುವ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಿದ್ದಾರೆ. ಪರಿಸ್ಥಿತಿ ಅವಲೋಕಿಸಿದ್ದಾರೆ. ಸಭೆ ಬಳಿಕ ಮಾತನಾಡಿದ ಸಿಎಂ ಬೊಮ್ಮಾಯಿ ಅವರು, ರಾಜ್ಯದಲ್ಲಿ ಸದ್ಯಕ್ಕೆ ಕಠಿಣ ನಿಯಮ ಜಾರಿ ಇಲ್ಲ. ಅನಾವಶ್ಯಕವಾಗಿ ಯಾವುದೇ ನಿರ್ಬಂಧ ಬೇಡ. ಅಗತ್ಯವಿರುವೆಡೆ ನಿರ್ಬಂಧ ಹೇರಿಕೆ ಮಾಡಿ ಎಂದು ಮೋದಿ ತಿಳಿಸಿದ್ದಾರೆಂದು ಹೇಳಿದ್ದಾರೆ.

ಇನ್ನು ಪ್ರಧಾನಿ ಮೋದಿಯವರು ನಾಲ್ಕು ಸೂತ್ರ ಅನುಸರಿಸಲು ಹೇಳಿದ್ದಾರೆ. ಅವುಗಳೆಂದರೆ ಟೆಸ್ಟ್, ಟ್ರೀಟ್, ಟ್ರ್ಯಾಕ್, ಲಸಿಕೆ ಸೂತ್ರ. ಸಾರ್ವಜನಿಕರು ಮಾಸ್ಕ್ ಕಡ್ಡಾಯವಾಗಿ ಹಾಕಿಕೊಳ್ಳಬೇಕು. ಹಾಗೇ ಲಸಿಕೆಯ ವೇಗವನ್ನು ಹೆಚ್ಚಿಸಲು ಸೂಚಿಸಿದ್ದಾರೆ ಎಂದಿದ್ದಾರೆ.


