ಬೀದರ್: ಏನ್ ಆದರೂ ಹಗುರವಾಗಿ ಮಾತನಾಡಲಿ ನಾನು ಆ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ. ಕಾರಣ ನಾನು ಕಳೆದ ಚುನಾವಣೆಯಲ್ಲಿ ರೈತರ ಸಾಲಮನ್ನಾದ ಬಗ್ಗೆ ಮಾತನಾಡಿದಾಗ ಇವ್ನು ಎಲ್ಲಿ ಸಿಎಂ ಆಗುತ್ತಾನೆ, ಸಾಕಮನ್ನಾ ಮಾಡೋಕೆ ದುಡ್ಡೆಲ್ಲಿಂದ ತರ್ತಾನೆ ಅಂತೆಲ್ಲ ಹೇಳಿದ್ದರು. ಅವರು 13 ಅವಧಿಗೆ ಬಜೆಟ್ ಮಾಡಿದ್ದರು ಅಲ್ವಾ. ರಾಹುಲ್ ಗಾಂಧಿ ಬಂದು ಹೆರಳಯವವರೆಗೆ ರೈತರ ಸಾಲ ಮನ್ನಾ ಮಾಡಿರಲಿಲ್ಲ. ಅವರ ಡೈರೆಕ್ಷನ್ ಕೊಟ್ಮೇಲೆ ಸಾಲ ಮನ್ನಾ ಮಾಡಿದ್ದು. ಆಗಲೂ 50% ಸಾಲ ತೀರಿಸಿದ್ದು ನಾನು. ಇವತ್ತು ಜನತಾ ಜಲಧಾರೆ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ. ಐದು ವರ್ಷದ ಸರ್ಕಾರದ ಅವಧಿಯಲ್ಲಿ ನೀವೇನು ಕೊಟ್ರಿ ಅಂತ ಸಿದ್ದರಾಮಯ್ಯ ಅವರಿಗೆ ಮಾಜಿ ಸಿಎಂ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
40 ವರ್ಷ ನಡೆಸಿದ್ದೀರಲ್ಲ ಅವತ್ತು ನೀರಾವರಿ ಯೋಜನೆಗೆ ಏಬು ಮಾಡಿದ್ದೀರಿ. ರೈತರು ಇವತ್ತು ಪ್ರತಿಭಟನೆ ಮಾಡುತ್ತಿದ್ದಾರೆ. ಭೂಸ್ವಾಧೀನದ ಹಣ ಬಂದಿಲ್ಲ ಅಮನತ. ಐದು ವರ್ಷದ ಸರ್ಕಾರ ಏನು ಕೊಟ್ಟಿದ್ದೀರಿ. ರೈತರಿಗೆ ಹಣ ಕೊಡಲು ನಿಮ್ ಹತ್ರ ದುಡ್ಡಿಲ್ಲ. ಅದೇ ಗುತ್ತಿಗೆದಾರರಿಗೆ ಹಣ ಕೊಡುವುದಕ್ಕೆ ಕಾಂಪಿಟೇಷನ್ ಮೇಲೆ ಕೊಡುತ್ತೀರಿ. ಇದು ನಿಮ್ಮ ನಡವಳಿಕೆ. ಅವರು ಏನು ಬೇಕಾದರೂ ಮಾತನಾಡಲಿ ನನ್ನ ಸಂಕಲ್ಪ ನಮ್ಮ ನಾಡಿನ ಜನತೆಗಾಗಿ ಎಂದಿದ್ದಾರೆ.
ಧರ್ಮದ ಹೆಸರಿನ ರಾಜಕಾರಣವನ್ನು ನಿಲ್ಲಿಸಿ ಅಂತ ಮೊದಲ ದಿನದಿಂದ ಹೇಳುತ್ತಾ ಇದ್ದೇನೆ. ರಾಮನ ಭಜನೆ ಮಾಡುತ್ತಿರಲ್ಲ ರಾಮ ಈ ಕೆಲಸ ಮಾಡಲು ಹೇಳಿದ್ದಾನಾ..? ನಿಮ್ಮ ಮಾನವೀಯತೆಯನ್ನೆ ಕಳೆದುಕೊಂಡಿದ್ದೀರಿ ಉಳಿದದ್ದು ಇನ್ನೇನು ನಡೆಸುತ್ತೀರಿ. ನಾನು ಹೇಳಿದ ಮೇಲೆ ಜೀಪ್ ಮೇಲೆ ಹತ್ತಿ ಕೂಗಿದವನ ಅರೆಸ್ಟ ಆಗಿದ್ದು ಅಂತ ಕಿಡಿಕಾರಿದ್ದಾರೆ.