ನವದೆಹಲಿ: ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಪ್ರಶಾಂತ್ ಕಿಶೋರ್ ನಿಲ್ಲುತ್ತಾರೆ ಎನ್ನಲಾಗುತ್ತಿತ್ತು. ಆದರೆ ಇದೀಗ ಅವರು ಕಾಂಗ್ರೆಸ್ ಸೇರುವುದಿಲ್ಲ ಎಂಬುದು ಖಾತರಿಯಾಗಿದೆ. ಈ ಸಂಬಂಧ ಕಾಂಗ್ರೆಸ್ ವಕ್ತಾರ ಮಾಹಿತಿ ತಿಳಿಸಿದ್ದಾರೆ.
2024ರ ಲೋಕಸಭಾ ಚುನಾವಣೆಯಲ್ಲಿ ಹೇಗಾದರೂ ಮಾಡಿ ಬಿಜೆಪಿಯನ್ನು ಮಣ್ಣುಮುಕ್ಕಿಸುವ ತಂತ್ರ ಕಾಂಗ್ರೆಸ್ ನದ್ದಾಗಿತ್ತು. ಹೀಗಾಗಿಯೇ ಪಕ್ಷಕ್ಕೆ ಪ್ರಶಾಂತ್ ಕಿಶೋರ್ ಅವರನ್ನು ಸೇರಿಸಿಕೊಳ್ಳುವ ಮಹತ್ತರ ಯೋಜನೆ ಹಾಕಿಕೊಂಡಿದ್ದರು. ಸಭೆ ಮೇಲೆ ಸಭೆ ನಡೆದವು. ಪಕ್ಷದಲ್ಲಿ ಕೆಲ ಮುಖಂಡರ ಭಿನ್ನಾಭಿಪ್ರಾಯದಿಂದಲೂ ಪಿಕೆ ಕಾಂಗ್ರೆಸ್ ಸೇರುವುದು ತಡವಾಗುತ್ತಿತ್ತು.
ಪ್ರಶಾಂತ್ ಕಿಶೋರ್ ನೀಡಿದ ಎಲ್ಲಾ ಐಡಿಯಾಗಳು ವರ್ಕೌಟ್ ಆಗಿತ್ತು. ಬಿಹಾರದಲ್ಲಿ ನಿತೀಶ್ ಕುಮಾರ್, ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ, ನರೇಂದ್ರ ಮೋದಿಯವರಿಗೂ ಪ್ರಶಾಂತ್ ಕಿಶೋರ್ ಚುನಾವಣಾ ತಂತ್ರವನ್ನು ನೀಡಿದ್ದರು. ಈ ಕಾರಣದಿಂದಾಗಿಯೇ ಕಾಂಗ್ರೆಸ್ ಅತಿರಥ ಪ್ರಯತ್ನದ ನಡುವೆಯೂ ಫೇಲ್ ಆಗಿದೆ. ಆದರೆ ಸರಣಿ ಸಭೆಗಳ ಬಳಿಕವೂ ಯಾಕೆ ರಿಜೆಕ್ಟ್ ಮಾಡಿದ್ದಾರೆಂಬ ಮಾಹಿತಿ ಇನ್ನು ಸಿಕ್ಕಿಲ್ಲ.