ಬೆಂಗಳೂರು: ಪಿಎಸ್ಐ ಅಕ್ರಮದ ಬಗ್ಗೆ ಇಂದು ಶಾಸಕ ಪ್ರಿಯಾಂಕ್ ಖರ್ಗೆ ಆಡಿಯೋವೊಂದನ್ನು ರಿಲೀಸ್ ಮಾಡಿದ್ದಾರೆ. ಆ ಆಡಿಯೋದಲ್ಲಿ ಹಗರಣದ ಬಗ್ಗೆಯೂ ಚರ್ಚೆಯಾಗಿದೆ. ಈ ಸಂಬಂಧ ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದು, ಅದೆಲ್ಲೆವು ತನಿಖೆಯಾಗುತ್ತೆ. ಆ ಆಡಿಯೋದಲ್ಲಿ ಏನಿದೆ ಎಂಬುದನ್ನು ನಾನು ನೋಡಿಲ್ಲ. ಆಡಿಯೋದಲ್ಲಿ ಇಬ್ಬರ ನಡುವೆ ಮಾತುಕತೆಯಾಗಿದೆ. ಆ ಇಬ್ಬರು ಯಾರು..? ಅವರ ಅರ್ಹತೆ ಏನು..? ಎಬಿಲಿಟಿ ಏನು ಎಲ್ಲವೂ ಕೂಡ ತನಿಖೆಯಲ್ಲಿ ಗೊತ್ತಾಗಲಿದೆ.
ಶಾಸಕರ ಪ್ರಿಯಾಂಕ ಖರ್ಗೆ ರಿಲೀಸ್ ಮಾಡಿರುವ ಆಡಿಯೋವನ್ನು ತನಿಖೆಗೆ ಒಳಪಡಿಸುತ್ತೇವೆ. ಯಾರೇ ತಪ್ಪತಸ್ಥರಿದ್ದರು ಕೂಡ ಕ್ರಮ ತೆಗೆದುಕೊಳ್ಳುತ್ತೇವೆ. ಆ ಆಡಿಯೋ ಬಗ್ಗೆ ವಿಶೇಷ ತನಿಖಾ ತಂಡದಿಂದ ತನಿಖೆ ನಡೆಸುತ್ತೇವೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.
ಇನ್ನು ಬೆಂಗಳೂರಿನಲ್ಲಿ ಬಾಂಬ್ ಕರೆ ಬಗ್ಗೆ ಮಾತನಾಡಿ, ಈ ಬಗ್ಗೆ ಕಮಿಷನರ್ ಹತ್ತಿರ ಮಾತನಾಡುತ್ತೇನೆ. ಮಾತನಾಡಿ ಏನು ವಿಚಾರ ಎಲ್ಲವನ್ನು ತಿಳಿಯುತ್ತೇನೆ. ಆಗಾಗ ಶಾಂತಿ ಕದಡೋದಕ್ಕೆ ಈ ರೀತಿಯ ಪ್ರಯತ್ನಗಳು ಆಗುತ್ತವೆ. ಯಾವುದನ್ನು ಹಗುರವಾಗಿ ತೆಗೆದುಕೊಳ್ಳಲ್ಲ ಇದನ್ನು ಗಂಭೀರವಾಗಿ ತೆಗೆದುಕೊಂಡಿದ್ದೇನೆ. ತನಿಖೆ ಮಾಡುತ್ತೇವೆ. ಇ ಮೇಲೆ ನಿಂದ ಬಂದಿದೆ. ಟ್ರ್ಯಾಸ್ ಮಾಡಿ ತನಿಖೆ ಮಾಡುತ್ತೇವೆ. ಖಂಡಿತ ಎಲ್ಲೂ ಹೋಗಲ್ಲ. ಯಾವ ದೇಶದಿಂದ ಆಗಿದೆ ಎಂಬುದು ತಿಳಿಯುತ್ತದೆ. ಕೆಲವು ಸಂದರ್ಭದಲ್ಲಿ ಆ ದೇಶದ ಅಧಿಕಾರಗಳಿಗೆ ತಿಳಿಸಿ, ಅರೆಸ್ಟ್ ಕೂಡ ಮಾಡಿಸಿದ್ದೇವೆ. ಮುಂದೆಯೂ ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.