ಹಾಸನ: ಜಿಲ್ಲೆಯಲ್ಲಿ ಜಲಧಾರೆ ಕಾರ್ಯಕ್ರಮದ ಸಮಾವೇಶ ನಡೆಸಿ ಮಾತನಾಡಿದ ಸಿಎಂ ಇಬ್ರಾಹಿಂ, ಜೆಡಿಎಸ್ ನಿಖಿಲ್, ಸೂರಜ್ ಸ್ವತ್ತಲ್ಲ, ರಾಜ್ಯದ ಜನರ ಸ್ವತ್ತು. ಹಳೇ ಭೂಕೈಲಾಸವನ್ನು ಹೊಸ ಪ್ರಿಂಟ್ ಹಾಕಿಕೊಂಡು ಹೊರಟಿದ್ದೇವೆ. ಹಾಸನ ಜಿಲ್ಲೆ ಹೋರಾಟ ಮಾಡುವ ಗಂಡಸರನ್ನು ಹುಟ್ಟಿಸಿರುವ ಜಿಲ್ಲೆ. ಬಿಜೆಪಿ, ಕಾಂಗ್ರೆಸ್ ಎಷ್ಟೇ ಕುಣಿದಾಡಲಿ. ಮುಂದೆ ಅಧಿಕಾರ ಮಾಡುವುದು ಜೆಡಿಎಸ್ ಪಕ್ಷವೇ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಹೇಳಿದ್ದಾರೆ.
ನಾನು ಕೂಡ ಕೆಲ ಬಿಜೆಪಿ ನಾಯಕರ ಜೊತೆ ಒಡನಾಟ ಇಟ್ಟುಕೊಂಡಿದ್ದೇನೆ. ಆರ್ ಎಸ್ ಎಸ್ ನಲ್ಲೂ ಕೆಲ ಒಳ್ಳೆಯವರಿದ್ದಾರೆ. ಅಂದಿನ ಬಿಜೆಪಿ ನಾಯಕರ ಗುಣ ಇಂದು ಇದೆಯಾ ಎಂದು ಪ್ರಶ್ನಿಸಿದ್ದಾರೆ. ಮಾಜಿ ಪ್ರಧಾನಿ ದೇವೆಗೌಡ ಅವರಿಗೆ ವಯಸ್ಸಾಗಿರಬಹುದು. ಆದರೆ ಅವರ ತಲೆ 30 ವರ್ಷದ ಹುಡುಗನಂತೆ ಯೋಚಿಸುತ್ತದೆ. ನಾನು ಜೇವಲ ಮುಸ್ಲಿಂ ನಾಯಕನಲ್ಲ. ನಾನು ಈ ರಾಜ್ಯದ ಜನರ ದಾಸ ಎಂದಿದ್ದಾರೆ.
ಇನ್ನು ಈಶ್ವರಪ್ಪ ಬಗ್ಗೆ ಮಾತನಾಡಿ, 40% ಕಮಿಷನ್ ತೆಗೆದುಕೊಂಡು ಆ ಸಂತೋಷ್ ಪಾಟೀಲ್ ಸಾವಿಗೆ ಕಾರಣರಾದ್ರೂ. ಈಶ್ವರಪ್ಪ ಮನೆಯಲ್ಲಿ ದುಡ್ಡು ಎಣಿಸುವ ಮಷಿನ್ ಇಟ್ಟುಕೊಂಡಿದ್ದಾರೆ. ಅವನ ಮನೆಗೆ ಹಿಂದೂ ಮುಖಂಡ ಮುತಾಲಿಕ್ ಹೋಗಿದ್ದಾನೆ. ದೇಶದಲ್ಲಿ ಎಲ್ಲಾ ವಸ್ತುಗಳ ಬೆಲೆ ಏರಿಕೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.