ಬೆಂಗಳೂರು: ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದೆ. ಈಗಾಗಲೆ ಪಕ್ಷಗಳು ಎಲ್ಲಾ ರೀತಿಯ ತಯಾರಿಯನ್ನು ಮಾಡಿಕೊಳ್ಳುತ್ತಿರುವಾಗಲೇ ಮತ್ತೆ ಎಲ್ಲರ ಗಮನ ಹೋಗಿರುವುದು ಸಿದ್ದರಾಮಯ್ಯ ಕಡೆಗೆ. ಈ ಬಾರಿ ಎಲ್ಲಿ ಸ್ಪರ್ಧೆ ಮಾಡುತ್ತಾರೆ ಎಂಬುದು.
ಸಿದ್ದರಾಮಯ್ಯ ಸ್ಪರ್ಧೆ ಬಗ್ಗೆಯೇ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಅವರಿಗಾಗಿ ಕ್ಷೇತ್ರ ಬಿಟ್ಟುಕೊಡಲು ಸಾಕಷ್ಟು ಬೆಂಬಲಿಗರು ಸಿದ್ಧವಾಗಿದ್ದಾರೆ. ಆದರೆ ಅವರ ಒಲವಿರುವುದು ಮಾತ್ರ ಬಾದಾಮಿ ಕ್ಷೇತ್ರದ ಮೇಲೆ. ಹೀಗಾಗಿ ಸಿದ್ದರಾಮಯ್ಯ ಅವರ ಸ್ಪರ್ದೆ ಎಲ್ಲಿ ಎಂಬುದೇ ಎಲ್ಲರ ಚರ್ಚೆಯಾಗಿದೆ. ಇನ್ನು ಕೊಪ್ಪಳದಿಂದ ಸ್ಪರ್ಧೆ ಮಾಡುವುದಕ್ಕೂ ಒತ್ತಡ ಹಾಕಲಾಗುತ್ತಿದೆ. ಈ ಮುಂಚೆ ಕೂಡ ಒಮ್ಮೆ ಕರೆಯಲಾಗಿತ್ತು. ಇದೀಗ ಮತ್ತೊಮ್ಮೆ ಕೊಪ್ಪಳದಿಂದಲೇ ಸ್ಪರ್ಧೆಗೆ ಆಹ್ವಾನ ಬಂದಿದೆ. ಹೀಗಾಗಿ ಬಾದಾಮಿಯ ಆಸೆ ಬಿಟ್ಟು ಸಿದ್ದರಾಮಯ್ಯ ಅವರು ಕೊಪ್ಪಳದಲ್ಲಿ ನಿಲ್ಲುತ್ತಾರಾ ಎಂಬ ಪ್ರಶ್ನೆ ಎದ್ದಿವೆ.
ಸಿದ್ದರಾಮಯ್ಯ ಅವರ ಆಪ್ತರಾಗಿರುವ ಕುಷ್ಟಗಿ ಶಾಸಕ ಅಮರೇಗೌಡ ಸಿದ್ದರಾಮಯ್ಯ ಅವರಿಗೆ ಆಹ್ವಾನ ನೀಡಿದ್ದಾರೆ ಎನ್ನಲಾಗಿದೆ. ಮೊದಲು ಕ್ಷೇತ್ರದ ಹುಡುಕಾಟ ಬಿಡಿ, ಕೊಪ್ಪಳಕ್ಕೆ ಬಂದುಬಿಡಿ ಎಂದಿದ್ದಾರಂತೆ. ಯಾಕೆಂದರೆ ಈ ಹಿಂದೆ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಸಿದ್ದರಾಮಯ್ಯ ಅವರಿಗೆ ಕುಷ್ಟಗಿಯಿಂದ ಹೆಚ್ಚು ಮತಗಳು ಬಂದಿದ್ದವು. ಹೀಗಾಗಿ ಮತ್ತೆ ಕೊಪ್ಪಳದಿಂದಲೇ ಸ್ಪರ್ಧೆಗೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.