ಚಿಕ್ಕಮಗಳೂರು: ಹೆಜ್ಜೇನು ಕಚ್ಚಿ ಕಾಫಿ ಮಂಡಳಿ ಅಧ್ಯಕ್ಷ ನಾಗೇಗೌಡ ಸಾವನ್ನಪ್ಪಿದ್ದಾರೆ. 74 ವರ್ಷದ ಬೋಜೇಗೌಡ ಕೃಷ್ಣಗಿರಿ ಕಾಫಿ ಎಸ್ಟೇಟ್ ನಲ್ಲಿ ಅಸುನೀಗಿದ್ದಾರೆ.
ನಾಗೇಗೌಡ ಅವರು ಕಾಫಿ ಎಸ್ಟೇಟ್ ಗೆ ಹೋಗಿದ್ದಾಗ ಈ ಘಡನೆ ನಡೆದಿದೆ.ಸಾವಿರಾರು ಹೆಜ್ಜೆನುಗಳು ಒಟ್ಟಿಗೆ ದಾಳಿ ನಡೆಸಿವೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಮಾರ್ಗಮಧ್ಯೆದಲ್ಲಿಯೇ ಸಾವನ್ನಪ್ಪಿದ್ದಾರೆ.
ಕಳೆದ ತಿಂಗಳು ಮಾರ್ಚ್ ನಲ್ಲಿ ಬೋಜೇಗೌಡರ ಕಾಫಿ ಮಂಡಳಿ ಅಧ್ಯಕ್ಷಗಿರಿ ಅವಧಿ ಕೊನೆಗೊಂಡಿತ್ತು. ಎರಡು ಬಾರಿ ಬಿಜೆಪಿ ಜಿಲ್ಲಾ ಅಧ್ಯಕ್ಷರಾಗಿದ್ದ ಎಂ.ಎಸ್. ಭೋಜೇಗೌಡ ಅವರು ಒಂದು ಬಾರಿ ಜನತಾ ಪಕ್ಷದ ಜಿಲ್ಲಾಧ್ಯಕ್ಷರಾಗಿದ್ದರು. ಒಮ್ಮೆ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.